Bihar Exit Poll | ಮತಹಂಚಿಕೆಯಲ್ಲಿ ಕಾಂಗ್ರೆಸ್​ಗಿಂತ, ಜನ್​ ಸುರಾಜ್​ ಮುಂದು.? ಹೀಗಿದೆ ನೋಡಿ ಎಕ್ಸಿಟ್​ ಪೋಲ್ಸ್ ಭವಿಷ್ಯ !

Bihar Exit Poll |  ಪ್ರಶಾಂತ್ ಕಿಶೋರ್ ಮತ್ತು ರಾಹುಲ್​ ಗಾಂಧಿ
Bihar Exit Poll | ಪ್ರಶಾಂತ್ ಕಿಶೋರ್ ಮತ್ತು ರಾಹುಲ್​ ಗಾಂಧಿ
Published on
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ಎಲ್ಲಾ ಸಮೀಕ್ಷೆಗಳು ಎನ್‌ಡಿಎಗೆ ಸ್ಪಷ್ಟ ಬಹುಮತ ಸಾಧಿಸಲಿದೆ ಎಂದಿವೆ. ಎಕ್ಸಿಟ್​ ಪೋಲ್​​ಗಳ ಪೋಲ್​ ಆಪ್​ ಪೋಲ್​ ನೋಡಿದಾಗ ಆಡಳಿತಾರೂಢ ಮೈತ್ರಿಕೂಟ ರಾಜ್ಯದ 243 ಸ್ಥಾನಗಳಲ್ಲಿ 147 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿವೆ.
ಬಹುಮತಕ್ಕೆ 122 ಸದಸ್ಯರ ಅವಶ್ಯಕತೆ ಇದ್ದು, ಬಿಜೆಪಿ ನೇತೃತ್ವದ ಮೈತ್ರಿಕೂಟ ಅದನ್ನು ಮೀರಿ ಹೆಚ್ಚು ಸ್ಥಾನಗಳಿಸಲಿದೆ, ಇತ್ತ ವಿರೋಧ ಪಕ್ಷ ಮಹಾಘಟಬಂಧನ್ 90 ಸ್ಥಾನಗಳನ್ನು ಮತ್ತು ಜನ ಸುರಾಜ್ ಪಕ್ಷವು ಕೇವಲ 1 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗಿದೆ.
ಪೀಪಲ್ಸ್ ಪಲ್ಸ್ ಸಂಸ್ಥೆ ಎನ್‌ಡಿಎ 133-159, ಮಹಾಘಟಬಂಧನ್ 75-101 ಮತ್ತು ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ 0-5 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದು, ಮತ ಹಂಚಿಕೆಯಲ್ಲಿ ಎನ್‌ಡಿಎ 46.2% ಮತ್ತು ಮಹಾ ಮೈತ್ರಿಕೂಟ 37.9% ಪಡೆಯಲಿದೆ ಎಂದು ಅಂದಾಜಿಸಿದೆ.
ಪಕ್ಷಗಳ ಅನುಸಾರ ನೋಡುವುದಾದರೆ ಆರ್‌ಜೆಡಿ ಶೇ.23.3, ಬಿಜೆಪಿ ಶೇ.21.4, ಜೆಡಿಯು ಶೇ.17.6, ಜನ್ ಸುರಾಜ್ ಪಕ್ಷ ಶೇ.9.7 ಮತ್ತು ಕಾಂಗ್ರೆಸ್ ಶೇ.8.7 ರಷ್ಟು ಮತಗಳನ್ನು ಪಡೆಯಲಿದೆ ಎಂದು ಸಮೀಕ್ಷಾರರು ಅಂದಾಜಿಸಿದ್ದಾರೆ.
ಕಳೆದ 2020 ರ ವಿಧಾನಸಭಾ ಚುನಾವಣೆಯ ಮತ ಹಂಚಿಕೆಗೆ ಹೋಲಿಸಿದರೆ, ಆರ್‌ಜೆಡಿ ತನ್ನ 23.5% ಪಾಲಿನಿಂದ 0.2 ಶೇ ಮತಗಳನ್ನು ಕಳೆದುಕೊಂಡರೆ, ಇತ್ತ ಬಿಜೆಪಿ 1.6 ಶೇ ಹೆಚ್ಚು ಮತ ಪಡೆಯುವ ಮೂಲಕ ಅಂಕಗಳನ್ನು ಗಳಿಸಿ 19.8% ರಿಂದ 21.4 ಏರಿಕೆಯಾಗಿದೆ. ಜೆಡಿಯುನ ಮತ ಪ್ರಮಾಣವು ಈ ಬಾರಿ ಹೆಚ್ಚಾಗುವ ನಿರೀಕ್ಷೆ ಇದ್ದು, ಇದು ಎನ್‌ಡಿಎ ಗೆಲುವಿಗೆ ಕೊಡುಗೆ ನೀಡಲಿದೆ.
ಇಲ್ಲಿ ಗಮನಹರಿಸಬಹುದಾದದ ಕುತೂಹಲಕಾರಿ ಅಂಶವೆಂದರೆ, ಕಳೆದ ವರ್ಷ ಸ್ಥಾಪನೆಯಾಗಿರುವ ಜನ್ ಸುರಾಜ್ ಪಕ್ಷ, ಈ ಚುನಾವಣೆಯಲ್ಲಿ 9.7% ಮತ ಪ್ರಮಾಣ ಪಡೆಯುವ ಸಾಧ್ಯತೆ ಇದ್ದು, ಇದು ಶತಮಾನಗಳಷ್ಟು ಹಳೆದದಾದ ಕಾಂಗ್ರೆಸ್‌ಗಿಂತ ಒಂದು ಶೇಕಡಾವಾರು ಹೆಚ್ಚು ಎನ್ನಲಾಗಿದೆ. ಪ್ರಶಾಂತ್ ಕಿಶೋರ್​​ರ ಪಕ್ಷಕ್ಕೆ ಪೀಪಲ್ಸ್ ಪಲ್ಸ್ ಸಂಸ್ಥೆ ಗರಿಷ್ಠ ಐದು ಸ್ಥಾನಗಳನ್ನು ನೀಡಿದ್ದು, ಮತಗಳು, ಸ್ಥಾನಗಳಾಗಿ ಬದಲಾಗಿಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net