ಆಯೋಧ್ಯೆ ಟ್ರೇಲರ್ ಮಾತ್ರ; ಕಾಶಿ, ಮಥುರಾದಲ್ಲಿ ನಡೆಯುವ ಲೂಟಿ ನೆನೆಸಿಕೊಂಡ್ರೆ ಭಯವಾಗುತ್ತೆ: ದೇಣಿಗೆ ಕಳ್ಳತನ ಬಗ್ಗೆ ಉದ್ದವ್ ಠಾಕ್ರೆ ಕಿಡಿ | Uddhav Thackeray

ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ
ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ
Published on
ಮುಂಬೈ: ಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣದ ಬಗ್ಗೆ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ(Uddhav Thackeray) ಭಾನುವಾರ(ಜು. 05) ಕೇಂದ್ರ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಆಯೋಧ್ಯೆ ಟ್ರೇಲರ್ ಮಾತ್ರ, ಕಾಶಿ, ಮಥುರಾದಲ್ಲಿ ನಡೆಯುವ ಲೂಟಿ ನೆನೆಸಿಕೊಂಡ್ರೆ ಭಯವಾಗುತ್ತೆ ಎಂದು ಕಿಡಿಕಾರಿದ್ದಾರೆ.
ಮುಂಬೈನ ದಾದರ್‌ನಲ್ಲಿ ಆಯೋಜಿಸಲಾದ 'ರಾಮರಕ್ಷ' ಪ್ರತಿಭಟನೆಯಲ್ಲಿ ಅವರು ಭಾಗವಹಿಸಿ ಮಾತನಾಡಿದ ಅವರು, ಅಯೋಧ್ಯೆ ಕೇವಲ ಟ್ರೇಲರ್, ನಿಜವಾದ ಸಿನಿಮಾ ಮುಂದಿದೆ. ಅಯೋಧ್ಯೆಯಲ್ಲಿಯೇ ಇಷ್ಟು ದೊಡ್ಡ ಪ್ರಮಾಣದ ದೇಣಿಗೆ ಲೂಟಿ ನಡೆದರೆ, ನಾಳೆ ಕಾಶಿ ಮತ್ತು ಮಥುರಾದ ಲೂಟಿಯ ಬಗ್ಗೆ ನನಗೆ ಭಯವಾಗುತ್ತಿದೆ. ಹಿಂದೂಗಳನ್ನು ಲೂಟಿ ಮಾಡುವವರೇ ಈಗ ಅಧಿಕಾರದಲ್ಲಿದ್ದಾರೆ ಎಂಬುದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿಯವರನ್ನು ಛತ್ರಪತಿ ಶಿವಾಜಿ ಮಹಾರಾಜರೊಂದಿಗೆ ಹೋಲಿಸಿದ್ದಕ್ಕೆ ಟೀಕಿಸಿದ ಅವರು, ಮೋದಿ ತಮ್ಮ ಪಕ್ಷದ ಬೆಂಬಲ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಪ್ರಧಾನಿಯಾದರು. ಮತ್ತು ಈಗ ಅವರು ಹಿಂದೂ ಧರ್ಮವನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹಿಂದೂ ಧರ್ಮ ಬಿಜೆಪಿ ಬ್ರಾಂಡ್ ಅಲ್ಲ, ರಾಮ ಮಂದಿರದಿಂದ ದೇಣಿಗೆ ಕದ್ದವರು ಭಗವಾನ್ ರಾಮ ಎಂದು ಕರೆಯಲು ಅರ್ಹರಲ್ಲ. ಹಿಂದೂಗಳು ಹುಚ್ಚರಲ್ಲ ಮತ್ತು ಭಗವಾನ್ ರಾಮನ ಹಣವನ್ನು ಲೂಟಿ ಮಾಡಿದವರನ್ನು ಕ್ಷಮಿಸುವುದಿಲ್ಲ. ಭಗವಾನ್ ರಾಮನನ್ನು ರಕ್ಷಿಸಲು ಎಲ್ಲಾ ಹಿಂದೂಗಳು ಒಟ್ಟಾಗಬೇಕು ಎಂದು ಕರೆ ನೀಡಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net