ಪತ್ನಿಯೊಂದಿಗೆ ಕೌಟುಂಬಿಕ ಕಲಹ: ವಿಡಿಯೋ ಮಾಡಿಟ್ಟು ಬೆಟ್ಟದ ಮೇಲಿಂದ ಹಾರಿ ಪ್ರಾಣಬಿಟ್ಟ ಅಂಚೆ ಇಲಾಖೆ ಉದ್ಯೋಗಿ | Family dispute

ಕೌಟುಂಬಿಕ ಕಲಹದಿಂದ ಬೇಸತ್ತ ಅಂಚೆ ಇಲಾಖೆಯ ಉದ್ಯೋಗಿಯೊಬ್ಬರು ಅಕ್ಟೋಬರ್ 12ರಂದು 13 ನಿಮಿಷಗಳ ವಿಡಿಯೋ ಮಾಡಿಟ್ಟು ಸುಮಾರು 1700 ಅಡಿ ಎತ್ತರದ ಕಲ್ಲಿನ ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪತ್ನಿಯೊಂದಿಗೆ ಕೌಟುಂಬಿಕ ಕಲಹ: ವಿಡಿಯೋ ಮಾಡಿಟ್ಟು ಬೆಟ್ಟದ ಮೇಲಿಂದ ಹಾರಿ ಪ್ರಾಣಬಿಟ್ಟ ಅಂಚೆ ಇಲಾಖೆ ಉದ್ಯೋಗಿ | Family dispute
Published on: 

ಅಹಮದಾಬಾದ್: ಕೌಟುಂಬಿಕ ಕಲಹದಿಂದ ಬೇಸತ್ತ ಅಂಚೆ ಇಲಾಖೆಯ ಉದ್ಯೋಗಿಯೊಬ್ಬರು ಅಕ್ಟೋಬರ್ 12ರಂದು 13 ನಿಮಿಷಗಳ ವಿಡಿಯೋ ಮಾಡಿಟ್ಟು ಸುಮಾರು 1700 ಅಡಿ ಎತ್ತರದ ಕಲ್ಲಿನ ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಥಾಣೆ, ಪುಣೆ ಮತ್ತು ಅಹಲ್ಯಾನಗರ ಜಿಲ್ಲೆಗಳ ಗಡಿಯಲ್ಲಿರುವ ಸುಮಾರು 1,700 ಅಡಿ ಆಳದ ಹರಿಶ್ಚಂದ್ರಗಡದ ಕೊಂಕಣಕಡ ಕಲ್ಲಿನ ಬೆಟ್ಟದ ಬಳಿ ಈ ಘಟನೆ ನಡೆದಿದೆ. ಭಾವನಗರದ ಚಿತ್ರಾ ನಿವಾಸಿ ಮತ್ತು ಮೂಲತಃ ರಾಜ್‌ಪಾರಾದ ವಿಶ್ವರಾಜ್ ಗೋಹಿಲ್ ಆತ್ಮಹತ್ಯೆ ಮಾಡಿಕೊಂಡವರು.

ಬೆಟ್ಟದ ಬಳಿ ದಾರಿಹೋಕರು ಬೈಕ್ ಮತ್ತು ಮೊಬೈಲ್ ಫೋನ್ ಅನ್ನು ಗಮನಿಸಿ ಅಹಲ್ಯಾನಗರ ಜಿಲ್ಲೆಯ ರಾಜೂರ್ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕಮರಿಯ ಆಳವನ್ನು ಪರಿಗಣಿಸಿ, ಪೊಲೀಸರು ಡ್ರೋನ್ ಮೂಲಕ ಶವವನ್ನು ಪತ್ತೆಹಚ್ಚಿದ್ದಾರೆ. ಸುಮಾರು 24 ಗಂಟೆಗಳ ನಂತರ ಶವವನ್ನು ಹೊರತೆಗೆದು ಭಾವನಗರಕ್ಕೆ ಕಳುಹಿಸಲಾಗಿದೆ. ಆತ್ಮಹತ್ಯೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Also Read
ಸ್ವಚ್ಛತೆಯ ಭಾಗವಾಗಿ ಯಮುನಾ ನದಿ ದಡದಲ್ಲಿ ಬರ್ತಡೇ ಆಚರಿಸಿಕೊಳ್ಳಲು ಕರೆ ನೀಡಿದ ಸಚಿವ ಪರ್ವೇಶ್ ವರ್ಮಾ | Parvesh Verma
ಪತ್ನಿಯೊಂದಿಗೆ ಕೌಟುಂಬಿಕ ಕಲಹ: ವಿಡಿಯೋ ಮಾಡಿಟ್ಟು ಬೆಟ್ಟದ ಮೇಲಿಂದ ಹಾರಿ ಪ್ರಾಣಬಿಟ್ಟ ಅಂಚೆ ಇಲಾಖೆ ಉದ್ಯೋಗಿ | Family dispute

ಆತ್ಮಹತ್ಯೆಗೂ ಮುನ್ನ ಮಾಡಿರುವ ವೀಡಿಯೊದಲ್ಲಿ, ವಿಶ್ವರಾಜ್ ತಮ್ಮ ವೈವಾಹಿಕ ವಿವಾದದ ಬಗ್ಗೆ ಮಾತನಾಡಿದ್ದು, ತಮ್ಮ ಅತ್ತೆ-ಮಾವನ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಮತ್ತು ಕೌಟುಂಬಿಕ ಹಿಂಸೆ ಮತ್ತು ವೈವಾಹಿಕ ವಿವಾದಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಬದಲಾಯಿಸಲು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

2026 ಫೆಬ್ರವರಿ 8ರಂದು ಗೋಹಿಲ್ ಅವರು, ಧರಾಬಾ ಅಜಯ್ಸಿನ್ಹ್ ಸರ್ವಯ್ಯ ಎಂಬುವರನ್ನು ಮದುವೆಯಾಗಿದ್ದಾರೆ. ಕಳೆದ ತಿಂಗಳು ಸೆ. 12ರಂದು ಪತಿ ವಿರುದ್ಧ ಪತ್ನಿ ಹಲ್ಲೆ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪ ಮಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 9 ರಂದು ಗೋಹಿಲ್ ಕೋರ್ಟ್​ನಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ವಿಡಿಯೋದಲ್ಲಿ ಗೋಹಿಲ್, ಪತ್ನಿ ಮತ್ತು ತನ್ನ ನಡುವಿನ ಈ ವಿವಾದವು ತನಗೆ ತೀವ್ರ ಮಾನಸಿಕ ಯಾತನೆಯನ್ನುಂಟುಮಾಡಿದೆ ಎಂದು ಹೇಳಿದ್ದಾರೆ. ಮತ್ತು ತನ್ನ ಕುಟುಂಬದ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ ಎಂದು ಆರೋಪಿಸಿದ್ದಾರೆ. ರಾಜಿ ಪ್ರಕ್ರಿಯೆ ಮತ್ತು ಆಭರಣಗಳಿಗೆ ಸಂಬಂಧಿಸಿದ ವಿವಾದದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net