ಡ್ರಗ್ಸ್ ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ಪಂಜಾಬ್ ಸಿಎಂ ಮಾನ್ | Parvinder Singh case

ಪಂಜಾಬ್‌ನಲ್ಲಿ ಮಾದಕವಸ್ತು ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಜೋತಾ ಅವರ ಹತ್ಯೆಗೆ ಸಂಬಂಧಿಸಿದ ರಾಜಕೀಯ ವಾಕ್ಸಮರ ತೀವ್ರಗೊಂಡ ಹಿನ್ನೆಲೆ ಮಂಗಳವಾರ(ಅ. 20) ಸಿಎಂ ಭಗವಂತ್ ಮಾನ್, ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸುವುದಾಗಿ ಘೋಷಣೆ ಮಾಡಿದ್ದಾರೆ.
ಡ್ರಗ್ಸ್ ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ಪಂಜಾಬ್ ಸಿಎಂ ಮಾನ್ | Parvinder Singh case
Published on: 

ಚಂಡೀಗಢ: ಪಂಜಾಬ್‌ನಲ್ಲಿ ಮಾದಕವಸ್ತು ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಜೋತಾ ಅವರ ಹತ್ಯೆಗೆ ಸಂಬಂಧಿಸಿದ ರಾಜಕೀಯ ವಾಕ್ಸಮರ ತೀವ್ರಗೊಂಡ ಹಿನ್ನೆಲೆ ಮಂಗಳವಾರ(ಅ. 20) ಸಿಎಂ ಭಗವಂತ್ ಮಾನ್, ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸುವುದಾಗಿ ಘೋಷಣೆ ಮಾಡಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಡ್ರಗ್ಸ್​ ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಜೋಟಾ ಅವರ ತಂದೆ ಮತ್ತು ಕುಟುಂಬದ ಪರವಾಗಿ ನಾವು ದೃಢವಾಗಿ ನಿಲ್ಲುತ್ತೇವೆ. ಕುಟುಂಬದ ಬೇಡಿಕೆಯನ್ನು ಸ್ವೀಕರಿಸಿ, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುತ್ತಿದ್ದೇವೆ.

Also Read
ಪತ್ನಿಯೊಂದಿಗೆ ಕೌಟುಂಬಿಕ ಕಲಹ: ವಿಡಿಯೋ ಮಾಡಿಟ್ಟು ಬೆಟ್ಟದ ಮೇಲಿಂದ ಹಾರಿ ಪ್ರಾಣಬಿಟ್ಟ ಅಂಚೆ ಇಲಾಖೆ ಉದ್ಯೋಗಿ | Family dispute
ಡ್ರಗ್ಸ್ ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ಪಂಜಾಬ್ ಸಿಎಂ ಮಾನ್ | Parvinder Singh case

ಮಾದಕ ದ್ರವ್ಯ ಕಳ್ಳಸಾಗಣೆದಾರರ ವಿರುದ್ಧದ ನಮ್ಮ ಹೋರಾಟವು ಅಂತಿಮ ಹಂತದ್ದಾಗಿದೆ. ಪಂಜಾಬನ್ನು ನಶಾಮಕ್ತಗೊಳಿಸಲು ನಾವು ಯಾವುದೇ ಕಠಿಣ ಕ್ರಮ ಕೈಗೊಳ್ಳಬೇಕಾದರೂ ಹಿಂದೆ ಸರಿಯಲ್ಲ ಎಂದು ಹೇಳಿದ್ದಾರೆ.

ಅ. 13ರಂದು ಮಾನ್ಸಾ ನಗರದಲ್ಲಿರುವ ಮೆಡಿಕಲ್​ ಸ್ಟೋರ್​ನಲ್ಲಿ ಡ್ರಗ್ಸ್​ ಮಾರಾಟವಾಗುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಪರ್ವಿಂದರ್​, ಇದನ್ನು ಹೇಗಾದರೂ ಮಾಡಿ ಬಟಾಬಯಲು ಮಾಡಬೇಕು. ಮತ್ತು ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸಬೇಕು ಎಂಬ ಮಹತ್ವದ ಉದ್ದೇಶದಲ್ಲಿ ಕೈಗೊಂಡ ಸ್ಟಿಂಗ್ ಆಪರೇಷನ್​ ವೇಳೆ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದರು (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net