ಜ್ಞಾನೇಶ್ ಕುಮಾರ್ ಇಲ್ಲ ಎಂದಿದ್ರೆ ಮೋದಿ ಪಿಎಂ, ಅಮಿತ್ ಶಾ ಗೃಹಸಚಿವ ಆಗ್ತಿರಲಿಲ್ಲ: ರಾಹುಲ್​ ಗಾಂಧಿ ಕಿಡಿನುಡಿ | Rahul Gandhi

Rahul Gandhi
ಜ್ಞಾನೇಶ್ ಕುಮಾರ್ ಇಲ್ಲ ಎಂದಿದ್ರೆ ಮೋದಿ ಪಿಎಂ, ಅಮಿತ್ ಶಾ ಗೃಹಸಚಿವ ಆಗ್ತಿರಲಿಲ್ಲ: ರಾಹುಲ್​ ಗಾಂಧಿ ಆರೋಪ | Rahul Gandhi
Published on: 

ನವದೆಹಲಿ: ಇಂದು ನಗರದ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಿಕೂಟದ ಬೃಹತ್ ಸಮಾವೇಶದಲ್ಲಿ, ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಖಂಡಿತ ಜೈಲಿಗೆ ಹೋಗಲಿದ್ದಾರೆ ಎಂದು ರಾಹುಲ್ ಗಾಂಧಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

"2024ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಹಾಗೂ ಮತದಾರರ ಪಟ್ಟಿ ದುರ್ಬಳಕೆ ಮಾಡಿಕೊಂಡು 'ಮತಗಳ ಕಳವು' ನಡೆಸಲಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇರ ಆರೋಪ ಮಾಡಿದ್ದು, ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಅವರು ಜೈಲು ಸೇರುವುದು ಖಚಿತ" ಎಂದು ಗುಡುಗಿದರು.

ಇದು ಸಾಮಾನ್ಯ ಕಳುವಲ್ಲ, ದೇಶದ್ರೋಹ

"ಈ ಮತಗಳ ಕಳುವು ಸಾಮಾನ್ಯ ಕಳುವಲ್ಲ. ಇದು ಭಾರತದ ಪ್ರತಿಯೊಬ್ಬ ಪ್ರಜೆಯ ಧ್ವನಿಯನ್ನು ಕದಿಯುವ ಹುನ್ನಾರ. ಇದನ್ನು ದೇಶದ್ರೋಹ ಎಂದು ಕರೆಯುತ್ತಾರೆ. ಜ್ಞಾನೇಶ್ ಕುಮಾರ್ ಇಲ್ಲ ಎಂದಿದ್ದರೆ, ನರೇಂದ್ರ ಮೋದಿ ಪ್ರಧಾನಿ ಆಗುತ್ತಿರಲಿಲ್ಲ ಮತ್ತು ಅಮಿತ್ ಶಾ ಕೇಂದ್ರ ಗೃಹ ಸಚಿವರಾಗುತ್ತಿರಲಿಲ್ಲ. 2024ರ ಲೋಕಸಭಾ ಚುನಾವಣೆ ಸಂಪೂರ್ಣವಾಗಿ ಅಕ್ರಮವಾಗಿತ್ತು. ಚುನಾವಣೆಯ ನಂತರ ಶೇ.15ರಷ್ಟು ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿತು" ಎಂದರು.

"ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ಶೇ.3 ರಷ್ಟು ಮಾತ್ರ ವ್ಯತ್ಯಾಸವಿತ್ತು. ಇದನ್ನು ಚುನಾವಣಾ ಆಯೋಗದ ದತ್ತಾಂಶಗಳೇ ಹೇಳುತ್ತಿವೆ. ಆರ್‌ಎಸ್‌ಎಸ್ (RSS) ಸಂಸ್ಥೆಯು ದೇಶದ ಶಿಕ್ಷಣ ಸಂಸ್ಥೆಗಳಿಂದ ಹಿಡಿದು ತನಿಖಾ ಸಂಸ್ಥೆಗಳವರೆಗೆ ಎಲ್ಲವನ್ನೂ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಇದರಿಂದಾಗಿ ರೈತರು, ಕಾರ್ಮಿಕರು ಮತ್ತು ಯುವಕರಿಗೆ ಸೂಕ್ತ ಹಕ್ಕುಗಳು ಸಿಗುತ್ತಿಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಲು ಕೊನೆಯವರೆಗೂ ಹೋರಾಡುವುದಾಗಿ" ಹೇಳಿದರು.

Also Read
ಶುಕ್ರವಾರವೇ ಸಿನಿಮಾಗಳು ರಿಲೀಸ್​ ಆಗುವುದೇಕೆ? ಚಿತ್ರೋದ್ಯಮದ ಈ ಲಾಜಿಕ್​ ಹಿಂದಿದೆ ಸಖತ್​ ಇಂಟ್ರೆಸ್ಟಿಂಗ್​ ಸ್ಟೋರಿ | Friday Release
Rahul Gandhi

ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, "ಪ್ರಸ್ತುತ ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ, ಬಿಹಾರ ಮತ್ತು ಉತ್ತರ ಪ್ರದೇಶದ ಸರ್ಕಾರಗಳು ಮತಗಳ ಕಳವು ನಡೆಸಿ ಅಧಿಕಾರಕ್ಕೆ ಬಂದಿವೆ. ಸಾರ್ವಜನಿಕರು ಇವರನ್ನು ಆಯ್ಕೆ ಮಾಡಿಲ್ಲ. ಮೋದಿ ಅಧಿಕಾರದಿಂದ ತೊಲಗಿದರೆ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ" ಎಂದರು,(ಏಜೆನ್ಸೀಸ್).