ನಮಗೆ ಸ್ವಾತಂತ್ರ್ಯ ಸಿಕ್ಕಿದೆ! ಪಾಕಿಸ್ತಾನದಿಂದ ಬೇರ್ಪಟ್ಟ ಬಲೂಚಿಸ್ತಾನ? ಸೋಷಿಯಲ್​ ಮೀಡಿಯಾನಲ್ಲಿ ಪೋಸ್ಟ್ ವೈರಲ್​! Balochistan separated from Pakistan

ಪಾಕ್ ಮಿಲಿಟರಿ ಸಂಘರ್ಷದ ನಡುವೆಯೇ ಬಲೂಚಿಸ್ತಾನ ಸ್ವಾತಂತ್ರ್ಯ ಘೋಷಿಸಿಕೊಂಡ ಸುದ್ದಿ ವೈರಲ್!
ಪಾಕ್ ಮಿಲಿಟರಿ ಸಂಘರ್ಷದ ನಡುವೆಯೇ ಬಲೂಚಿಸ್ತಾನ ಸ್ವಾತಂತ್ರ್ಯ ಘೋಷಿಸಿಕೊಂಡ ಸುದ್ದಿ ವೈರಲ್!
Published on

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದಿಂದ ಬಲೂಚಿಸ್ತಾನ ಮುಕ್ತಿ?
  • ಶೇ. 85 ರಷ್ಟು ಭೂಪ್ರದೇಶ ನಮ್ಮ ವಶ, ಹೊಸ ಧ್ವಜ ಹಾಗೂ ಕರೆನ್ಸಿ ಜಾರಿಯಾಗಲಿದೆ ಎಂದು ಬಲೂಚ್ ಸೇನೆ ಘೋಷಿಸಿದೆಯಾ?
  • ಪಾಕ್ ಮಿಲಿಟರಿ ಸಂಘರ್ಷದ ನಡುವೆಯೇ ಬಲೂಚಿಸ್ತಾನ ಸ್ವಾತಂತ್ರ್ಯ ಘೋಷಿಸಿಕೊಂಡ ಸುದ್ದಿ ವೈರಲ್!
ಇಸ್ಲಾಮಾಬಾದ್​: ಕಳೆದ ಕೆಲ ದಿನಗಳಿಂದ ಪಾಕಿಸ್ತಾನ ಹಾಗೂ ಅದರ ರಾಜ್ಯ ಬಲೂಚಿಸ್ತಾನದ ನಡುವೆ ನಿರಂತರ ಸಂಘರ್ಷ ನಡೆಯುತ್ತಲೇ ಇದೆ. ಆದರೆ ಇದೀಗ ಬಲೂಚಿಸ್ತಾನ (Balochistan separated from Pakistan) ನಾವು ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆದುಕೊಂಡಿದ್ದೆವೆಂದು ಘೋಷಿಸಿದ್ದು, ಈ ಕುರಿತು ಪ್ರಕಟಿಸಿರುವ ಫೋಸ್ಟ್​ವೊಂದು ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್​ ಆಗುತ್ತಿದೆ.

ವೈರಲ್​ ಫೋಸ್ಟ್​ನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುವ ಫೋಸ್ಟ್​ನಲ್ಲಿ ಬಲೂಚಿಸ್ತಾನದ ಸೇನೆಯು ಶೇ. 85 ರಷ್ಟು ಭೂ ಪ್ರದೇಶದ ಮೇಲೆ ತನ್ನ ಹಿಡಿತವನ್ನು ಸ್ಥಾಪಿಸಿದೆ. ಇಲ್ಲಿ ಈಗ ನೂತನ ರಾಷ್ಟ್ರಗೀತೆ ಹಾಗೂ ರಾಷ್ಟ್ರ ಧ್ವಜ, ತಮ್ಮದೇ ಆದ ಕರೆನ್ಸಿ ಹಾಗೂ ಆಡಳಿತ ವ್ಯವಸ್ಥೆ ರೂಪುಗೊಳ್ಳಲಿದೆ ಎಂದು ತಿಳಿಸಲಾಗಿದೆ.
ಹಾಗೆಯೇ ಬಲೂಚಿಸ್ತಾನದಲ್ಲಿರುವ ನೈಸರ್ಗಿಕ ಸಂಪನ್ಮೂಲಗಳು, ತೈಲ ನಿಕ್ಷೇಪಗಳು ಹಾಗೂ ಕಲ್ಲಿದ್ದಿಲ ಗಣಿಗಳ ಮೇಲಿನ ಸಂಪೂರ್ಣ ಹಿಡಿತ ಬಲೂಚಿಸ್ತಾನದ್ದೇ ಆಗಿರಲಿದ್ದು, ಇದರ ಮೇಲೆ ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ ಎಂದು ಹೇಳಲಾಗಿದೆ.

ದೃಢಿಕರಿಸಿದ ಮಾಹಿತಿಯಲ್ಲ!

ಆದರೆ, ಈ ಫೋಸ್ಟ್​ ಬಗ್ಗೆ ಪಾಕಿಸ್ತಾನ ಈ ವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿರದ ಹಿನ್ನಲೆ ಈ ಫೋಸ್ಟ್ ಸಂಪೂರ್ಣ ಸತ್ಯವೆಂದು ನಂಬಲು ಸಾಧ್ಯವಿಲ್ಲ. ಆದರೆ ಬಲೂಚಿಸ್ತಾನ ಹಾಗೂ ಪಾಕಿಸ್ತಾನದ ನಡುವೆ ಹಲವು ವರ್ಷಗಳಿಂದ ಸಂಘರ್ಷ ನಡೆದುಕೊಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಸ್ಪಷ್ಟ ಉತ್ತರ ಲಭ್ಯವಾಗಲಿದೆ ಎನ್ನುವುದು ಅಂತಾರಾಷ್ಟ್ರೀಯ ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.

ಮುಂದುವರೆದ ಹಿಂಸಾಚಾರ

ಕಳೆದ ಕೆಲ ದಿನಗಳಲ್ಲಿ ಪಾಕಿಸ್ತಾನ ಮಿಲಿಟರಿ ಹಾಗೂ ಬಲೂಚಿಸ್ತಾನದ ತಾರೀಖ್​-ಇ-ತಾಲಿಬಾಲ್​ ಸಂಘಟನೆ ನಡೆವೆ ಸಂಘರ್ಷ ತೀವ್ರವಾಗಿದ್ದು, ಇಲ್ಲಿವರೆಗೆ ಸುಮಾರು 109 ಬಲೂಚ್​ಗಳನ್ನು ಪಾಕಿಸ್ತಾನ ಪಡೆ ಕೊಂದಿದೆ ಎಂದು ವರದಿಯಾಗಿದೆ. ಜುಲೈ 5 ರಂದು ಪಾಕಿಸ್ತಾನ ಸೇನೆ ಹಾಗೂ ಬಲೂಚ್​ ಪೊಲೀಸರು ಸಬಾನ್​ ಪ್ರಾಂತ್ಯದಲ್ಲಿ ನಡೆಸಿದ ಜಂಟಿ ಕಾರ್ಯಾಚಣೆಯಲ್ಲಿ ಸುಮಾರು 71 ಜನ ಮರಣ ಹೊಂದಿದ್ದಾರೆಂದು ಹೇಳಲಾಗುತ್ತಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net