ವಾಂಗ್ಚುಕ್ ಅವರು ತಮ್ಮ ವಿವಿಧ ಬೇಡಿಕೆಗಳಿಗಾಗಿ ಹಲವು ಬಾರಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. 2024 ರಲ್ಲಿ ಲಡಾಖ್ನ ಸಂಪನ್ಮೂಲಗಳ ರಕ್ಷಣೆಗೆ ಶಾಸನಬದ್ಧ ಹಕ್ಕುಗಳನ್ನು ಆಗ್ರಹಿಸಿ, ಮೈನಸ್ ಡಿಗ್ರಿ ಚಳಿಯಲ್ಲೂ 11,500 ಅಡಿ ಎತ್ತರದಲ್ಲಿ ಕೇವಲ ನೀರು ಮತ್ತು ಉಪ್ಪು ಸೇವಿಸಿ 21 ದಿನಗಳ ಕಾಲ ಬಟಾಬಯಲಿನಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಲಡಾಖ್ಗೆ ರಾಜ್ಯದ ಸ್ಥಾನಮಾನ ಮತ್ತು 6ನೇ ಪರಿಚ್ಛೇದದ ಜಾರಿಗೆ ಆಗ್ರಹಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ, ಕಳೆದ ವರ್ಷ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ಸುಮಾರು ಆರು ತಿಂಗಳು ಬಂಧನದಲ್ಲಿಡಲಾಗಿತ್ತು. ಅಂದಹಾಗೆ, ವಾಂಗ್ಚುಕ್ ಅವರ ಶಿಕ್ಷಣ ತತ್ವ ಮತ್ತು ಜೀವನಶೈಲಿಯೇ ಪ್ರಸಿದ್ಧ '3 ಈಡಿಯಟ್ಸ್' ಸಿನಿಮಾದ 'ಫುನ್ಸುಖ್ ವಾಂಗ್ಡು' ಪಾತ್ರಕ್ಕೆ ಮುಖ್ಯ ಪ್ರೇರಣೆಯಾಗಿದೆ ಎಂದು ಹೇಳಲಾಗುತ್ತಿದೆ, (ಏಜೆನ್ಸೀಸ್).