ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಭಾರತ ಸಾಗುತ್ತಿದೆ: ಪ್ರಧಾನಿ ಮೋದಿ | PM Modi

ಪ್ರಧಾನಿ ಮೋದಿ
ಪ್ರಧಾನಿ ಮೋದಿ
Published on
ಅಹ್ಮದಾಬಾದ್: ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಯಾಗುವತ್ತ ಸಾಗುತ್ತಿದೆ ಎಂದು ಭಾನುವಾರ(ಜ. 11) ಪ್ರಧಾನಿ ಮೋದಿ(PM Modi) ಹೇಳಿದ್ದಾರೆ.
ರಾಜ್‌ಕೋಟ್‌ನಲ್ಲಿ ನಡೆದ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನದಲ್ಲಿ ಮಾತನಾಡಿರುವ ಅವರು, ಹಣದುಬ್ಬರ ನಿಯಂತ್ರಣದಲ್ಲಿದೆ, ಸ್ಥೂಲ ಸ್ಥಿರತೆ ಪ್ರಬಲವಾಗಿದೆ ಹಾಗೂ ಭಾರತ ಇಂದು ಅಭೂತಪೂರ್ವ ನಿಶ್ಚಿತತೆಯೊಂದಿಗೆ ಎದ್ದು ಕಾಣುತ್ತಿದೆ. ಶೀಘ್ರದಲ್ಲೇ ಮೂರನೇ ಆರ್ಥಿಕ ರಾಷ್ಟ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಜಾಗತಿಕ ಭರವಸೆಗಳು ಹೆಚ್ಚುತ್ತಿವೆ. ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ, ಜೆನೆರಿಕ್ ಔಷಧಿಗಳು ಮತ್ತು ಲಸಿಕೆಗಳಲ್ಲಿ ಪ್ರಥಮ ಸ್ಥಾನವನ್ನು ಭಾರತ ಹೊಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಅತಿದೊಡ್ಡ ಮೊಬೈಲ್ ಡೇಟಾ ಗ್ರಾಹಕ, ಯುಪಿಐ ಮೂಲಕ ಅಗ್ರ ಡಿಜಿಟಲ್ ಪಾವತಿ ವೇದಿಕೆ, ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ಮತ್ತು ಸೌರಶಕ್ತಿ ಮತ್ತು ವಾಯುಯಾನ ಮಾರುಕಟ್ಟೆಗಳಲ್ಲಿ ಅಗ್ರ ಮೂರು ಸ್ಥಾನಗಳಲ್ಲಿ ಸ್ಥಾನ ಪಡೆದಿದೆ ಎಂದು ಹೇಳಿದ್ದಾರೆ.
ಐಎಂಎಫ್ ಭಾರತವನ್ನು ಜಾಗತಿಕ ಬೆಳವಣಿಗೆಯ ಎಂಜಿನ್ ಎಂದು ಕರೆಯುತ್ತದೆ. ಎಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತವು ಭವಿಷ್ಯ ನುಡಿಯುವ ಸಾಮರ್ಥ್ಯ, ರಾಜಕೀಯ ಸ್ಥಿರತೆ ಮತ್ತು ಮಧ್ಯಮ ವರ್ಗದ ಖರೀದಿ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net