ಈ ಭೀಕರ ಘಟನೆಯ ಬೆನ್ನಲ್ಲೇ ರ‍್ಯಾಪಿಡ್ ಆಕ್ಷನ್ ಫೋರ್ಸ್‌ನ ಇನ್ಸ್ಪೆಕ್ಟರ್ ಜನರಲ್ ಸೀಮಾ ಧುಂಧಿಯಾ ಅವರು ಉನ್ನತ ಮಟ್ಟದ ಸಭೆ ಕರೆದು, ಜಂತರ್ ಮಂತರ್ ಪ್ರತಿಭಟನೆಯಲ್ಲಿ "ಅತಿಯಾದ ಶಕ್ತಿಪ್ರಯೋಗ" ಮಾಡಿದ್ದು ನಿಯಮಬಾಹಿರ ಹಾಗೂ ಅನಗತ್ಯವಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮುಂದಿನ ಆದೇಶದವರೆಗೆ ದೆಹಲಿಯಲ್ಲಿ ಪಂಪ್ ಆ್ಯಕ್ಷನ್ ಗನ್, ಎಆರ್‌ಜಿ, ಎಲೆಕ್ಟ್ರಿಕ್ ಶಾಕ್ ಅಸ್ತ್ರಗಳನ್ನು ಬಳಸದಂತೆ ಮತ್ತು ವಿತರಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಘಟನೆಯ ಬಗ್ಗೆ ಆಂತರಿಕ ತನಿಖೆಗೆ ಆದೇಶಿಸಿದ್ದಾರೆ.