ಕುಟುಂಬ ರಾಜಕೀಯವನ್ನೇ ಆಶ್ರಯಿಸಿರುವ ಪಕ್ಷಗಳು ಮಹಿಳೆಯರಿಗೆ ಅಧಿಕಾರ ನೀಡಲು ಭಯಪಡುತ್ತಿವೆ, ಹೊರಗಿನ ಹೆಣ್ಣುಮಕ್ಕಳು ಬೆಳೆಯುವುದು ವಿಪಕ್ಷಗಳಿಗೆ ಇಷ್ಟವಿಲ್ಲ, ಮಹಿಳೆಯರಿಗೆ ಅಧಿಕಾರ ನೀಡಿದರೆ ತಮ್ಮ ನಾಯಕತ್ವಕ್ಕೆ ಸವಾಲು ಎದುರಾಗುತ್ತದೆ ಎಂಬ ಭಯ ಅವರೆಲ್ಲರಲ್ಲೂ ಆವರಿಸಿದೆ, ಲಕ್ಷಾಂತರ ಮಹಿಳೆಯರು ಇಂದು ಪಂಚಾಯತ್‌ಗಳಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆಯ ಬಳಿಕ ಅವರಿಗೆಲ್ಲಾ ಹೆಚ್ಚಿನ ಸ್ಥಾನಗಳು ದೊರೆಯುತ್ತವೆ ಎಂಬ ಕಾರಣಕ್ಕಾಗಿಯೇ ಈ ಪಕ್ಷಗಳು ತಿದ್ದುಪಡಿಯನ್ನು ವಿರೋಧಿಸಿವೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳನ್ನು ದೇಶದ ಮಹಿಳೆಯರು ಕ್ಷಮಿಸುವುದಿಲ್ಲ ಎಂದು ಪ್ರಧಾನಿ ಕಿಡಿಕಾರಿದರು.