ಪೆಟ್ರೋಲ್​ 458 ಆಗಿದೆ; ಆದರೂ ನಾವು ಸರ್ಕಾರವನ್ನು ಬೆಂಬಲಿಸಲಬೇಕು: ಪಾಕ್​ ಜನರಿಗೆ ಅಫ್ರಿದಿ ಹೇಳಿದ್ದೇನು ಗೊತ್ತೆ?Shahid Afridi

ನಾವು ಸರ್ಕಾರವನ್ನು ಬೆಂಬಲಿಸಬೇಕು: ಶಾಹಿದ್ ಅಫ್ರಿದಿ
ನಾವು ಸರ್ಕಾರವನ್ನು ಬೆಂಬಲಿಸಬೇಕು: ಶಾಹಿದ್ ಅಫ್ರಿದಿ
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಯುದ್ಧ
  • ಪಾಕಿಸ್ತಾನದಲ್ಲಿ ಪೆಟ್ರೋಲ್​ ಲೀ.458 ಡೀಸೆಲ್​ ಲೀ. 520 ರೂಪಾಯಿ
  • ನಾವು ಸರ್ಕಾರವನ್ನು ಬೆಂಬಲಿಸಬೇಕು: ಶಾಹಿದ್ ಅಫ್ರಿದಿ
ಪಾಕಿಸ್ತಾನ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಅಲ್ಲಿಯ ಪ್ರದೇಶಕಷ್ಟೇ ಅಪಾಯವನ್ನು ಉಂಟುಮಾಡದೇ ಈಡೀ ಪ್ರಪಂಚವನ್ನು ಆಪತ್ತಿಗೆ ನೂಕುತ್ತಿದೆ.
ಹೋರ್ಮುಜ್​ ಜಲಸಂಧಿಯನ್ನು ಇರಾನ್​ ಮುಚ್ಚಿರುವ ಕಾರಣ ಜಾಗತಿಕ ತೈಲ ಹಾಗೂ ಇಂಧನ ಮಾರುಕಟ್ಟೆಯಲ್ಲಿ ಭಾರಿ ಏರುಪೇರು ಉಂಟಾಗುತ್ತಿದ್ದು, ಇದರಿಂದ ಪೆಟ್ರೋಲ್​,ಡೀಸೆಲ್​ ಬೆಲೆಗಳು ಮುಗಿಲು ಮುಟ್ಟುತ್ತಿವೆ. ಪಶ್ಚಿಮ ಏಷ್ಯಾದ ಯುದ್ಧದ ಕಾರಣ ಆರ್ಥಿಕ ದಿವಾಳಿತನದತ್ತ ಪಾಕಿಸ್ತಾನ ಹೆಜ್ಜೆ ಹಾಕುತ್ತಿದ್ದು, ಈ ಕುರಿತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್​ ಅಫ್ರಿದಿ (Shahid Afridi) ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಪೆಟ್ರೋಲ್​ 458 ಆಗಿದೆ; ನಾನು ಸರ್ಕಾರವನ್ನು ಬೆಂಬಲಿಸಬೇಕು

ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್​ ಹಾಗೂ ಡೀಸೆಲ್​ ದರ ಹೆಚ್ಚಳವಾಗುತ್ತಿರುವ ಕುರಿತು ಮಾತನಾಡಿರುವ ಅಫ್ರಿದಿ, ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಡೆಯುತ್ತಿರುವ ಕಾರಣ ಪ್ರಪಂಚದ ತೈಲ ಮಾರುಕಟ್ಟೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದು ಕೇವಲ ಪಾಕಿಸ್ತಾನಕ್ಕೆ ಮಾತ್ರವಲ್ಲ, ಈಡೀ ಪ್ರಪಂಚವನ್ನೇ ಆವರಿಸಿದೆ. ಇಂದು ಪಾಕಿಸ್ತಾನದಲ್ಲಿ ಪೆಟ್ರೋಲ್​ ದರ ಪ್ರತಿ ಲೀಟರ್​ಗೆ 137 ರೂಪಾಯಿ ಹೆಚ್ಚಳವಾಗುವ ಮೂಲಕ 458 ರೂಪಾಯಿಯಾಗಿದೆ.
ಹಾಗೆಯೇ ಡೀಸೆಲ್​ ಬೆಲೆಯಲ್ಲಿ 184 ರೂಪಾಯಿ ಏರಿಕೆಯಾದ ಪರಿಣಾಮ ಲೀಟರ್​ ಡೀಸೆಲ್​ ಬೆಲೆ 520 ರೂಪಾಯಿಯಾಗಿದೆ. ಆದರೆ ಈ ಕಷ್ಟದ ಸಂದರ್ಭದಲ್ಲಿ ನಾವು ಸರ್ಕಾರವನ್ನು ಬಯ್ಯುವಬದಲು, ರಾಷ್ಟ್ರ ರಕ್ಷಣೆಗಾಗಿ ದುಡಿಯುತ್ತಿರುವ ಸರ್ಕಾರಕ್ಕೆ ಬೆಂಬಲ ಸೂಚಿಸಬೇಕೆಂದು ಹೇಳಿದ್ದಾರೆ.

ಇದು ನಮಗೆ ಸಂಕಷ್ಟದ ಸಮಯ

ಪ್ರಸ್ತುತ ಜಾಗತಿಕ ರಾಜಕಾರಣದಲ್ಲಿ ಭಾರಿ ಬದಲಾವಣೆ ನಡೆಯುತ್ತಿದ್ದು, ನಮಗೆ ಇದು ಸಂಕಷ್ಟದ ಸಮಯವಾಗಿದೆ. ಈ ಸಂದರ್ಭದಲ್ಲಿ ನಾವು ತಾಳ್ಮೆ ವಹಿಸಿದರೇ ಖಂಡಿತವಾಗಿ ನಾವು ಸುಖಕರ ಜೀವನ ನಡೆಸಲು ಸಾಧ್ಯವಿದೆ ಎಂದು ಅಫ್ರಿದಿ ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net