_1786202242431.webp?w=480&auto=format%2Ccompress&fit=max)
_1786202242431.webp?w=480&auto=format%2Ccompress&fit=max)
ಜಗತ್ತಿನಲ್ಲಿ ಅಮೆರಿಕ, ಚೀನಾ ಅಥವಾ ರಷ್ಯಾ ಎಷ್ಟೇ ಮುನ್ನಡೆಯಲ್ಲಿದ್ದರೂ, ಭಾರತದ 40 ಕೋಟಿ ಯುವಕರ ಅಪಾರ ಸಾಮರ್ಥ್ಯಕ್ಕೆ ಯಾವುದೇ ದೇಶ ಸಾಟಿಯಿಲ್ಲ. ಆದರೆ, ದುರದೃಷ್ಟವಶಾತ್ ಇಂದು ದೇಶದಲ್ಲಿ ಉದ್ಯೋಗದ ಎಲ್ಲಾ ಬಾಗಿಲುಗಳು ಮುಚ್ಚಲ್ಪಟ್ಟಿವೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ
ಈ ದೇಶದ ಯುವಜನರಿಗಿಂತ ದೊಡ್ಡವರು ಯಾರೂ ಇಲ್ಲ ಎಂದಿರುವ ವಿಪಕ್ಷ ನಾಯಕ, ನೀವು ಭಾರತದ ಶಕ್ತಿ ಮತ್ತು ಹೆಮ್ಮೆ. ನಾನು ಹೀಗೆ ಹೇಳುವಾಗ, ಪ್ರತಿಯೊಬ್ಬ ಭಾರತೀಯ ಪ್ರಜೆಯ ಬಗ್ಗೆಯೂ ಮಾತನಾಡುತ್ತಿದ್ದೇನೆ ಎಂದು ಹೇಳಿದರು.
1000 ಯುವಕರಲ್ಲಿ, 12 ಜನರಿಗೆ ಮಾತ್ರ ಖಾಯಂ ಉದ್ಯೋಗ
ಇದೇ ನೋಡಿ 21ನೇ ಶತಮಾನದ ನೈಜ ಅರ್ಥವ್ಯವಸ್ಥೆ!..
21ನೇ ಶತಮಾನದಲ್ಲಿ ದೇಶದ ಪ್ರಗತಿಯು ಪ್ರಮುಖವಾಗಿ ಎರಡು ಅಂಶಗಳ ಮೇಲೆ ನಿಂತಿದೆ. ಮೊದಲನೆಯದು ನಿಮ್ಮಲ್ಲಿರುವ ಯುವ ಸಾಮರ್ಥ್ಯ, ಎರಡನೆಯದು ನೀವು ಉತ್ಪಾದಿಸುವ ಡೇಟಾ. ಭಾರತದಲ್ಲಿ ಯುವಜನತೆಯೂ ದೊಡ್ಡ ಸಂಖ್ಯೆಯಲ್ಲಿದ್ದಾರೆ, ಹಾಗೆಯೇ ವಿಶ್ವದಲ್ಲೇ ಅತಿ ಹೆಚ್ಚು ಡೇಟಾ ಸೃಷ್ಟಿಯಾಗುವುದೂ ಇಲ್ಲೇ. ಪ್ರತಿಯೊಬ್ಬ ಭಾರತೀಯನೂ ಪ್ರತಿದಿನ ಸರಾಸರಿ 1 GB ಡೇಟಾ ಬಳಸುತ್ತಿದ್ದು, ಭವಿಷ್ಯದ ಅಭಿವೃದ್ಧಿಯನ್ನು ಈ ಡೇಟಾ ಮತ್ತು ನಿಮ್ಮ ಸಾಮರ್ಥ್ಯವೇ ನಿರ್ಧರಿಸಲಿವೆ. ಯುವಜನತೆ ಮತ್ತು ಡೇಟಾ ಒಂದಾದರೆ ಅದೇ 21ನೇ ಶತಮಾನದ ನೈಜ ಅರ್ಥವ್ಯವಸ್ಥೆ ಎಂದು ಹೇಳಿದರು.
ಈ ಕಾರ್ಯಕ್ರಮದ ವೇಳೆ, ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆಯ ಸಂದರ್ಭದಲ್ಲಿ ತಮ್ಮ ಮೇಲೆ ನಡೆದ ಲಾಠಿಚಾರ್ಜ್ ಕುರಿತು ಪಟನಾದ ಹಲವು ವಿದ್ಯಾರ್ಥಿಗಳು ರಾಹುಲ್ ಗಾಂಧಿ ಅವರ ಗಮನಕ್ಕೆ ತಂದರು. ಅದಕ್ಕೆ ಸ್ಪಂದಿಸಿದ ರಾಹುಲ್, ವಿದ್ಯಾರ್ಥಿಗಳು ಎಂದಿಗೂ ದ್ವೇಷ ಮತ್ತು ಹಿಂಸಾಚಾರದ ಹಾದಿ ಹಿಡಿಯಬಾರದು. ಬದಲಾಗಿ, ಪ್ರೀತಿಯ ಮಾರ್ಗದಲ್ಲೇ ಪ್ರಸ್ತುತ ವ್ಯವಸ್ಥೆಯನ್ನು ಬದಲಾಯಿಸಬೇಕು ಮತ್ತು ಅಂತಹ ಜನವಿರೋಧಿ ವ್ಯವಸ್ಥೆಗೆ ಅಂತಿಮ ವಿದಾಯ ಹೇಳಬೇಕು ಎಂದು ಕರೆ ನೀಡಿದರು.
ಇನ್ನು ಈ ಸಮಾವೇಶದುದ್ದಕ್ಕೂ ರಾಹುಲ್ ಗಾಂಧಿಗೆ ಬೆಂಬಲ ಸೂಚಿಸುವ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಬ್ಯಾನರ್ ಮತ್ತು ಪೋಸ್ಟರ್‌ಗಳು ರಾರಾಜಿಸುತ್ತಿದ್ದವು. ನಮಗೆ ಉದ್ಯೋಗ ಬೇಕು, ಪೆಲೆಟ್ ಗನ್‌ಗಳಲ್ಲ ಹಾಗೂ ಮಂತ್ರಿ ಜಿ ಕಿ ಬಡಿ ಕಾರ್, ದೇಶ್ ಕಾ ಯುವ ಬರೋಜ್‌ಗಾರ್ (ಮಂತ್ರಿಗಳದ್ದು ದೊಡ್ಡ ಕಾರು, ದೇಶದ ಯುವಕ ನಿರುದ್ಯೋಗಿ) ಎಂಬ ಬರಹಗಳಿದ್ದ ಪೋಸ್ಟರ್‌ಗಳು ಸಭಿಕರ ಗಮನ ಸೆಳೆದವು. ಮತ್ತೊಂದು ಬೃಹತ್ ಹೋಲ್ಡಿಂಗ್‌ನಲ್ಲಿ ಕೆಲಸ ಸಿಗದಿದ್ದರೆ ಸಿಂಹಾಸನ ಅಲ್ಲಾಡಲಿದೆ ಎಂದು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಲಾಗಿತ್ತು