ಜಂತರ್ ಮಂತರ್​ನಲ್ಲಿ ದಾಳಿ ನಡೆಸಲು ಸಂಚು; ಐಎಸ್ಐ ಬೆಂಬಲಿತ ಭಯೋತ್ಪಾದಕ ಮಾಡ್ಯೂಲ್ ಭೇದಿಸಿದ ಪಂಜಾಬ್ ಪೊಲೀಸರು | Terrorist module bust

ಪಂಜಾಬ್ ಪೊಲೀಸ್
ಪಂಜಾಬ್ ಪೊಲೀಸ್
Published on
ಚಂಡೀಗಢ: ಪಂಜಾಬ್ ಪೊಲೀಸರು ಮಂಗಳವಾರ(ಆ. 04) ಎರಡು ಐಎಸ್‌ಐ ಬೆಂಬಲಿತ ಗಡಿಯಾಚೆಗಿನ ಭಯೋತ್ಪಾದಕ ಮಾಡ್ಯೂಲ್‌ಗಳನ್ನು ಭೇದಿಸಿದ್ದು(Terrorist module bust), ನಾಲ್ವರು ಬಾಲಾಪರಾಧಿಗಳು ಸೇರಿದಂತೆ ಒಂಬತ್ತು ಆರೋಪಿಗಳನ್ನು ಬಂಧಿಸಿದ್ದು, ಜೊತೆಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು ಎನ್ನಲಾಗಿದ್ದು, ಈ ಸಂಬಂಧಿತ ಚಟುವಟಿಕೆಗಳನ್ನು ನಡೆಸಲು ಸ್ಥಳೀಯ ಯುವಕರನ್ನು ನೇಮಿಸಿಕೊಳ್ಳಲು ವಿದೇಶಿ ಮೂಲದ ಐಎಸ್‌ಐ ನಿರ್ವಾಹಕರು ಪ್ರಯತ್ನಿಸುತ್ನಿಸುವುದನ್ನು ಪೊಲೀಸರು ಭೇದಿಸಿದ್ದಾರೆ. ವಂಶ್ ಕುಮಾರ್(19) ಮತ್ತು ಅನ್ಮೋಲ್ ಸಿಂಗ್@ ಸಾಹಿಲ್(20), ಹರ್ಮನ್ ಸಿಂಗ್ ಅಲಿಯಾಸ್ ಹಮ್ಮು(24), ಸುಖದೇವ್ ಸಿಂಗ್(30) ಮತ್ತು ಸುಖ್‌ಮಾನ್ ಸಿಂಗ್(19) ಬಂಧಿತರು. ಉಳಿದ ನಾಲ್ವರು ಆರೋಪಿಗಳು ಬಾಲಾಪರಾಧಿಗಳು ಎನ್ನಲಾಗಿದೆ.
ಸುಖ್‌ಮಾನ್ ಸಿಂಗ್ ವಿಚಾರಣೆ ಸಮಯದಲ್ಲಿ ಪಾಕಿಸ್ತಾನದ ಐಎಸ್ಐ ನಿರ್ವಾಹಕನೊಂದಿಗೆ ಸಂಪರ್ಕದಲ್ಲಿರುವುದಾಗಿ ಒಪ್ಪಿಕೊಂಡಿದ್ದು, ಮತ್ತು ಇತ್ತೀಚಿನ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ವೇಳೆ ದಾಳಿ ನಡೆಸಲು ಯೋಜಿಸಿ ತನ್ನ ಅಪ್ರಾಪ್ತ ಸಹಚರರೊಂದಿಗೆ ದೆಹಲಿಗೆ ಹೋಗಿದ್ದನು. ಆದರೆ ಯುಪಿಯ ಸಹಚರನೊಬ್ಬ ದಾಳಿಗೆ ಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಒದಗಿಸಬೇಕಾಗಿತ್ತು. ಆದರೆ ಭದ್ರತಾ ವ್ಯವಸ್ಥೆಗಳಿಂದಾಗಿ ಪೂರೈಸದ ಹಿನ್ನೆಲೆ ಯೋಜನೆ ಯಶಸ್ವಿಯಾಗಲಿಲ್ಲ ಎಂಬುದನ್ನು ಬಾಯಿಬಿಟ್ಟಿದ್ದಾನೆ.
ಈ ಕುರಿತು ಮಾಹಿತಿ ನೀಡಿರುವ ಡಿಜಿಪಿ ಗೌರವ್ ಯಾದವ್, ಒಂದು ದೊಡ್ಡ ಪ್ರಗತಿಯಲ್ಲಿ, ಅಮೃತಸರ ಕಮಿಷನರೇಟ್ ಪೊಲೀಸರು ಎರಡು ಐಎಸ್‌ಐ ಬೆಂಬಲಿತ ಗಡಿಯಾಚೆಗಿನ ಭಯೋತ್ಪಾದನಾ ಘಟಕಗಳನ್ನು ಭೇದಿಸಿ, ನಾಲ್ವರು ಬಾಲಾಪರಾಧಿಗಳು ಸೇರಿದಂತೆ ಒಂಬತ್ತು ಆರೋಪಿಗಳನ್ನು ಬಂಧಿಸಿ, 3 ಅಕ್ರಮ ಪಿಸ್ತೂಲುಗಳು, 4 ಪೆಟ್ರೋಲ್ ಬಾಟಲ್ ಬಾಂಬ್‌ಗಳು ಮತ್ತು 9 ಜೀವಂತ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನೂ ಎರಡನೇ ಮಾಡ್ಯುಲ್​ಗೆ ಪಂಜಾಬ್‌ನಲ್ಲಿ ಪೊಲೀಸ್ ಕಟ್ಟಡಗಳು ಮತ್ತು ಪೊಲೀಸ್ ಸಿಬ್ಬಂದಿಗಳ ಪರಿಶೀಲನೆ ನಡೆಸುವ ಕೆಲಸವನ್ನು ಆರೋಪಿಗೆ ವಹಿಸಲಾಗಿತ್ತು ಎಂದು ತಿಳಿದು ಬಂದಿದೆ. ಕಳೆದ ತಿಂಗಳು ರೈಲ್ವೆ ಹಳಿಗಳ ಬಳಿ ಸ್ಥಾಪಿಸಲಾದ ಅನುಮಾನಾಸ್ಪದ ಸಿಸಿಟಿವಿ ಕ್ಯಾಮೆರಾಗಳ ತನಿಖೆಯ ಸಮಯದಲ್ಲಿ ಎರಡನೇ ಮಾಡ್ಯೂಲ್ ಪತ್ತೆಯಾಗಿದೆ.
ಅಮೃತಸರ ಪೊಲೀಸ್ ಆಯುಕ್ತ (ಸಿಪಿ) ಗುರುಪ್ರೀತ್ ಸಿಂಗ್ ಭುಲ್ಲರ್ ಈ ಕುರಿತು ಮಾಹಿತಿ ನೀಡಿದ್ದು, ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಪೊಲೀಸ್ ತಂಡಗಳು ವಂಶ್ ಕುಮಾರ್ ಮತ್ತು ಅವರ ಬಾಲಾಪರಾಧಿ ಸಹಚರನನ್ನು ತಡೆದು ಅವರ ಬಳಿಯಿಂದ ಒಂದು ಅಕ್ರಮ .32 ಬೋರ್ ದೇಶೀಯ ನಿರ್ಮಿತ ಪಿಸ್ತೂಲ್ ಮತ್ತು ಮೂರು ಜೀವಂತ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿವೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net