Meghalaya honeymoon Murder Case; ರಘುವಂಶಿ ಕುಟುಂಬದಲ್ಲಿ ಮಗು ಜನನ,'ರಾಜಾ ಇಸ್​ ಬ್ಯಾಕ್'ಎಂದು ಸಂಭ್ರಮ

Meghalaya honeymoon Murder
Meghalaya honeymoon Murder
Published on

ಪ್ರಮುಖ ಮುಖ್ಯಾಂಶಗಳು

  • ನವಜಾತ ಶಿಶುವಿಗೆ 'ರಾಜಾ' ಎಂದೇ ನಾಮಕರಣ ಮಾಡಿದ ಕುಟುಂಬಸ್ಥರು
  • ಮೇಘಾಲಯದಲ್ಲಿ ಪತ್ನಿ ಸೋನಮ್​ನಿಂದ ಹತ್ಯೆಯಾಗಿದ್ದ ರಾಜಾ ರಘುವಂಶಿ
  • ರಾಜಾರ ಅಣ್ಣ ಸಚಿನ್​ಗೆ ಗಂಡು ಮಗು ಜನನ, ರಘುವಂಶಿ ಕುಟುಂಬದಲ್ಲಿ ಸಂಭ್ರಮ
Meghalaya honeymoon Murder: 2025ರಲ್ಲಿ ಹನಿಮೂನ್​ಗೆ ತೆರಳಿದ್ದ ಸಂದರ್ಭದಲ್ಲಿ ಪತ್ನಿಯಿಂದಲೇ ಇಂದೋರ್​ನ ಉದ್ಯಮಿ ರಾಜಾ ರಘುವಂಶಿ ಮೇಘಾಲಯದಲ್ಲಿ ಹತ್ಯೆಗೊಳಗಾಗಿದ್ದರು. ಸದ್ಯ ಆ ಪ್ರಕರಣದ ನಂತರ ರಘುವಂಶಿ ಕುಟುಂಬದಲ್ಲಿ ದುಃಖವೇ ಕೂಡಿಕೊಂಡಿತ್ತು. ಸದ್ಯ ಅವರ ಅಣ್ಣನ ಪತ್ನಿಗೆ ಗಂಡು ಮಗು ಜನಿಸಿರುವ ಕಾರಣ ಸಂಭ್ರಮ ಮನೆ ಮಾಡಿದೆ.
ರಾಜಾ ರಘುವಂಶಿ ಅವರ ಅಣ್ಣ ಸಚಿನ್​ ರಘುವಂಶಿ ಪತ್ನಿಗೆ ಗಂಡು ಮಗು ಜನಿಸಿದೆ. ಪೋಷಕರು ಇದು ಮೊದಲ ಮಗ ರಾಜಾನ ಹೋಲಿಕೆಯೇ ಎಂದು ಮಗುವಿಗೆ ಮೃತರ ಹೆಸರನ್ನೇ ಇಟ್ಟು ಸಂಭ್ರಮಿಸಿದ್ದಾರೆ.

ರಾಜಾ ಎಂದು ಮಗುವಿಗೆ ನಾಮಕರಣ

ತಾಯಿ ಉಮಾ ರಘುವಂಶಿ ಹೇಳಿದ್ದಿಷ್ಟು, "ಹಿಂದೂ ಪಂಚಾಗದ ಪ್ರಕಾರ 2025ರಲ್ಲಿ ಏಕಾದಶಿ ತಿಥಿಯಂದು ಮಧ್ಯಾಹ್ನ 2:40ಕ್ಕೆ ರಾಜಾ ಹತ್ಯೆಯಾದ. ಅಚ್ಚರಿಯೆಂದರೆ, ಅದೇ ಸಮಯಕ್ಕೆ ನನ್ನ ಮೊಮ್ಮಗ ಜನಿಸಿದ್ದಾನೆ. ನನ್ನ ಮಗ ಮೊಮ್ಮಗನ ರೂಪದಲ್ಲಿ ಮರಳಿ ನಮ್ಮನ್ನು ಸೇರಿದ್ದಾನೆ. ಅವನೆಂದಿಗೂ ನಮ್ಮನ್ನು ಬಿಟ್ಟು ಹೋಗೋದಿಲ್ಲ" ಎಂದು ಭಾವುಕರಾಗಿದ್ದಾರೆ.
ರಾಜಾರ ಹತ್ಯೆ ಘಟನೆ ನಂತರ ದುಃಖದ ಮಡುವಿನಲ್ಲಿದ್ದ ಕುಟುಂಬದಲ್ಲಿ ಸದ್ಯ ಸಂಭ್ರಮ ಮನೆ ಮಾಡಿದೆ. ಸಚಿನ್​ ಅವರ ಮಗುವಿನ ಜಾತಕ ರಾಜಾ ರಘುವಂಶಿ ಜಾತಕಕ್ಕೆ ಹೋಲಿಕೆಯಾಗುತ್ತಿರುವುದಾಗಿ ಪುರೋಹಿತರು ತಿಳಿಸಿರುವ ಕಾರಣ, ನವಜಾತ ಶಿಶುವಿಗೆ ರಾಜಾ ಎಂತಲೇ ನಾಮಕರಣ ಮಾಡಲಾಗಿದೆ ಎಂದು ಹೇಳಲಾಗಿದೆ.

ಏನಿದು ಪ್ರಕರಣ?

ಕನ್ನಡದ ಬಾ ನಲ್ಲೆ ಮಧುಚಂದ್ರ ಸಿನಿಮಾವನ್ನೇ ಹೋಲುವಂತೆ 2025 ಮೇ 11ರಲ್ಲಿ ಮೇಘಾಲಯದಲ್ಲಿ ಕೊಲೆ ಪ್ರಕರಣ ನಡೆದಿತ್ತು. 2025ರ ಮೇ ತಿಂಗಳಲ್ಲಿ ರಾಜಾ ರಘುವಂಶಿ ಮತ್ತು ಸೋನಮ್​​ ಮದುವೆಯಾಗಿದ್ದರು. ಹನಿಮೂನ್​ಗಾಗಿ ಮೇಘಾಲಯಕ್ಕೆ ತೆರಳಿದ್ದರು. ಆದರೆ, ಈಗಾಗಲೇ ರಾಜ್​ ಕುಶ್ವಾಹಾ ಎಂಬುವವನ ಜೊತೆ ಪ್ರೇಮ ಸಂಬಂಧ ಹೊಂದಿದ್ದ ಸೋನಮ್​ ರಾಜಾರ ಹತ್ಯೆಗೆ ಸಂಚು ಹೂಡಿದ್ದಳು.
ಪ್ರಿಯಕರನ ಜೊತೆ ಸೇರಿ, ಸುಪಾರಿಕೊಟ್ಟು ಆತನನ್ನು ಕಣಿವೆಯೊಂದರಲ್ಲಿ ಕೊಂದು ಆಕೆ ನಾಪತ್ತೆಯಾಗಿದ್ದಳು. ಕೊಲೆ ಪ್ರಕರಣ ಎಲ್ಲೆಡೆ ಸುದ್ದಿಯಾಗುತ್ತಲೇ ಆತಂಕಕ್ಕೊಳಗಾದ ಆಕೆ ಉತ್ತರ ಪ್ರದೇಶದಲ್ಲಿ ಪೊಲೀಸರಿಗೆ ಶರಣಾಗಿದ್ದಳು. ಈ ಪ್ರಕರಣ ಇಡೀ ಭಾರತವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net