ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಪೋಸ್ಟ್: ಬರೋಬ್ಬರಿ 4 ತಾಸು ಅಭಿಷೇಕ್ ಬ್ಯಾನರ್ಜಿ ವಿಚಾರಣೆ ನಡೆಸಿದ ಪೊಲೀಸರು | Abhishek Banerjee

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಭವಾನಿಪೋರ್ ಪೊಲೀಸರು ಶನಿವಾರ(ನ. 14) ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಪೋಸ್ಟ್: ಬರೋಬ್ಬರಿ 4 ತಾಸು ಅಭಿಷೇಕ್ ಬ್ಯಾನರ್ಜಿ ವಿಚಾರಣೆ ನಡೆಸಿದ ಪೊಲೀಸರು | Abhishek Banerjee
Published on: 

ಕೋಲ್ಕತ್ತಾ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಭವಾನಿಪೋರ್ ಪೊಲೀಸರು ಶನಿವಾರ(ನ. 14) ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಶನಿವಾರ ಮಧ್ಯಾಹ್ನ 12.30ಕ್ಕೆ ಭವಾನಿಪೋರ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದ ಬ್ಯಾನರ್ಜಿ, ಸಂಜೆ 4.30 ರ ಸುಮಾರಿಗೆ ಅಲ್ಲಿಂದ ತೆರಳಿದ್ದಾರೆ. ಪೋಸ್ಟ್​​ಗೆ ಸಂಬಂಧಿಸಿದಂತೆ ಅವರ ಹೇಳಿಕೆಯನ್ನು ಪಡೆದುಕೊಂಡಿರುವ ಪೊಲೀಸರು, ಅಗತ್ಯ ಬಿದ್ದರೆ ಮತ್ತೊಮ್ಮೆ ವಿಚಾರಣೆಗೆ ಕರೆಯೋದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಅಭಿಷೇಕ್ ಬ್ಯಾನರ್ಜಿ ಠಾಣೆಯಿಂದ ಹೊರ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಚೋರ್ ಚೋರ್ ಎಂದು ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ಟಿಎಂಸಿ ಬೆಂಬಲಿಗರು, ಬಿಜೆಪಿ ಪ್ರತಿಭಟನಾಕಾರರಿಗೆ ಘೋಷಣೆಗಳನ್ನು ಕೂಗಲು ಹಣ ನೀಡುತ್ತಿದೆ ಎಂದು ಪ್ರತಿ ಘೋಷಣೆಗಳನ್ನು ಕೂಗಿದ್ದಾರೆ.

Also Read
ಸಿನಿಮಾ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ: ಒಂದೇ ಒಂದು ಟೋಪಿಯಿಂದ ಸಿಕ್ಕಿಬಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ಸ್! Madurai Gold Heist
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಪೋಸ್ಟ್: ಬರೋಬ್ಬರಿ 4 ತಾಸು ಅಭಿಷೇಕ್ ಬ್ಯಾನರ್ಜಿ ವಿಚಾರಣೆ ನಡೆಸಿದ ಪೊಲೀಸರು | Abhishek Banerjee

ಮೇ 27ರಂದು ಎಕ್ಸ್​ನಲ್ಲಿ ಪೋಸ್ಟ್ ಹಾಕಿದ್ದ ಬ್ಯಾನರ್ಜಿ, ಸಿಇಸಿಯನ್ನು ಬಂಗಾಳಿ ವಿರೋಧಿ ಗುಜರಾತಿ ಗ್ಯಾಂಗ್‌ನ ಕೈಗೊಂಬೆ ಎಂದು ಬಣ್ಣಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಭವಾನಿಪೋರ್ ನಿವಾಸಿ ಅರ್ನಬ್ಕಾಂತಿ ದಾಸ್ ಅವರು ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), 2023ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಎಫ್‌ಐಆರ್ ದಾಖಲಿಸಲಾಗಿದೆ.

ಬ್ಯಾನರ್ಜಿಯವರ ಹೇಳಿಕೆ ಗುಜರಾತಿ ಸಮುದಾಯವನ್ನು "ಗ್ಯಾಂಗ್" ಎಂದು ಉಲ್ಲೇಖಿಸುವುದು ಅದರ ಸದಸ್ಯರನ್ನು ಅಪರಾಧಿಗಳಂತೆ ಚಿತ್ರಿಸಿದಂತೆ ಮತ್ತು ದೇಶದ ಬಹುತ್ವ ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಹಾಳುಮಾಡುತ್ತದೆ ಎಂದು ದೂರುದಾರರು ಉಲ್ಲೇಖಿಸಿದ್ದಾರೆ.

Also Read
ನಕ್ಸಲರಿಂದ ಹೆಚ್ಚು ಸಂಕಷ್ಟ ಅನುಭವಿಸಿದ್ದು ಬುಡಕಟ್ಟು ಸಮುದಾಯ: ಹಿಂದಿನ ಸರ್ಕಾರಗಳು ಮೂಕ ಪ್ರೇಕ್ಷಕವಾಗಿದ್ದವು: ಪ್ರಧಾನಿ ಮೋದಿ | PM Modi
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಪೋಸ್ಟ್: ಬರೋಬ್ಬರಿ 4 ತಾಸು ಅಭಿಷೇಕ್ ಬ್ಯಾನರ್ಜಿ ವಿಚಾರಣೆ ನಡೆಸಿದ ಪೊಲೀಸರು | Abhishek Banerjee

ವಿಚಾರಣೆಯ ಬಳಿಕ ಮಾತನಾಡಿರುವ ಅಭಿಷೇಕ್ ಬ್ಯಾನರ್ಜಿ, ಅಧಿಕಾರಿಗಳು ನನಗೆ ಕರೆ ಮಾಡಿದಾಗಲೆಲ್ಲಾ ನಾನು ಹೋಗಿದ್ದೇನೆ. ನನ್ನನ್ನು ವಿವಿಧ ಸುಳ್ಳು ಪ್ರಕರಣಗಳಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಹೈಕೋರ್ಟ್ ನಿರ್ದೇಶನದ ಮೇರೆಗೆ ನಾನು ವಿಚಾರಣೆಗೆ ಹಾಜರಾಗುತ್ತಿದ್ದೇನೆ. ವರು ಮತ್ತೆ ಕರೆ ಮಾಡಿದರೆ ನಾನು ಹೋಗುತ್ತೇನೆ ಎಂದು ತಿಳಿಸಿದ್ದಾರೆ.

ಒಂದು ಪೋಸ್ಟ್ ಆಧರಿಸಿ, ಅವರು ನನಗೆ ಎಷ್ಟು ಬೇಕೋ ಅಷ್ಟು ಪ್ರಶ್ನಿಸಿದರು. ಮತ್ತು ನಾನು ಸಹಕರಿಸಿದೆ. ಗುಜರಾತಿ ಗ್ಯಾಂಗ್ ಎಂಬ ಪದ ಬಳಕೆ ಬಗ್ಗೆ ಸ್ಪಷ್ಟೀಕರಣ ನೀಡಿದ ಅವರು, ಬಂಗಾಳಿ ಒಂದು ಭಾಷೆ ಅಲ್ಲ ಎಂದು ಬಿಜೆಪಿ ಹೇಳುತ್ತದೆ. ಅದು ಬಾಂಗ್ಲಾದೇಶಿ ಭಾಷೆ ಎನ್ನುತ್ತದೆ. ಬಿಜೆಪಿ ಮುಖಂಡ ಅಮಿತ್ ಮಾಳವೀಯ ಬಂಗಾಳಿಯನ್ನು ಬಾಂಗ್ಲಾದೇಶಿ ಭಾಷೆ ಎಂದು ಕರೆದಿದ್ದರು ಎಂದಿದ್ದಾರೆ (ಏಜೆನ್ಸೀಸ್).