ಪ್ರಯಾಣಿಕರ ಕೀಳು ಬುದ್ಧಿಗೆ ಬೆಚ್ಚಿಬಿದ್ದ ರೈಲ್ವೆ ಇಲಾಖೆ: 4 ವರ್ಷದಲ್ಲಿ 104 ಕೋಟಿ ಮೌಲ್ಯದ ಬೆಡ್​ರೋಲ್​ ಕಳ್ಳತನ; ಇನ್ಮುಂದೆ 5 ವರ್ಷ ಶಿಕ್ಷೆ ಎಂದ Indian Railways

ರೈಲಿನಲ್ಲಿ ಪ್ರಯಾಣಿಕರ ಕೈಚಳಕಕ್ಕೆ ಬೆಚ್ಚಿಬಿದ್ದ ಭಾರತೀಯ ರೈಲ್ವೆ!
ರೈಲಿನಲ್ಲಿ ಪ್ರಯಾಣಿಕರ ಕೈಚಳಕಕ್ಕೆ ಬೆಚ್ಚಿಬಿದ್ದ ಭಾರತೀಯ ರೈಲ್ವೆ!
Published on

ಪ್ರಮುಖ ಮುಖ್ಯಾಂಶಗಳು

  • ರೈಲಿನಲ್ಲಿ ಪ್ರಯಾಣಿಕರ ಕೈಚಳಕಕ್ಕೆ ಬೆಚ್ಚಿಬಿದ್ದ ಭಾರತೀಯ ರೈಲ್ವೆ!
  • ಎಸಿ ಬೋಗಿಗಳಿಂದ ಬರೋಬ್ಬರಿ ₹104 ಕೋಟಿ ಮೌಲ್ಯದ ಬೆಡ್‌ಶೀಟ್, ದಿಂಬುಗಳನ್ನು ಕದ್ದ ಪ್ರಯಾಣಿಕರು
  • ಆರ್‌ಟಿಐನಿಂದ ಬಯಲಾದ ಶಾಕಿಂಗ್ ಮಾಹಿತಿ
  • ಇನ್ಮುಂದೆ ಕಳ್ಳತನ ಮಾಡಿದರೆ ಇನ್ಮುಂದೆ 5 ವರ್ಷ ಜೈಲು ಗ್ಯಾರಂಟಿ
ನವದೆಹಲಿ: ಭಾರತದಲ್ಲಿ ದಿನಕ್ಕೆ ಕೋಟ್ಯಾಂತರ ಜನರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳಲು ಇಂದಿಗೂ ರೈಲ್ವೆ ಸಾರಿಗೆಯನ್ನೇ ಅಧಿಕವಾಗಿ ಬಳಕೆ ಮಾಡುತ್ತಾರೆ. ವಿಮಾನಯಾನಕ್ಕೆ ಹೋಲಿಸಿದರೆ ಕಡೆಮೆ ಖರ್ಚಿನಲ್ಲಿ, ರಸ್ತೆ ಸಾರಿಗೆಗೆ ಹೋಲಿಸಿದರೆ ಕಡಿಮೆ ಸಮಯದಲ್ಲಿ ನಿರ್ದಿಷ್ಟ ಪ್ರದೇಶವನ್ನು ತಲುಪಬಹುದಾದ ಸಾರಿಗೆ ವ್ಯವಸ್ಥೆ ಎಂದರೆ ಅದು ಭಾರತೀಯ ರೈಲ್ವೆ (Indian Railways) ಸಾರಿಗೆ ಆಗಿದೆ.
ಅದರೆ ಇಷ್ಟೊಂದು ಉತ್ತಮ ಸಾರಿಗೆ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಟ್ಟರೂ ಅದನ್ನು ಬಳಿಸಿಕೊಳ್ಳುವಲ್ಲಿ ಸಾರ್ವಜನಿಕರು ವಿಫಲವಾಗುತ್ತಿರುವುದು ಬೇಸರದ ಸಂಗತಿಯಾಗಿದೆ.
ದಶಕಗಳ ಹಿಂದಿನ ರೈಲುಗಳಿಗೆ ಹೋಲಿಸಿದರೆ, ಇಂದು ರೈಲ್ವೆ ಸಾರಿಗೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ನಾವು ಕಾಣಬಹುದಾಗಿದೆ. ಸುಸಚಜ್ಜಿತ ಶೌಚಾಲಯ, ಹೆಚ್ಚಿನ ರಕ್ಷಣೆ, ಆರ್​ಫಿಎಫ್​ನಿಂದ ಬಿಗಿಯಾದ ಭದ್ರತೆ ಮೊದಲಾದ ಸೌಲಭ್ಯವನ್ನು ಭಾರತೀಯ ರೈಲ್ವೆ ಪ್ರಯಾಣಿಕರಿಗೆ ನೀಡುತ್ತಿದೆ. ಆದರೆ ನಮ್ಮ ಜನ ತಮ್ಮ ಕೀಳು ಬುದ್ದಿಯನ್ನು ಮಾತ್ರ ಬಿಟ್ಟಿಲ್ಲ ಎನ್ನುವುದಕ್ಕೆ ಇತ್ತೀಚೆಗೆ ಆರ್​ಟಿಐ (RTI) ನಿಂದ ಹೊರಬಿದ್ದ ಮಾಹಿತಿಯೇ ಸಾಕ್ಷಿಯಾಗಿದೆ.
104 ಕೋಟಿಯ ಬೇಡ್​ ಶೀಟ್​ ಕದ್ದ ಪ್ರಯಾಣಿಕರು!
ಸಮಾನ್ಯವಾಗಿ ರೈಲ್ವೆಯ ಎಸಿ ಬೋಗಿಯಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ ಚಳಿ ಆಗದಿರಲಿ ಎಂಬ ಉದ್ದೇಶದಿಂದ ತಲೆದಿಂಬು, ಬೆಡ್​ಶೀಟ್​ ಹಾಗೂ ಬೆಡ್‌ರೋಲ್​ಗಳನ್ನು
ಒದಗಿಸಲಾಗುತ್ತದೆ. ಆದರೆ ಇತ್ತೀಚಿಗೆ ಆರ್​ಟಿಐ (RTI) ನಲ್ಲಿ ರೈಲ್ವೆಯಲ್ಲಿ ಪ್ರಯಾಣಿಕರು ಕಳ್ಳತನ ಮಾಡಿರುವ ಬೆಡ್​ಶೀಟ್​ಗಳ ಮೌಲ್ಯ 104 ಕೋಟಿ ಎಂಬ ಶಾಕಿಂಗ್​ ಸುದ್ದಿ ಹೊರಬಿದಿದ್ದೆ.

ಯಾವ ವಿಭಾಗದಲ್ಲಿ ಹೆಚ್ಚು ಕಳ್ಳತನ?

ಆರ್‌ಟಿಐ ಮಾಹಿತಿಯ ಪ್ರಕಾರ, ಜನವರಿ 2022 ರಿಂದ ಮೇ 2024ರವರೆಗೆ ದೇಶದಾದ್ಯಂತ ಎಸಿ ಕೋಚ್‌ಗಳಿಂದ ಕನಿಷ್ಠ 1.27 ಕೋಟಿ ಬೆಡ್‌ರೋಲ್​ಗಳ ಕಳ್ಳತನವಾಗಿವೆ. ಕೋವಿಡ್ ಸಮಯದಲ್ಲಿ ನಿಂತುಹೋಗಿದ್ದ ಬೆಡ್‌ರೋಲ್ ಸೇವೆಗಳು 2022ರಲ್ಲಿ ಪುನಾರಂಭವಾದ ನಂತರ ಈ ಕಳ್ಳತನಗಳು ಮತ್ತೆ ಹೆಚ್ಚಾಗಿವೆ. ದೇಶದ 18 ರೈಲ್ವೆ ವಲಯಗಳ ಪೈಕಿ 16 ವಲಯಗಳ 54 ರೈಲ್ವೆ ವಿಭಾಗಗಳಿಂದ ಈ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಆರ್​ಟಿಐ ವರದಿ ತಿಳಿಸಿದೆ.
ರೈಲ್ವೆ ವಿಭಾಗಗಳ ಪ್ರಕಾರ ನೋಡಿದರೆ, ಬಿಕಾನೇರ್‌ನಲ್ಲಿ 25.76 ಲಕ್ಷ, ರಾಂಚಿಯಲ್ಲಿ 9.31 ಲಕ್ಷ, ದೆಹಲಿಯಲ್ಲಿ 8.21 ಲಕ್ಷ, ಮುಂಬೈನಲ್ಲಿ 8.17 ಲಕ್ಷ, ಜೋಧ್‌ಪುರದಲ್ಲಿ 8.09 ಲಕ್ಷ ಮತ್ತು ಅಹಮದಾಬಾದ್‌ನಲ್ಲಿ 6.94 ಲಕ್ಷ ವಸ್ತುಗಳು ಕಳ್ಳತನವಾಗಿವೆ ಎಂದು ವರದಿ ತಿಳಿಸಿದೆ.

ಕಾನೂನು ಕ್ರಮಕ್ಕೆ ಮುಂದಾದ ರೈಲ್ವೆ ಇಲಾಖೆ!

ಈ ವರದಿ ಪ್ರಕಾರ ಪ್ರತಿ ಸಾವಿರ ಪ್ರಯಾಣಿಕರಲ್ಲಿ ಒಬ್ಬ ಪ್ರಯಾಣಿಕ ಯಾವುದಾದರೂ ಒಂದು ವಸ್ತುವನ್ನು ಕಳ್ಳತನ ಮಾಡುತ್ತಿದ್ದಾಗಿ ಹೇಳುತ್ತಿದೆ. ಕೇಳಲು ಈ ಸಂಖ್ಯೆ ಚಿಕ್ಕದೆನಿಸಿದರೂ ರೈಲ್ವೆಯಲ್ಲಿ ದಿನಕ್ಕೆ ಲಕ್ಷಾಂತರ ಪ್ರಯಾಣಿಕರು ಸಂಚರಿಸುವ ಕಾರಣ ಇದರ ಮೊತ್ತ ಕೋಟಿಗಳ ಸಂಖ್ಯೆಯನ್ನು ತಲುಪುತ್ತದೆ.
ಹೀಗಾಗಿ ಈ ಬೆಡ್​ರೋಲ್​ ಕಳ್ಳತನಕ್ಕೆ ಕಡಿವಾಣ ಹಾಕಲು ರೈಲ್ವೆ ಇಲಾಖೆ ಮುಂದಾಗಿದೆ. ರೈಲ್ವೆಗೆ ಸೇರಿದ ಕಂಬಳಿ, ಬೆಡ್‌ಶೀಟ್, ದಿಂಬು, ಟವೆಲ್‌ನಂತಹ ವಸ್ತುಗಳನ್ನ ಕದಿಯುವುದು ಅಥವಾ ಕಾನೂನುಬಾಹಿರವಾಗಿ ಇಟ್ಟುಕೊಳ್ಳುವುದು ' ರೈಲ್ವೆ ಆಸ್ತಿ (ಕಾನೂನುಬಾಹಿರ ಸ್ವಾಧೀನ) ಕಾಯ್ದೆ, 1966 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಹೇಳಲಾಗುತ್ತದೆ.
ಹೀಗಾಗಿ ಈ ವಸ್ತುಗಳ ಕಳ್ಳತನ ಮಾಡಿದರೆ ಈ ಕಾಯ್ದೆಯ ಸೆಕ್ಷನ್ 3ರ ಪ್ರಕಾರ, ಮೊದಲ ಅಪರಾಧಕ್ಕೆ ಗರಿಷ್ಠ 5 ವರ್ಷಗಳ ಜೈಲು ಶಿಕ್ಷೆ, ಅಥವಾ ದಂಡ, ಕೆಲವು ಸಂದರ್ಭಗಳಲ್ಲಿ ಎರಡನ್ನೂ ವಿಧಿಸಲು ಅವಕಾಶವಿದೆ. ಮೊದಲ ಬಾರಿಗೆ ಕಳ್ಳತನ ಮಾಡಿ ಸಿಕ್ಕಿಬಿದ್ದರೆ, ಕನಿಷ್ಠ 1 ವರ್ಷ ಜೈಲು ಶಿಕ್ಷೆ ಮತ್ತು 1000 ದಂಡ ವಿಧಿಸಿ. ಇದೇ ತಪ್ಪನ್ನು ನಿರಂತರವಾಗಿ ಮಾಡಿದರೆ, 5 ವರ್ಷಗಳ ಜೈಲು ಶಿಕ್ಷೆಯ ಜೊತೆಗೆ ಭಾರಿ ದಂಡ ವಿಧಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net