ಹೋಟೆಲ್​ ರೂಮ್​ನಲ್ಲಿ 26 ವರ್ಷದ ಮಲಯಾಳಂ ನಟಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 20ರ ಯುವಕ! Malayalam Actress

ನಟಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 20ರ ಯುವಕ
ನಟಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 20ರ ಯುವಕ
Published on

ಪ್ರಮುಖ ಮುಖ್ಯಾಂಶಗಳು

  • ಹೋಟೆಲ್ ರೂಮ್​ ಒಂದರಲ್ಲಿ ಮಲಯಾಳಂ ಚಿತ್ರರಂಗದ ನಟಿಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನ
  • ಎರ್ನಾಕುಲಂ ಮೂಲದ 26 ವರ್ಷದ ನಟಿಯೊಂದಿಗೆ 20 ವರ್ಷದ ಇಂಟರ್ನ್‌ಶಿಪ್ ವಿದ್ಯಾರ್ಥಿ ಅನುಚಿತ ವರ್ತನೆ
  • ಚೆನ್ನೈನ ಟಿ ನಗರದಲ್ಲಿರುವ ಥಾಮಸ್ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ನಡೆದ ಘಟನೆ
ಚೆನ್ನೈ: ಹೋಟೆಲ್ ರೂಮ್​ ಒಂದರಲ್ಲಿ ಮಲಯಾಳಂ ಚಿತ್ರರಂಗದ ನಟಿಯೊಬ್ಬರ ( Malayalam Actress ) ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿರುವ ಆಘಾತಕಾರಿ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆದಿದೆ.
ಎರ್ನಾಕುಲಂ ಮೂಲದ 26 ವರ್ಷದ ನಟಿಯೊಂದಿಗೆ 20 ವರ್ಷದ ಇಂಟರ್ನ್‌ಶಿಪ್ ವಿದ್ಯಾರ್ಥಿ ಅನುಚಿತವಾಗಿ ವರ್ತಿಸಲು ಯತ್ನಿಸಿದ್ದಾನೆ. ಈ ಘಟನೆ ಚೆನ್ನೈನ ಟಿ ನಗರದಲ್ಲಿರುವ ಥಾಮಸ್ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ನಡೆದಿದೆ.
ಹೋಟೆಲ್​ನಲ್ಲಿ ತಂಗಿದ್ದ ನಟಿ, ಫುಡ್​​ ಆರ್ಡರ್ ಮಾಡಲು ರೂಮ್​ನಲ್ಲಿರುವ ಇಂಟರ್‌ಕಾಮ್ ಟೆಲಿಫೋನ್ ಅನ್ನು ತೆಗೆದುಕೊಂಡಾಗ, ಅದು ಕೆಟ್ಟು ಹೋಗಿರುವುದನ್ನು ಗಮನಿಸಿದಳು. ಇದಾದ ಕೂಡಲೇ ಆಕೆ ರಿಸೆಪ್ಸನ್​ ಕೌಂಟರ್​ ಬಳಿ ಹೋಗಿ ಫೋನ್​ ಅನ್ನು ರಿಪೇರಿ ಮಾಡಲು ಕೇಳಿದಳು.
ಫೋನ್​ ರಿಪೇರಿ ಮಾಡಲೆಂದು 20 ವರ್ಷದ ಯುವಕ ರೂಮಿಗೆ ಬಂದಿದ್ದ. ತನ್ನ ಕೆಲಸ ಮುಗಿಸಿ ಹಿಂತಿರುಗುವ ಮೊದಲು, ಆತ ರೂಮಿನಲ್ಲಿದ್ದ ನಟಿಯನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದನು. ಇದರಿಂದ ಭಯಭೀತಳಾದ ನಟಿ, ಯುವಕನಿಗೆ ಎಚ್ಚರಿಕೆ ನೀಡಿದಳು. ಆದರೆ, ಆತ ಮತ್ತೆ ಹಾಗೆ ಮಾಡಿದಾಗ, ನಟಿ ಪೊಲೀಸರಿಗೆ ಮಾಹಿತಿ ನೀಡಿದಳು.
ದೂರ ಬಂದ ಬೆನ್ನಲ್ಲೇ ಪಾಂಡಿ ಬಜಾರ್ ಪೊಲೀಸರು ಸ್ಥಳಕ್ಕೆ ತಲುಪಿ ಯುವಕನನ್ನು ಬಂಧಿಸಿದರು. ಫೋನ್ ರಿಪೇರಿ ಮಾಡಿ, ಪುಡ್​ ಆರ್ಡರ್‌ಗಳನ್ನು ತೆಗೆದುಕೊಳ್ಳುತ್ತಿದ್ದೆ. ನಾನು ಅನುಚಿತವಾಗಿ ನಡೆದುಕೊಂಡಿಲ್ಲ ಎಂದು ಪೊಲೀಸರ ಮುಂದೆ ಹೇಳಿದ್ದಾನೆ. ಆತನ ವಿರುದ್ಧ ನಟಿ ದೂರು ದಾಖಲಿಸದೇ ಇರುವುದರಿಂದ ಪೊಲೀಸರು ಯುವಕನಿಗೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net