ಪ್ಲೀಸ್ ಒಂದೇ ಒಂದು ಮುತ್ತು ಕೊಡು...ಆಸ್ಟ್ರೇಲಿಯಾ ಪ್ರವಾಸಿಗನಿಗೆ ಬೆಂಗಾಲಿ ಬಾಲಕನ ಕಿರುಕುಳ; ವಿಡಿಯೋ ವೈರಲ್! Australian Tourist in Kolkata
ಪ್ರವಾಸಿಗ ಮಾರ್ಕೊ ರೋಮ್ಸ್‌ಗೆ ಮುತ್ತು ಕೊಡು ಎಂದು ಪೀಡಿಸಿದ ಸ್ಥಳೀಯ ಬಾಲಕ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕೋಲ್ಕತ್ತಾದ ಗಲ್ಲಿಯಲ್ಲಿ ಆಸ್ಟ್ರೇಲಿಯಾ ಪ್ರವಾಸಿಗನಿಗೆ ಕಿರುಕುಳ!
ಪ್ರವಾಸಿಗ ಮಾರ್ಕೊ ರೋಮ್ಸ್‌ಗೆ ಮುತ್ತು ಕೊಡು ಎಂದು ಪೀಡಿಸಿದ ಸ್ಥಳೀಯ ಬಾಲಕ
ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ಕಲ್ಕತ್ತಾ: ಭಾರತೀಯರು ಪ್ರಪಂಚಕ್ಕೆ ವಸುದೈವ ಕುಟುಂಬಕಂ ಎಂದರೆ ಜಗತ್ತೆಲ್ಲಾ ಒಂದೇ ಕುಟುಂಬ ಎನ್ನುವ ಸಂದೇಶವನ್ನು ನೀಡಿದ ಪುಣ್ಯಭೂಮಿ. ಜಗತ್ತಿನ ಯಾವುದೇ ಮೂಲೆಯಿಂದ ಪ್ರವಾಸಿಗರು ಬಂದರೂ, ಅವರು ಭಾರತೀಯರ ಅತಿಥಿ ಸತ್ಕಾರವನ್ನು ಹೊಗಳಿ ಅವರ ದೇಶಕ್ಕೆ ಮರಳುತ್ತಾರೆ.
ಆದರೆ ಇತ್ತೀಚೆಗೆ ಕಲ್ಕತ್ತಾಗೆ ಆಗಮಿಸಿದ್ದ ಆಸ್ಟ್ರೇಲಿಯಾದ ಪ್ರವಾಸಿಗನಿಗೆ (Australian Tourist in Kolkata) ಪಶ್ಚಿಮ ಬಂಗಾಳದ ಬಾಲಕನೊಬ್ಬ ಕಿರುಕುಳ ನೀಡಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಮಾರ್ಕೊ ರೋಮ್ಸ್ () ಎನ್ನುವ ಆಸ್ಟ್ರೇಲಿಯಾದ ಪ್ರವಾಸಿಗ ಹಂಚಿಕೊಂಡಿದ್ದಾನೆ. ಅವನು ಕಲ್ಕತ್ತಾದ ಓಣಿಗಳಲ್ಲಿ ಸಂಚರಿಸುತ್ತಿದ್ದಾಗ, ವಯಸ್ಸಿನಲ್ಲಿ ಅವನಿಗಿಂತ ಚಿಕ್ಕವನಾದ ಹುಡುಗನೊಬ್ಬ, ತನ್ನ ಕೆನ್ನಗೆ ಮುತ್ತಿಕ್ಕುವಂತೆ ಒತ್ತಾಯಿಸಿದ್ದಾನೆ.
ಅದಕ್ಕೆ ಮಾರ್ಕೊ ರೋಮ್ಸ್, ನಾನು ಗೇ (ಸಲಿಂಗಿ) ಅಲ್ಲ, ನಾನು ನಿನಗೆ ಮುತ್ತು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೂ ಆ ಹುಡುಗ ಮಾರ್ಕೊನ ಕೈ ಹಿಡಿದು ಒಂದೇ, ಒಂದು ಮುತ್ತು ಕೊಡು ಎಂದು ಹಿಂಸಿಸಿದ್ದಾನೆ. ಆದರೆ ಮಾರ್ಕೊ, ನನ್ನನ್ನು ಕ್ಷಮಿಸಿ ಎಂದು ಹೇಳಿ ಅಲ್ಲಿಂದ ಪಾರಾಗಿದ್ದಾನೆ.
ನಂತರ ವಿಡಿಯೋನಲ್ಲಿ, ನನಗಿಂತ ವಯಸ್ಸಿನಲ್ಲಿ ಚಿಕ್ಕ ವಯಸ್ಸಿನ ಹುಡುಗರು ನನಗೆ ಕಿರುಕುಳ ನೀಡಿದರು, ಇದು ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ನೆತ್ತಿ ಬಿಸಿಯಾಗಿದೆ. ಕಲ್ಕತ್ತಾ ಪೊಲೀಸರು ಆ ಹುಡುಗರ ಮೇಲೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒಬ್ಬ ಬಳಕೆದಾರರು ಆಗ್ರಹಿಸಿದ್ದಾರೆ.
ಈ ವಿದೇಶಿ ಪ್ರವಾಸಿಗರು ಬೇಕಂತಲೇ ಅಪಾಯಕಾರಿ ಸ್ಥಳಗಳಿಗೆ ಹೋಗುತ್ತಾರೆ. ಸುಮ್ಮನೆ ಪ್ರವಾಸಿತಾಣಗಳನ್ನು ನೋಡಿಕೊಂಡು ಹೋಗಬೇಕು. ಆ ಗಲ್ಲಿ ಸುತ್ತುವ ಹುಚ್ಚೆಕೆ? ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ವಿದೇಶಿಯರು ಸಹ ನಮ್ಮಂತೆಯೇ ಮನುಷ್ಯರೇ, ಅವರೇನು ದೇವ ಮಾನವರಲ್ಲ. ಈ ಹುಡುಗನಿಗೆ ಆ ವಿದೇಶಿಗನಿಂದ ಮುತ್ತೆಕೇ ಬೇಕಂತೆ? ಎಂದು ಮತ್ತೊಬ್ಬರು ಕ್ಲಾಸ್ ತೆಗೆದುಕೊಂಡಿದ್ದಾರೆ, (ಏಜನ್ಸೀಸ್).