ಮತ್ತೊಂದೆಡೆ, ವಕೀಲರ ಸಂಘವು ಟ್ರಸ್ಟ್‌ನ ಆಡಳಿತ ಮಂಡಳಿಯಲ್ಲಿ ಗುರುತಿಸಿಕೊಂಡಿರುವ ಚಂಪತ್ ರಾಯ್, ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ವಿರುದ್ಧವೂ ತಿರುಗಿಬಿದ್ದಿದೆ. ಈ ಮೂವರ ಹೆಸರು ಸದ್ಯಕ್ಕೆ ಎಫ್‌ಐಆರ್‌ನಲ್ಲಿ ಇಲ್ಲದಿದ್ದರೂ, ಮಂದಿರದ ಆಡಳಿತದ ಜವಾಬ್ದಾರಿ ಇವರದ್ದೇ ಆಗಿರುವುದರಿಂದ ಇವರು ಮೂರು ದಿನಗಳ ಒಳಗಾಗಿ ಅಯೋಧ್ಯೆಯನ್ನು ತೊರೆಯಬೇಕು ಎಂದು ವಕೀಲರು ಗಡುವು ನೀಡಿದ್ದಾರೆ. ಇಲ್ಲದಿದ್ದರೆ ಇಡೀ ಅಯೋಧ್ಯೆ ನಗರವನ್ನು ಬಂದ್ ಮಾಡಿ, ಯಾರೂ ನಗರ ಪ್ರವೇಶಿಸದಂತೆ ತಡೆಯೊಡ್ಡಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ವಕೀಲರು ಎಚ್ಚರಿಸಿದ್ದಾರೆ.