ರಾಘವ್ ಚಡ್ಡಾ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾನೆ: ಪಕ್ಷದ ಸಂಸದನ ವಿರುದ್ಧ ತಿರುಗಿ ಬಿದ್ದ ಸಿಎಂ ಭಗವಂತ್​ ಮಾನ್​! Bhagwant Mann on Raghav Chadha

ರಾಜ್ಯ ಸಭಾ ಉಪನಾಯಕ ಸ್ಥಾನದಿಂದ ರಾಘವ್​ ಚಡ್ಡಾಗೆ ಕೊಕ್​ ನೀಡಿದ ಎಎಪಿ
ರಾಜ್ಯ ಸಭಾ ಉಪನಾಯಕ ಸ್ಥಾನದಿಂದ ರಾಘವ್​ ಚಡ್ಡಾಗೆ ಕೊಕ್​ ನೀಡಿದ ಎಎಪಿ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸಭಾ ಉಪನಾಯಕ ಸ್ಥಾನದಿಂದ ರಾಘವ್​ ಚಡ್ಡಾಗೆ ಕೊಕ್​ ನೀಡಿದ ಎಎಪಿ
  • ಚಡ್ಡಾ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾನೆ: ಪಂಜಾಬ್​ ಸಿಎಂ ಮಾನ್​
  • ನನ್ನನ್ನು ಸುಮ್ಮನಾಗಿಸಬಹುದು; ಸೋಲಿಸಲಾಗದು: ರಾಘವ್​ ಚಡ್ಡಾ
ಪಂಜಾಬ್​: ಆಮ್​ ಆದ್ಮಿ ಪಕ್ಷದ ಸಂಸದ ರಾಘವ್​ ಚಡ್ಡಾ ಅವರನ್ನು ರಾಜ್ಯಸಭೆಯ ಉಪನಾಯಕ​ ಸ್ಥಾನದಿಂದ ಕೆಳಗಿಳಿಸಿದ ಬಗ್ಗೆ ಮಾತನಾಡಿರುವ ಪಂಜಾಬ್​ ಸಿಎಂ ಭಗವಂತ್​ ಸಿಂಗ್ ಮಾನ್ (Bhagwant Mann on Raghav Chadha)​, ರಾಘವ್​ ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡ ಕಾರಣ ಈ ನಿರ್ಧಾರವನ್ನು ತೆಗೆದುಕೊಂಡಿದ್ದೆವೆ ಎಂದು ಹೇಳಿದ್ದಾರೆ.
ಶುಕ್ರವಾರ (ಏ.3) ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಮಾನ್​, ಚಡ್ಡಾ ರಾಜ್ಯ ಸಭೆಯಲ್ಲಿ ತೀರಾ ಚಿಕ್ಕ-ಚಿಕ್ಕ ವಿಷಯಗಳ ಬಗ್ಗೆ ಧ್ವನಿ ಎತ್ತುತ್ತಿದ್ದದ್ದು ಪಕ್ಷದ ವರ್ಚಸ್ಸಿಗೆ ತೊಂದರೆ ಉಂಟುಮಾಡಿದ ಕಾರಣ ಈ ನಿರ್ಣಯವನ್ನು ತೆಗೆದುಕೊಂಡಿದ್ದೆವೆ ಎಂದು ಮಾನ್​ ತಿಳಿಸಿದ್ದಾರೆ.

ನನ್ನನ್ನು ಸುಮ್ಮನಾಗಿಸಬಹುದು; ಸೋಲಿಸಲಾಗದು

ಆಮ್​ ಆದ್ಮಿ ಪಕ್ಷದ, ಪಂಜಾಬ್​ ರಾಜ್ಯದ ರಾಜ್ಯಸಭಾ ಸಂಸದನಾಗಿರುವ ರಾಘವ್​ ಚಡ್ಡಾ, ತಮ್ಮನ್ನು ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ಕೆಳಗಿಳಿಸಿದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ನನ್ನನ್ನು ನೀವು ಸುಮ್ಮನಾಗಿಸಬಹುದೇ ಹೊರತು ಸೋಲಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ರಾಘವ್​ ಚಡ್ಡಾ ಎಎಪಿ ಪಕ್ಷದ ನಿರ್ಣಯಕ್ಕೆ ಸೆಡ್ಡು ಹೊಡೆದಿದ್ದಾರೆ. ನನಗೆ ಸದನದಲ್ಲಿ ಮಾತನಾಡಲು ಅವಕಾಶ ಸಿಕ್ಕಾಗೆಲ್ಲಾ ಜನಪರ ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳಿದ್ದೆನೆ. ಇದೇ ನನಗೆ ಇಂದು ಮುಳ್ಳಾಗಿದೆ ಎಂದರೆ ನನಗೆ ಆಶ್ಚರ್ಯವಾಗುತ್ತಿದೆ ಎಂದು ಚಡ್ಡಾ ಹೇಳಿದ್ದಾರೆ.

ಚಡ್ಡಾರ ಜನಪರ ಬೇಡಿಕೆಗಳೇನಿತ್ತು?

ಎಕ್ಸ್​ನಲ್ಲಿ ತಾವು ಇಲ್ಲಿಯವರೆಗೂ ಜನರ ಪರವಾಗಿ ಮಾತನಾಡಿದ್ದ ಬಗ್ಗೆ ವಿಡಿಯೋವೊಂದನ್ನು ಚಡ್ಡಾ ಹಂಚಿಕೊಂಡಿದ್ದಾರೆ. ಗಿಗ್​ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಅವರೇ ಸ್ವತಂ ಒಂದು ದಿನ ಡೆಲಿವರಿ ಬಾಯ್​ ಆಗಿ ಕೆಲಸ ಮಾಡಿದ್ದರು. ಜೊತೆಗೆ ಅಥಹ ಸಂಸ್ಥೆಗಳಲ್ಲಿ ಕೆಲಸ ಮಾಡುವ ಡೆಲಿವರಿ ಪಾಲುದಾರರ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ಧ್ವನಿ ಎತ್ತಿದ್ದರು.
ಮೊಬೈಲ್ ರೀಚಾರ್ಜ್ ಪ್ಲಾನ್‌ಗಳು 28 ದಿನಗಳ ಬದಲಿಗೆ ಪೂರ್ಣ ತಿಂಗಳವರೆಗೆ (30/31 ದಿನಗಳು) ಇರಬೇಕು ಎಂದು ಒತ್ತಾಯಿಸಿದ್ದರು. ವಿಮಾನ ನಿಲ್ದಾಣದಲ್ಲಿ ಕೈಗೆಟುಕುವ ದರದಲ್ಲಿ ಆಹಾರ ಸಿಗುವಂತೆ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇತ್ತೀಚೆಗೆ ಪುರುಷರಿಗೂ ಪ್ರಿತೃತ್ವ ರಜೆ ನೀಡಬೇಕೆಂದು ಒತ್ತಾಯಿಸಿದ್ದರು.

ಚಡ್ಡಾ ಜಾಗಕ್ಕೆ ಅಶೋಕ್​ ಮಿತ್ತಲ್​

ರಾಘವ್​ ಚಡ್ಡಾ ಅವರನ್ನು ರಾಜ್ಯ ಸಭಾದ ಉಪನಾಯಕನ​ ಸ್ಥಾನದಿಂದ ತೆರವುಗೊಳಿಸಿದ ನಂತರ ಎಎಪಿ ಪಕ್ಷ ಅಶೋಕ್​ ಮಿತ್ತಲ್​ ಅವರನ್ನು ರಾಜ್ಯಸಭೆಯಲ್ಲಿ ಪಕ್ಷದ ನೂತನ ಉಪನಾಯಕನಾಗಿ ನೇಮಕ ಮಾಡಿದೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net