ರಾಷ್ಟ್ರಪತಿಗಳನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಚಡ್ಡಾ, ಎಎಪಿ ತೊರೆದ ಸಂಸದರ ವಿರುದ್ಧ ಪಂಜಾಬ್ ಸರ್ಕಾರ ಸೇಡಿನ ರಾಜಕೀಯ ಮಾಡುತ್ತಿದೆ. ವಿಶ್ವಕಪ್ ವಿಜೇತ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ನಿವಾಸದ ಹೊರಗೆ ಆಪ್ ಕಾರ್ಯಕರ್ತರು ಪಂಜಾಬ್ ಪೊಲೀಸರ ಸಹಾಯದಿಂದ ಗದ್ದಾರ್ (ದೇಶದ್ರೋಹಿ) ಎಂದು ಬರೆದು ವಿರೂಪಗೊಳಿಸಿದ್ದಾರೆ. ಅಲ್ಲದೆ, ಪದ್ಮಶ್ರೀ ರಾಜೇಂದ್ರ ಗುಪ್ತಾರ ಕಾರ್ಖಾನೆಗೆ ನೀಡಲಾಗಿದ್ದ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಸಂದೀಪ್ ಪಾಠಕ್ ವಿರುದ್ಧ ಸುಳ್ಳು ಎಫ್‌ಐಆರ್‌ಗಳನ್ನು ದಾಖಲಿಸಿ, ಅವರನ್ನು ಬಂಧಿಸಲಾಗುವುದು ಎಂಬ ಸುದ್ದಿಯನ್ನು ಹರಡಲಾಗುತ್ತಿದೆ ಎಂದು ವಿವರಿಸಿದರು.