ತಾಜ್​ ಮಹಲ್ ಅಲ್ಲ ಅದು, ತೇಜೋ ಮಹಾಲಯ ಎಂದು ಅರ್ಜಿ: ಕೇಂದ್ರ ಮತ್ತು ಪುರಾತತ್ವ ಇಲಾಖೆಗೆ ಹೈಕೋರ್ಟ್ ನೋಟಿಸ್ | Taj Mahal

ತಾಜ್​ ಮಹಲ್​
ತಾಜ್​ ಮಹಲ್​
Published on
ಲಖನೌ: ಐತಿಹಾಸಿಕ ಪ್ರೇಮಸೌಧ ತಾಜ್​ ಮಹಲ್​ಗೆ(Taj Mahal) ಸಂಬಂಧಿಸಿದ ವಿವಾದ ಮತ್ತೆ ಮುನ್ನಲೆಗೆ ಬಂದಿದ್ದು, ಅದು ತಾಜ್​ ಮಹಲ್​ ಅಲ್ಲ, ತೇಜೋ ಮಹಾಲಯ ಎಂದು ಘೋಷಿಸುವಂತೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್​, ಕೇಂದ್ರ ಸರ್ಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.
ತಾಜ್ ಮಹಲ್ ಆವರಣದಲ್ಲಿ ಅಗ್ರೇಶ್ವರ ಮಹಾದೇವ ನಾಗನಾಥೇಶ್ವರ ತೇಜೋ ಮಹಾಲಯವಿದ್ದು, ತಾಜ್ ಮಹಲ್ ಒಳಗೆ ಸಮೀಕ್ಷೆ ಮತ್ತು ಛಾಯಾಗ್ರಹಣ ನಡೆಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಗ್ರಾ ಜಿಲ್ಲಾ ಕೋರ್ಟ್​ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ವಕೀಲ ಹರಿಶಂಕರ್ ಜೈನ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​​ನ ನ್ಯಾ. ರೋಹಿತ್ ರಂಜನ್ ಅಗರ್ವಾಲ್ ನೇತೃತ್ವವದ ಏಕಸದಸ್ಯ ಪೀಠವು, ಪ್ರತಿ ಅಫಿಡವಿಟ್ ಸಲ್ಲಿಸಿ ವಿವರಣೆ ನೀಡುವಂತೆ ಕೇಂದ್ರ ಸರ್ಕಾರವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ನೋಟಿಸ್ ಜಾರಿ ಮಾಡಿದೆ. ಪ್ರಕರಣದ ನಾಲ್ಕನೇ ಪ್ರತಿವಾದಿಯಾದ ಪಂಕಜ್ ಕುಮಾರ್ ವರ್ಮಾ ಅವರಿಗೂ ನೋಟಿಸ್ ನೀಡಿದೆ.
ಕೇಂದ್ರ ಸರ್ಕಾರ ಮತ್ತು ಎಎಸ್ಐ ಸಲ್ಲಿಸಿದ ಪ್ರತಿ ಅಫಿಡವಿಟ್‌ಗಳ ಆಧಾರದ ಮೇಲೆ ಅಲಹಾಬಾದ್ ಹೈಕೋರ್ಟ್ ತಾಜ್ ಮಹಲ್‌ನಲ್ಲಿ ಸಮೀಕ್ಷೆಗೆ ಅನುಮತಿ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಬಹುದು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net