ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ: ಫ್ರಾನ್ಸ್​​ನಲ್ಲಿನ ಗಲಭೆಗಳಿಗೆ ಅಧ್ಯಕ್ಷ ಮ್ಯಾಕ್ರನ್​ರನ್ನು ಟೀಕಿಸಿದ ಡೊನಾಲ್ಡ್ ಟ್ರಂಪ್ | Donald Trump

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಗಲಭೆಗಳು ಮತ್ತು ಪ್ರತಿಭಟನೆಗಳಿಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ವಲಸೆ ನೀತಿಗಳೇ ಕಾರಣ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಲಸೆಯ ವಿಷಯದಲ್ಲಿ ತಮ್ಮ ಸಲಹೆಯನ್ನು ಪಾಲಿಸಿದ್ದರೆ, ಈ ಅಶಾಂತಿಯನ್ನು ತಡೆಯಬಹುದಿತ್ತು ಎಂದು ಹೇಳಿದ್ದಾರೆ.
Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on: 

ವಾಷಿಂಗ್ಟನ್: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಗಲಭೆಗಳು ಮತ್ತು ಪ್ರತಿಭಟನೆಗಳಿಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ವಲಸೆ ನೀತಿಗಳೇ ಕಾರಣ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಲಸೆಯ ವಿಷಯದಲ್ಲಿ ತಮ್ಮ ಸಲಹೆಯನ್ನು ಪಾಲಿಸಿದ್ದರೆ, ಈ ಅಶಾಂತಿಯನ್ನು ತಡೆಯಬಹುದಿತ್ತು ಎಂದು ಹೇಳಿದ್ದಾರೆ.

ಸೋಮವಾರ(ಅ. 19) ಶ್ವೇತಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಹೆಚ್ಚಿನ ಸಂಖ್ಯೆಯ ವಲಸಿಗರನ್ನು ಫ್ರಾನ್ಸ್‌ಗೆ ಪ್ರವೇಶಿಸಲು ಅವಕಾಶ ನೀಡುವುದರ ವಿರುದ್ಧ ವರ್ಷಗಳ ಹಿಂದೆಯೇ ಮ್ಯಾಕ್ರನ್‌ಗೆ ಎಚ್ಚರಿಕೆ ನೀಡಿದ್ದೆ ಎಂದು ತಿಳಿಸಿದ್ದಾರೆ.

ಮ್ಯಾಕ್ರನ್ ನನ್ನ ಸ್ನೇಹಿತ, ನಾನು ಅವನಿಗೆ ಬಹಳ ಹಿಂದೆಯೇ ಹೇಳಿದ್ದೆ, ನೀವು ಫ್ರಾನ್ಸ್‌ನಲ್ಲಿ ದೊಡ್ಡ ತಪ್ಪು ಮಾಡುತ್ತಿದ್ದೀರಿ. ನೀವು ಜಗತ್ತಿನ ಎಲ್ಲರನ್ನೂ ಒಳಗೆ ಬರಲು ಬಿಡುತ್ತಿದ್ದೀರಿ ಎಂದು ಹೇಳಿದ್ದೆ, ಈಗ ಅದರ ಫಲಿತಾಂಶ ತೋರಿಸುತ್ತಿದೆ. ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ ಎಂದಿರುವ ಟ್ರಂಪ್, ವಲಸಿಗರ ಹೆಚ್ಚಿನ ಆಗಮನವು ಫ್ರೆಂಚ್ ರಾಜಧಾನಿಯ ಜನಸಂಖ್ಯಾಶಾಸ್ತ್ರವನ್ನು ಗಮನಾರ್ಹವಾಗಿ ಬದಲಾಯಿಸಿದೆ ಎಂದಿದ್ದಾರೆ.

Also Read
ಸಿಜೆಪಿಯ ಸೌರವ್ ದಾಸ್, ಅಶುತೋಷ್ ರಂಕಾ ನ್ಯಾಯಾಂಗ ಬಂಧನ ಅವಧಿ 2 ದಿನ ವಿಸ್ತರಿಸಿದ ಮ್ಯಾಜಿಸ್ಟ್ರೇಟ್ | CJP
Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಇನ್ನೂ ಈ ವಾರಾಂತ್ಯದಲ್ಲಿ ಫ್ರಾನ್ಸ್​​ನ ಪ್ಯಾರಿಸ್, ಲಿಲ್, ನೈಸ್ ಮತ್ತು ಇತರ ನಗರಗಳಲ್ಲಿ ಪ್ರತಿಭಟನೆ ಸಮಯದಲ್ಲಿ ಗಲಭೆಗಳು, ಲೂಟಿಗಳು ಹಾಗೂ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಸಂಘರ್ಷಗಳ ವ್ಯಾಪಕವಾಗಿ ನಡೆದಿವೆ. ಸಿಕ್ಕ ಸಿಕ್ಕ ಮಾಲ್​ಗಳನ್ನೂ ಲೂಟಿ ಹೊಡೆಯಲಾಗಿದೆ. ಮಟ್ಟು ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದೆ.

ಫ್ರಾನ್ಸ್ ಸರ್ಕಾರ ನಿನ್ನೆಯಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಕರ್ಫ್ಯೂಗಳನ್ನು ಮತ್ತು ಸಾರ್ವಜನಿಕ ಸಭೆ-ಸಮಾರಂಭಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಪ್ಯಾರಿಸ್ ಪೊಲೀಸರು ಸೋಮವಾರ ರಾತ್ರಿ 8 ಗಂಟೆಯಿಂದ ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಿದರು. ಅಲ್ಲದೆ, 'ಪ್ಲೇಸ್ ಡಿ ಲಾ ರಿಪಬ್ಲಿಕ್' ಮತ್ತು 'ಲೆಸ್ ಹಾಲ್ಸ್' ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ರಾತ್ರಿ 11 ಗಂಟೆಯಿಂದ ಮಂಗಳವಾರ ಬೆಳಿಗ್ಗೆ 6 ಗಂಟೆಯವರೆಗೆ ಕರ್ಫ್ಯೂ ವಿಧಿಸಿದ್ದಾರೆ.

ಫ್ರಾನ್ಸ್‌ನ ಆಂತರಿಕ ಸಚಿವಾಲಯದ ಪ್ರಕಾರ, ಈ ಗಲಭೆಗಳ ವೇಳೆ ಸುಮಾರು 2,400 ಜನರನ್ನು ಬಂಧಿಸಲಾಯಿತು ಮತ್ತು ಸುಮಾರು 1,000 ಪೊಲೀಸ್ ಅಧಿಕಾರಿಗಳು ಗಾಯಗೊಂಡರು. ಶನಿವಾರದಂದು ಪ್ರತಿಭಟನಾಕಾರರೊಬ್ಬರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net