ಪ್ರಧಾನಿಗಳೇ, ಭರವಸೆ ನಂತರ ಇರಲಿ..ಮೊದಲು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ; ಮೋದಿ ವಿಡಿಯೋಗೆ CJP ವಕ್ತಾರ ಆಶುತೋಶ್​ ರಾಂಕಾ ವ್ಯಂಗ್ಯ! Ashutosh Ranka on PM Modi

ಪ್ರಧಾನಿ ಮೋದಿ ವಿಡಿಯೋ ಸಂದೇಶಕ್ಕೆ ಕಾಕ್ರೋಚ್ ಜನತಾ ಪಾರ್ಟಿ (CJP) ವಕ್ತಾರ ಆಶುತೋಶ್ ರಾಂಕಾ ವ್ಯಂಗ್ಯ
ಪ್ರಧಾನಿ ಮೋದಿ ವಿಡಿಯೋ ಸಂದೇಶಕ್ಕೆ ಕಾಕ್ರೋಚ್ ಜನತಾ ಪಾರ್ಟಿ (CJP) ವಕ್ತಾರ ಆಶುತೋಶ್ ರಾಂಕಾ ವ್ಯಂಗ್ಯ
Published on

ಪ್ರಮುಖ ಮುಖ್ಯಾಂಶಗಳು

  • ನೀಟ್ ಅಕ್ರಮದ ಬಗ್ಗೆ ಪ್ರಧಾನಿ ಮೋದಿ ವಿಡಿಯೋ ಸಂದೇಶ
  • ಕಾಕ್ರೋಚ್ ಜನತಾ ಪಾರ್ಟಿ (CJP) ವಕ್ತಾರ ಆಶುತೋಶ್ ರಾಂಕಾ ವ್ಯಂಗ್ಯ
  • ಕಠಿಣ ಕ್ರಮದ ಮಾತಿಗಿಂತ ಮೊದಲು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲಿ ಎಂದು ಆಗ್ರಹ
ನವದೆಹಲಿ: ಸೋಮವಾರ (ಜು.20) ದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೀಟ್​ ಪರೀಕ್ಷಾ ಅಕ್ರಮ ವಿರೋಧಿಸಿ, ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ನಿನ್ನೆ (ಗುರುವಾರ, ಜು.23) ರಾತ್ರಿ ವಿಡಿಯೋವೊಂದನ್ನು ಹಂಚಿಕೊಂಡು ನೀಟ್​ ಅಕ್ರಮಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ.

ಈಗಾಗಲೇ ಕ್ರಮ ಕೈಗೊಂಡಿದ್ದೆವೆ!

ವಿಡಿಯೋನಲ್ಲಿ ಮಾತನಾಡಿರುವ ಪ್ರಧಾನಿಗಳು, ನೀಟ್​ ಅಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಅಕ್ರಮದಲ್ಲಿ ಭಾಗಿಯಾದ ಆರೋಪಿಗಳು ಜೈಲಿನಲ್ಲಿದ್ದಾರೆ. ನೀಟ್​ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ನಾಳೆ ಕ್ಯಾಬಿನೆಟ್​​ನಲ್ಲಿ ಸಭೆ ನಡೆಸಲಿದ್ದು, ಮಳೆಗಾಲದ ಅಧಿವೇಶನ ಮುಗಿಯುವ ಹೊತ್ತಿಗೆ ಮಸೂದೆಯನ್ನು ಅಂಗೀಕಾರ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಈ ಅಕ್ರಮದಲ್ಲಿ ಯಾರೇ ಭಾಗಿಯಾಗಿರಲಿ ಅವರ ವಿರುದ್ಧ ನಿರ್ದಾಕ್ಷಣ್ಯ ಕ್ರಮವನ್ನು ನಮ್ಮ ಸರ್ಕಾರ ತೆಗೆದುಕೊಳ್ಳುತ್ತದೆ. ಅದಕ್ಕಾಗಿ ನಿನ್ನೆ ಸ್ಪೀಡ್​ ಟ್ರಯಲ್​ ನ್ಯಾಯಾಲಯವನ್ನು ಕೂಡ ಸ್ಥಾಪಿಸಿದ್ದೇವೆ ಎಂದು ಪ್ರಧಾನಿಗಳು ತಿಳಿಸಿದ್ದಾರೆ.

ಮೊದಲು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲಿ!

ಪ್ರಧಾನಿಗಳ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಕಾಕ್ರೋಚ್​ ಜನತಾ ಪಾರ್ಟಿ ವಕ್ತಾರ, ಆಶುತೋಷ್​ ರಾಂಕಾ (Ashutosh Ranka on PM Modi) ನಾನು ಪ್ರಧಾನಿಗಳ ವಿಡಿಯೋವನ್ನು ನೋಡಿದ್ದೆನೆ. ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಅದಕ್ಕೂ ಮೊದಲು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ನೀಡಬೇಕು, ಆಮೇಲೆ ಮುಂದಿನ ಮಾತು ಎಂದು ಹೇಳಿದ್ದಾರೆ.

ಉಪವಾಸ ನಿಲ್ಲಿಸಿದ ವಾಂಗ್​ಚುಕ್​!

ನೀಟ್​ ಪರೀಕ್ಷೆಯಲ್ಲಾದ ಅಕ್ರಮವನ್ನು ವಿರೋಧಿಸಿ ಕಳೆದ 26 ದಿನಗಳಿಂದ ಉಪವಾಸ ನಡೆಸುತ್ತಿದ್ದ ಪರಿಸರವಾದಿ ಸೋನಮ್​ ವಾಂಗ್​ಚುಕ್​ ತಮ್ಮ ಉಪವಾಸವನ್ನು ಹಿಂಪಡೆದಿದ್ದಾರೆ. ಸರ್ಕಾರ ನೀಟ್​ ಅಕ್ರಮಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮದ ಭರವಸೆ ನೀಡಿದ್ದು, ನನಗೆ ಸರ್ಕಾರದ ಮೇಲೆ ನಂಬಿಕೆಯಿದೆ, ಹೀಗಾಗಿ ಉಪವಾಸವನ್ನು ಹಿಂಪಡೆದಿರುವುದಾಗಿ ವಾಂಗ್​ಚುಕ್​ ಹೇಳಿದ್ದಾನೆ, (ಏಜನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net