ಈ ದರೋಡೆ ನಂತರ ಅಂಗಡಿ ಮಾಲೀಕ, ಹತ್ತಿರದ ಪೊಲೀಸ್ ಠಾಣೆಯಾದ ರುಡೌಲಿ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾನೆ. ದೂರಿನ ಪ್ರಕಾರ, ಕದ್ದೊಯ್ದ ನೆಕ್ಲೆಸ್ ಸುಮಾರು 26 ಗ್ರಾಂ ಇದ್ದು, ಇದರ ಬೆಲೆ 3,80,000 ಎಂದು ನಮೂದಿಸಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ಫೂಟೆಜ್ ಮೂಲಕ ಕಳ್ಳಿಯನ್ನು ಪತ್ತೆ ಹಚ್ಚುವುದಾಗಿ ಭರವಸೆ ನೀಡಿದ್ದಾರೆ.