ಈ ಕುರಿತು ಮಾತನಾಡಿರುವ ವಿ.ನಾರಾಯಣನ್, ಇಂದು ನಾವು PSLV C62 / EOS - N1 ಮಿಷನ್ ಅನ್ನು ಪ್ರಯತ್ನಿಸಿದ್ದೇವೆ. PSLV ವಾಹನವು ನಾಲ್ಕು ಹಂತದ ವಾಹನವಾಗಿದ್ದು, ಎರಡು ಘನ ಹಂತಗಳು ಮತ್ತು ಎರಡು ದ್ರವ ಹಂತಗಳನ್ನು ಹೊಂದಿದೆ. ಮೂರನೇ ಹಂತದ ಅಂತ್ಯದ ವೇಳೆಗೆ ವಾಹನದ ಕಾರ್ಯಕ್ಷಮತೆ ನಿರೀಕ್ಷೆಯಂತೆ ಇತ್ತು. ಮೂರನೇ ಹಂತದ ಅಂತ್ಯದ ವೇಳೆಗೆ ವಾಹನದಲ್ಲಿ ಹೆಚ್ಚಿನ ಅಡಚಣೆ ಕಂಡು ಬಂದಿದೆ. ತರುವಾಯ ಹಾರಾಟದ ಮಾರ್ಗದಲ್ಲಿ ವಿಚಲನತೆ ಕಂಡಿದೆ. ಡೇಟಾವನ್ನು ವಿಶ್ಲೇಷಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.