ಹೌದು, ಕೇಳಲು ಅಚ್ಚರಿಯೆನಿಸಿದರೂ ಇದು ನಂಬಲೇಬೇಕಾದ ಸತ್ಯ. ಫಿನ್ಲ್ಯಾಂಡ್ ಸೂಪರ್ಮಾರ್ಕೆಟ್ಗಳಲ್ಲಿ ಸಿಂಗಲ್ಸ್ ಆಗಿರುವವರು ಒಂಟಿತನ ಕಳಚಿಕೊಳ್ಳಲು ರೋಚಕ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಸೂಪರ್ಮಾರ್ಕೆಟ್ಗೆ ಭೇಟಿ ನೀಡುವ ಗ್ರಾಹಕರು ತಮಗೆ ಸಂಗಾತಿ ಬೇಕು ಎಂಬುದನ್ನು ಬಹಿರಂಗವಾಗಿ ಘೋಷಿಸಲು ಕೇವಲ ಕೈಯೊಂದರಲ್ಲಿ ಗುಲಾಬಿ ಬಣ್ಣದ (ಪಿಂಕ್) ಬುಟ್ಟಿಯನ್ನು ಹಿಡಿದುಕೊಂಡು ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡಿದರೆ ಸಾಕು, ಪ್ರೇಮದ ಹುಡುಕಾಟ ಸುಲಭವಾಗುತ್ತದೆ.