23 ವರ್ಷದ ಬೀಡ್ ಜಿಲ್ಲೆಯ ನಿವಾಸಿಧ್ಯಾನೇಶ್ವರ್ ಕೊಕಾಟೆ ಮೃತಪಟ್ಟಿರುವ ಯುವಕ ಎಂದು ಗುರುತಿಸಲಾಗಿದೆ. ಜ್ನಾನೇಶ್ವರ್ ತನ್ನ ಹಳ್ಳಿಯ ಸಮೀಪವೇ ಇದ್ದ ಯುವತಿಯೊಬ್ಬರನ್ನು ಪ್ರೇಮಿಸುತ್ತಿದ್ದನು. ಇಬ್ಬರು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ, ಆಕೆಯ ಪೋಷಕರು ನಿರಾಕರಿಸಿ, ಆತನಿಗೆ ಅವಮಾನಿಸಿದ್ದರು. ಇದನ್ನು ಸಹಿಸಲಾಗದೆ ನೊಂದು ಟೈರ್ ಶಾಪ್ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.