ಶಿಕ್ಷಣ ಸಚಿವರ ರಾಜೀನಾಮೆಗಾಗಿ ವಿಪಕ್ಷಗಳಿಂದ ಭಾರಿ ಗದ್ದಲ: ಲೋಕಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ! Parliament Monsoon Session

ಶಿಕ್ಷಣ ಸಚಿವರ ರಾಜೀನಾಮೆಗಾಗಿ ವಿಪಕ್ಷಗಳಿಂದ ಭಾರಿ ಗದ್ದಲ: ಲೋಕಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ! Parliament Monsoon Session
ಶಿಕ್ಷಣ ಸಚಿವರ ರಾಜೀನಾಮೆಗಾಗಿ ವಿಪಕ್ಷಗಳಿಂದ ಭಾರಿ ಗದ್ದಲ: ಲೋಕಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ! Parliament Monsoon Session
Published on

ಪ್ರಮುಖ ಮುಖ್ಯಾಂಶಗಳು

  • ನೀಟ್ ಗದ್ದಲಕ್ಕೆ ಲೋಕಸಭೆ ಸ್ತಬ್ಧ ಸೋಮವಾರದವರೆಗೆ ಕಲಾಪ ಮುಂದೂಡಿಕೆ
  • ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು ವಿಪಕ್ಷಗಳ ತೀವ್ರ ಗದ್ಧಲಕ್ಕೆ ಸಭೆ ಮುಂದೂಡಲ್ಪಟ್ಟಿತು
  • ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಲೋಕಸಭೆಯಲ್ಲಿ ಮುಗಿಲುಮುಟ್ಟಿದ ಪ್ರತಿಭಟನೆ
  • ಶಿಕ್ಷಣ ಸಚಿವರ ವಿರುದ್ಧ ತೊಡೆತಟ್ಟಿದ ವಿಪಕ್ಷಗಳು ಸಂಸತ್ತಿನ ಅಂಗಳದಲ್ಲಿ ಭಾರಿ ಪ್ರತಿಭಟನೆ
ನವದೆಹಲಿ: ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಉಭಯ ಸದನಗಳಲ್ಲಿ ವಿಪಕ್ಷ ನಾಯಕರು ನಡೆಸಿದ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ, ಲೋಕಸಭೆಯ ಕಲಾಪವನ್ನು ( Parliament Monsoon Session ) ಸೋಮವಾರ ( ಜುಲೈ 27 ) ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ.
ಸಂಸತ್ತಿನ ಮುಂಗಾರು ಅಧಿವೇಶನದ ಐದನೇ ದಿನವೂ ಭಾರಿ ಹೈಡ್ರಾಮಾಗೆ ಸಾಕ್ಷಿಯಾಯಿತು. ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕಾವು ಮುಗಿಲುಮುಟ್ಟಿದ್ದು, ಕಲಾಪ ಆರಂಭವಾಗುತ್ತಿದ್ದಂತೆಯೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ತೀವ್ರ ಗದ್ದಲ ಎಬ್ಬಿಸಿ ಘೋಷಣೆಗಳನ್ನು ಕೂಗಿದವು.
ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ವಿಸ್ತೃತ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರೂ, ಯಾವುದೇ ಚರ್ಚೆ ನಡೆಯುವುದಕ್ಕಿಂತ ಮುಂಚಿತವಾಗಿ ಶಿಕ್ಷಣ ಸಚಿವರ ರಾಜೀನಾಮೆ ಕಡ್ಡಾಯ ಎಂದು ವಿಪಕ್ಷಗಳು ಪಟ್ಟು ಹಿಡಿದವು. ಈ ಭಿನ್ನಾಭಿಪ್ರಾಯ ಮತ್ತು ಬಿಕ್ಕಟ್ಟಿನಿಂದಾಗಿ ಎರಡೂ ಸದನಗಳಲ್ಲಿ ನಿರಂತರ ಗದ್ದಲ ಏರ್ಪಟ್ಟು, ಕಲಾಪಗಳನ್ನು ಪದೇ ಪದೆ ಮುಂದೂಡಬೇಕಾಯಿತು.
ಅತ್ತ ಸಂಸತ್ತಿನ ಆವರಣದಲ್ಲೂ ವಿಪಕ್ಷ ನಾಯಕರು ಹಾಗೂ ಎನ್‌ಡಿಎ (NDA) ಸಂಸದರು ಪರಸ್ಪರ ವಿರುದ್ಧವಾಗಿ ತೀವ್ರ ಪ್ರತಿಭಟನೆ, ಧರಣಿಗಳನ್ನು ನಡೆಸಿದರು. ಕೊನೆಗೆ ವಿಪಕ್ಷಗಳ ಹೈಡ್ರಾಮ ಮತ್ತು ಘೋಷಣೆಗಳ ನಡುವೆ ಸಭೆಯನ್ನು ನಡೆಸುವುದು ಸಾಧ್ಯವಾಗದಿದ್ದಾಗ, ಲೋಕಸಭಾ ಕಲಾಪವನ್ನು ಸೋಮವಾರದವರೆಗೆ ಮುಂದೂಡಲಾಯಿತು. ಜುಲೈ 27ರಂದು ಬೆಳಗ್ಗೆ 11 ಗಂಟೆಗೆ ಕಲಾಪ ಮತ್ತೆ ಆರಂಭವಾಗಲಿದೆ, (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net