ಸಿಇಸಿ ವಿರುದ್ಧ ಮತ್ತೆ ಪ್ರತಿಭಟನೆ; ನ. 01ರ ರ‍್ಯಾಲಿ ಮುಂದೂಡಿ: ರಾಹುಲ್ ಗಾಂಧಿಗೆ ವ್ಯಾಪಾರಿಗಳ ಸಂಘ ಮನವಿ | Rahul Gandhi

ಎಸ್​ಐಆರ್ ಅಕ್ರಮ ವಿವಾದ ಮತ್ತು ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಮತ್ತೆ ಬೀದಿಗಿಳಿಯಲು ಮುಂದಾಗಿದೆ. ಆದರೆ, ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಿಗದಿಯಾಗಿದ್ದ ರ‍್ಯಾಲಿಯನ್ನು ಮುಂದೂಡುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಸಿಟಿಐ) ರಾಹುಲ್ ಗಾಂಧಿಯವರಿಗೆ ಮನವಿ ಮಾಡಿದೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
Published on: 

ನವದೆಹಲಿ: ಎಸ್​ಐಆರ್ ಅಕ್ರಮ ವಿವಾದ ಮತ್ತು ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಮತ್ತೆ ಬೀದಿಗಿಳಿಯಲು ಮುಂದಾಗಿದೆ. ಆದರೆ, ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಿಗದಿಯಾಗಿದ್ದ ರ‍್ಯಾಲಿಯನ್ನು ಮುಂದೂಡುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಸಿಟಿಐ) ರಾಹುಲ್ ಗಾಂಧಿಯವರಿಗೆ ಮನವಿ ಮಾಡಿದೆ.

ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಇಂಡಿಯಾ ಬ್ಲಾಕ್ ವತಿಯಿಂದ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಯೋಜಿಸಲಾಗಿದೆ. ಆದರೆ ಈ ಪ್ರತಿಭಟನೆಯಿಂದ ತಮ್ಮ ವ್ಯಾಪಾರಕ್ಕೆ ಭಾರಿ ನಷ್ಟವಾಗಲಿದೆ ಎಂದು ದೆಹಲಿ ವ್ಯಾಪಾರಿಗಳ ಸಂಘ ಅಲವತ್ತುಕೊಂಡಿದೆ.

ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿರುವ ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಅವರು, ದೀಪಾವಳಿಯನ್ನು ಗಮನದಲ್ಲಿಟ್ಟುಕೊಂಡು ರ‍್ಯಾಲಿಯನ್ನು ಮುಂದೂಡಬೇಕೆಂದು ವಿನಂತಿಸಿದ್ದಾರೆ. ಪ್ರತಿಭಟನೆ ನಡೆದರೇ ಸುಮಾರು 10,000 ಕೋಟಿ ರೂ.ಗಳವರೆಗೆ ನಷ್ಟವಾಗಲಿದೆ ಎಂದು ತಿಳಿಸಿದ್ದಾರೆ.

Also Read
ಚುನಾವಣಾ ಗಲಾಟೆ: ಸೇಡಿನ ರಾಜಕೀಯ ಅನುಸರಿಸಿ, ರಾಜ್ಯದ ಖ್ಯಾತಿಗೆ ಧಕ್ಕೆ ತರುತ್ತಿದ್ದಾರೆ: ಜಗನ್ ವಿರುದ್ಧ ಸಿಎಂ ಚಂದ್ರಬಾಬು ನಾಯ್ದು ವಾಗ್ದಾಳಿ | CM Chandrababu Naidu
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ

ದೀಪಾವಳಿ ಮತ್ತು ಧಂತೇರಸ್ ಸಮಯದಲ್ಲಿ ಈ ಪ್ರದೇಶದಲ್ಲಿ 25,000 ಕೋಟಿ ರೂ.ಗಳ ವ್ಯವಹಾರ ನಡೆಯಲಿದೆ. ಪ್ರತಿಭಟನಾ ದಿನದಂದು ಎಲ್ಲಾ ವ್ಯಾಪಾರ ಸಂಸ್ಥೆಗಳು ಮುಚ್ಚಬೇಕಾಗುತ್ತದೆ. ಅಲ್ಲದೇ ಪೊಲೀಸರು ಅಲ್ಲಿ ಮುಂಚಿತವಾಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಇದು ಪ್ರತಿಭಟನೆಗೂ ಕೆಲವು ದಿನಗಳ ಮೊದಲು ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಚಿನ್ನ ಮತ್ತು ಬೆಳ್ಳಿಯ ಜೊತೆಗೆ, ಎಲೆಕ್ಟ್ರಾನಿಕ್ಸ್, ಬಟ್ಟೆ, ಅಡುಗೆ ಸಾಮಾನುಗಳು, ಒಣ ಹಣ್ಣುಗಳು, ಸಿಹಿತಿಂಡಿಗಳು, ವಾಹನಗಳು, ಉಡುಗೊರೆ ವಸ್ತುಗಳು ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಆದಾಗ್ಯೂ, ಇಂಡಿಯಾ ಬ್ಲಾಕ್ ರ್ಯಾಲಿಯಿಂದ ಈ ವ್ಯವಹಾರಗಳಿಗೆ ಅಡ್ಡಿಯಾಗಲಿದೆ. ಇದರಿಂದ ಒಂದೇ ದಿನ 10,000 ಕೋಟಿ ರೂ. ನಷ್ಟವಾಗುವ ಸಾಧ್ಯತೆಯಿದೆ.

Also Read
ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಅಬ್ಬರ: ಅ. 28 ಕ್ಕೆ ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ವರುಣಾರ್ಭಟ; ಹವಾಮಾನ ಇಲಾಖೆ ರೆಡ್ ಅಲರ್ಟ್! Cyclone Alert
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ

ನವೆಂಬರ್ 6ರಂದು ಧಂತೇರಸ್, ನವೆಂಬರ್ 8ರಂದು ದೀಪಾವಳಿ ಮತ್ತು ನವೆಂಬರ್ 10ರಂದು ಭಾಯಿ ದೂಜ್ ನಂತಹ ಹಬ್ಬಗಳಿವೆ. ಹಬ್ಬಗಳಿಗೆ ಒಂದು ವಾರದ ಮೊದಲು ವ್ಯಾಪಾರ ಚುರುಕಾಗಿರುತ್ತದೆ. ಆದ್ದರಿಂದ, ಈ ರ್ಯಾಲಿಯನ್ನು ನವೆಂಬರ್ 10ರವರೆಗೆ ಮುಂದೂಡುವಂತೆ ಮನವಿ ಮನವಿ ಮಾಡಿದ್ದಾರೆ.

ಈಗಾಗಲೇ ಅಕ್ಟೋಬರ್‌ನಲ್ಲಿ ನಡೆದ ಹಲವು ರ್ಯಾಲಿಗಳಿಂದಾಗಿ ಈಗಾಗಲೇ ಗಂಭೀರ ನಷ್ಟವನ್ನು ಅನುಭವಿಸಿದ್ದೇವೆ. ರಸ್ತೆ ತಡೆ, ಸಾರಿಗೆ ಸೌಲಭ್ಯಗಳ ಕೊರತೆ ಮತ್ತು ಸರ್ಕಾರದ ನಿರ್ಬಂಧಗಳಿಂದಾಗಿ ವ್ಯಾಪಾರಿಗಳು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ, ವಿನಂತಿಯನ್ನು ಗಮನದಲ್ಲಿಟ್ಟುಕೊಂಡು, ರ‍್ಯಾಲಿಯನ್ನು ಮುಂದೂಡುವಂತೆ ಒತ್ತಾಯಿಸಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net