'ರೀಲ್ಸ್​ಗಾಗಿ TVK ಸರ್ಕಾರದಿಂದ ರೇಡ್​​, ಬಂಡವಾಳ ಬಯಲು ಮಾಡ್ತೇವೆ'; ಕೆಎನ್​​ ನೆಹರು ಆಸ್ತಿಗಳ ಮೇಲೆ ದಾಳಿ ವಿರುದ್ಧ ಎಂಕೆ ಸ್ಟಾಲಿನ್ ಕಿಡಿ

'ರೀಲ್ಸ್​ಗಾಗಿ TVK ಸರ್ಕಾರದಿಂದ ರೇಡ್​​, ಬಂಡವಾಳ ಬಯಲು ಮಾಡ್ತೇವೆ'; ಕೆಎನ್​​ ನೆಹರು ಆಸ್ತಿಗಳ ಮೇಲೆ ದಾಳಿ ವಿರುದ್ಧ ಎಂಕೆ ಸ್ಟಾಲಿನ್ ಕಿಡಿ
Published on: 
  • ಕಾನೂನು ಸುವ್ಯವಸ್ಥೆ, ಬೆಲೆ ಏರಿಕೆ ಸರಿಪಡಿಸುವ ಬದಲು ರೋಡ್​ ಶೋ ಮತ್ತು ರೈಡ್​ ಶೋ ನಡೆಸುತ್ತಿದ್ದಾರೆ.

  • ಡಿಎಂಕೆ ಮಾಜಿ ಸಚಿವ ಕೆಎನ್​ ನೆಹರು ಆಸ್ತಿಗಳ ಮೇಲೆ ದಾಳಿ ವಿರುದ್ಧ ಸ್ಟಾಲಿನ್​ ಕೆಂಡ.

  • ಭ್ರಷ್ಟಾಚಾರದ ವಿರುದ್ಧ ನಡೆಸುವದಾಳಿಯನ್ನು ರಾಜಕೀಯ ಡ್ರಾಮಾದಂತೆ ಬಳಕೆಯಾಗ್ತಿದೆ ಎಂದು ಕಿಡಿ.

ಹೆಣ್ಣು ಮಕ್ಕಳು, ಮಕ್ಕಳು ಹಾಗೂ ಯಾರಿಗೂ ಸುರಕ್ಷತೆಯೇ ಇಲ್ಲ ಎನ್ನುವಂತ ರಾಜ್ಯವನ್ನಾಗಿ ಬದಲಾಯಿಸಿರುವ ಸಿಎಂ. ಈಗ ಜನರ ಗಮನವನ್ನು ಬ್ರೇಕಿಂಗ್​ ನ್ಯೂಸ್​ನತ್ತ ತಿರುಗಿಸಲು ರೋಡ್​ ಶೋ ಮತ್ತು ರೈಡ್​ ಶೋ ನಡೆಸಬೇಕೆ ಎನ್ನುವ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಎಂಕೆ ಸ್ಟಾಲಿನ್​ ಅವರು ಹಾಲಿ ಸಿಎಂ ವಿಜಯ್​ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ತಿರುಚಿರಾಪಳ್ಳಿ ಪೂರ್ವ ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡಿನ ಸಿಎಂ ಜೋಸೆಫ್ ವಿಜಯ್​ ಅವರ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರವು, ಭ್ರಷ್ಟಾಚಾರದ ವಿರುದ್ಧ ನಡೆಸುವ (Vigilance Raids) ದಾಳಿಯನ್ನು ರಾಜಕೀಯ ಡ್ರಾಮಾದಂತೆ ಬಳಕೆ ಮಾಡಿಕೊಳ್ಳುತ್ತಿದೆ. ಶೋಧ ಕಾರ್ಯಾಚರಣೆ ಮೂಲಕ ಡಿಎಂಕೆ ಕಾರ್ಯಕರ್ತರನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಸ್ಟಾಲಿನ್ ಕಿಡಿಕಾರಿದರು.

ಮಾಜಿ ಸಚಿವರ ಆಸ್ತಿಗಳ ಮೇಲೆ ರೇಡ್

ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳವು ಗುರುವಾರ ಮಾಜಿ ಸಚಿವ ಹಾಗೂ ಡಿಎಂಕೆ ನಾಯಕ ಕೆ.ಎನ್. ನೆಹರು ಅವರಿಗೆ ಸೇರಿದ ತಮಿಳುನಾಡಿನಾದ್ಯಂತ ಒಟ್ಟು 25 ಸ್ಥಳಗಳಲ್ಲಿ ರೇಡ್​ ನಡೆಸಿತು. ಪೌರಾಡಳಿತ ಮತ್ತು ನೀರು ಸರಬರಾಜು ಇಲಾಖೆಯ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ 634 ಕೋಟಿ ರೂ.ಗಳ ಅಕ್ರಮ ಹಣ-ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಿತು.

Also Read
'ಬ್ರೇಕಿಂಗ್ ಬ್ಯಾಡ್ ಟು ಪ್ರಿಜನ್ ಬ್ರೇಕ್'; ಥೇನಿ ಜೈಲಿನಿಂದ 17 ಕೈದಿಗಳು ಪರಾರಿ, ವಿಜಯ್ ಸರ್ಕಾರದ ವಿರುದ್ಧ ಸ್ಟಾಲಿನ್ ಲೇವಡಿ..MK Stalin
'ರೀಲ್ಸ್​ಗಾಗಿ TVK ಸರ್ಕಾರದಿಂದ ರೇಡ್​​, ಬಂಡವಾಳ ಬಯಲು ಮಾಡ್ತೇವೆ'; ಕೆಎನ್​​ ನೆಹರು ಆಸ್ತಿಗಳ ಮೇಲೆ ದಾಳಿ ವಿರುದ್ಧ ಎಂಕೆ ಸ್ಟಾಲಿನ್ ಕಿಡಿ

ಸ್ಟಾಲಿನ್ ಏನಂದ್ರು?

ಇದರ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಂಚಿಕೊಂಡ ಎಂಕೆ ಸ್ಟಾಳಿನ್​ ಅವರು, ಇದೊಂದು ರಾಜಕೀಯ ಸೇಡು. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಜನರಿಗೆ ತಿಳಿಯುತ್ತಲೇ ಅವರ ಗಮನ ಬೇರೆಡೆಗೆ ಸೆಳೆಯಲು ರಾಜ್ಯ ಸರ್ಕಾರ ಈ ಯತ್ನ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.

ತಮಿಳುನಾಡುನಲ್ಲಿ ಯಾರೊಬ್ಬರು ಸುರಕ್ಷತೆಯಾದ ವಾತಾವರಣದಲ್ಲಿ ಬದುಕದಂತಾಗಿದೆ. ಇಂತಹ ಸಮಯದಲ್ಲಿ ಸಿಎಂ ವಿಜಯ್​ ಅವರು, ಸಾರ್ವಜನಿಕರ ಹಾಗೂ ಮಾಧ್ಯಮಗಳ 'ಬ್ರೇಕಿಂಗ್ ನ್ಯೂಸ್' ಗಮನವನ್ನು ಬೇರೆಡೆ ತಿರುಗಿಸಲು 'ರೋಡ್‌ಶೋ' ನಡೆಸಬೇಕೆ ಅಥವಾ 'ರೈಡ್‌ಶೋ' ನಡೆಸಬೇಕೆ ಎನ್ನುವ ಆಲೋಚನೆಯಲ್ಲಿದ್ದಾರೆ ಎಂದರು.

ರೀಲ್ಸ್​ಗಾಗಿ ರೇಡ್

ಮುಂದುವರೆದು, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ನಾಯಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವ ಆಡಳಿತ ಪಕ್ಷವು, ಮಾಜಿ ಸಚಿವರನ್ನು ಮಾತ್ರ ಗುರಿಯಾಗಿಸಿಕೊಳ್ಳುತ್ತಿದೆ. ಭ್ರಷ್ಟ ವ್ಯಕ್ತಿಗಳನ್ನು 'ಪರಸ್ಪರ ಚೌಕಾಶಿಯ ಕುದುರೆಗಳನ್ನಾಗಿ' ಪರಿವರ್ತಿಸಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವ ಟಿವಿಕೆ ಎಂಬ ಟಿಎನ್ ಬ್ರಾಂಚ್ ವಾಷಿಂಗ್ ಮೆಷಿನ್', ಡಿಎಂಕೆ ಆಡಳಿತದ ಮಾಜಿ ಸಚಿವರನ್ನು ಮಾತ್ರ ಗುರಿಯಾಗಿಸಿ 'ವೆಟ್ರಿ ರಾಜಕೀಯ ಸೇಡು' ತೀರಿಸಿಕೊಳ್ಳುವ ಯೋಜನೆಯಲ್ಲಿದೆ. ಇದು ಕಾನೂನು ಹಾಗೂ ಸಾರ್ವಜನಿಕರ ಮುಂದೆ ತಲೆ ತಗ್ಗಿಸುವ ವಿಚಾರ ಎಂದು ಹೇಳಿದರು ಸ್ಟಾಲಿನ್.

ಉಗುರು ಸಹ ನಡುಗಲ್ಲ

ಮುಂಬರುವ ಉಪಚುನಾವಣೆಗೂ ಈ ದಾಳಿಗೂ ನಂಟು ಕಲ್ಪಿಸಿರುವ ಸ್ಟಾಲಿನ್, ತಿರುಚಿರಾಪಳ್ಳಿ ಪೂರ್ವ ಉಪಚುನಾವಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಲು 'ರೀಲ್ಸ್‌'ಗಳನ್ನು ಸಿದ್ಧಪಡಿಸಲು ಮತ್ತು ಮುಖ್ಯಮಂತ್ರಿಯವರಿಗೆ ವೇದಿಕೆಯಲ್ಲಿ 'ಪಂಚ್ ಡೈಲಾಗ್‌'ಗಳ ಮೂಲಕ ಕೂಗಾಡಲು ವಿಷಯಗಳನ್ನು ಒದಗಿಸಿಕೊಡಲು ಈ ದಾಳಿಗಳನ್ನು ನಡೆಸಲಾಗಿದೆ. ಇಂತಹ ಕೆಳ ಮಟ್ಟದ ರಾಜಕೀಯವು ಡಿಎಂಕೆ ಕಾರ್ಯಕರ್ತನ ಉಗುರನ್ನು ಸಹ ನಡುಗಿಸಲು ಸಾಧ್ಯವಾಗೋದಿಲ್ಲ ಎಂದು ಬರೆದುಕೊಂಡಿದ್ದಾರೆ ಸ್ಟಾಲಿನ್

ಮುಂದುವರೆದು, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು, ತುಕ್ಕು ಹಿಡಿದ ಆಡಳಿತ, ಬೆಲೆ ಏರಿಕೆಯಿಂದ ಜನರನ್ನು ಸಂಕಷ್ಟಕ್ಕೆ ಈಡು ಮಾಡಿರುವ ಟಿವಿಕೆ ಸರ್ಕಾರವನ್ನು ತಮಿಳುನಾಡಿನ ಜನ ಮಾತ್ರ ಇಡೀ ದೇಶವೇ ಹೀಯಾಳಿಸುತ್ತಿದೆ. ಈ ವಿಚಾರವನ್ನು ಪ್ರಸ್ತಾಪಿಸುವ ಡಿಎಂಕೆ ಕಾರ್ಯ ಕರ್ತರ ಬಾಯಿ ಮುಚ್ಚಿಸಬಹುದು ಎಂದುಕೊಳ್ಳಬೇಡಿ. ಇನ್ಮುಂದೆ ನಿಮ್ಮ ಬಂಡವಾಳ ಬಯಲು ಮಾಡ್ತೇವೆ ಎಂದು ಕಿಡಿಕಾರಿದರು ಸ್ಟಾಲಿನ್.

ಏನಿದು ಘಟನೆ?

ಮದ್ರಾಸ್ ಹೈಕೋರ್ಟ್‌ನ ನಿರ್ದೇಶನದಂತೆ ಜಾರಿ ನಿರ್ದೇಶನಾಲಯ ಎತ್ತಿದ ಅಕ್ರಮಗಳ ಕುರಿತು ತನಿಖೆ ನಡೆಸಲು ನೆಹರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾದ ಬಳಿಕ ಈ ಡಿವಿಎಸಿ ದಾಳಿಗಳು ನಡೆದಿವೆ. ನೆಹರು ಅವರು ಸಚಿವರಾಗಿದ್ದ ಅವಧಿಯಲ್ಲಿ ಸರ್ಕಾರಿ ಹುದ್ದೆಗಳಿಗೆ ಪ್ರತಿಯಾಗಿ ಅಭ್ಯರ್ಥಿಗಳಿಂದ ಸಂಗ್ರಹಿಸಲಾಗಿದೆ ಎನ್ನಲಾದ ಲಂಚದ ಆರೋಪಗಳ ಕುರಿತು ಈ ತನಿಖೆ ನಡೆಯುತ್ತಿದೆ,(ಏಜೆನ್ಸೀಸ್).

Related Stories

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net