ನಡುರಸ್ತೆಯಲ್ಲೇ ಇಳಿದ ಪ್ಯಾರಾಗ್ಲೈಡರ್: ಹೆದ್ದಾರಿಯಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ಭೀಕರ ದುರಂತ; ವಿಡಿಯೋ ವೈರಲ್​! Paragliding Viral Video

ನಡುರಸ್ತೆಯಲ್ಲೇ ಪ್ಯಾರಾಗ್ಲೈಡರ್ ತುರ್ತು ಲ್ಯಾಂಡಿಂಗ್
ನಡುರಸ್ತೆಯಲ್ಲೇ ಪ್ಯಾರಾಗ್ಲೈಡರ್ ತುರ್ತು ಲ್ಯಾಂಡಿಂಗ್
Published on

ಪ್ರಮುಖ ಮುಖ್ಯಾಂಶಗಳು

  • ನಡುರಸ್ತೆಯಲ್ಲೇ ಪ್ಯಾರಾಗ್ಲೈಡರ್ ತುರ್ತು ಲ್ಯಾಂಡಿಂಗ್
  • ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ನಡೆದ ಘಟನೆ
  • ಚಲಿಸುವ ವಾಹನಗಳ ಮಧ್ಯೆ ಕೂದಲೆಳೆ ಅಂತರದಲ್ಲಿ ತಪ್ಪಿದ ಭೀಕರ ದುರಂತ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ಕುಲ್ಲು: ಸೋಷಿಯಲ್​ ಮೀಡಿಯಾಗಳಲ್ಲಿ ಪ್ರತಿದಿನ ನೂರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಕೆಲವು ವಿಡಿಯೋಗಳನ್ನು ನೋಡಿದಾಗ ಒಂದು ಕ್ಷಣ ಎದೆ ಜುಮ್ ಎನ್ನುತ್ತದೆ. ಸದ್ಯ ಅಂತಹದ್ದೇ ಒಂದು ಮೈ ಜುಮ್ ಎನಿಸುವ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ರಸ್ತೆಯೊಂದರ ಮಧ್ಯದಲ್ಲೇ ಪ್ಯಾರಾಗ್ಲೈಡರ್ ತುರ್ತು ಲ್ಯಾಂಡಿಂಗ್ (Paragliding Viral Video) ಆಗಿರುವ ಶಾಕಿಂಗ್ ದೃಶ್ಯ ಈಗ ಎಲ್ಲೆಡೆ ವೈರಲ್​ ಆಗುತ್ತಿದೆ.
ವೇಗವಾಗಿ ವಾಹನಗಳು ಚಲಿಸುತ್ತಿರುವ ರಸ್ತೆಯಲ್ಲೇ ಪ್ಯಾರಾಗ್ಲೈಡರ್ ಕೆಳಗೆ ಇಳಿಯುವಾಗ ದೊಡ್ಡ ಅಪಘಾತವೇ ಸಂಭವಿಸಬಹುದಿತ್ತು. ಆದರೆ, ಪೈಲಟ್‌ನ ಕೌಶಲ್ಯ ಮತ್ತು ಸಮಯಪ್ರಜ್ಞೆಯಿಂದಾಗಿ ಒಂದು ಭೀಕರ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದೆ ಎನ್ನಬಹುದಾಗಿದೆ.

ನಡುರಸ್ತೆಯಲ್ಲಿ ಗ್ಲೈಡರ್ ಇಳಿಯಲು ಕಾರಣವೇನು?

ಹಿಮಾಚಲ ಪ್ರದೇಶದ ರೈಸನ್ ಎಂಬ ಪ್ರವಾಸಿ ತಾಣದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಎಂದಿನಂತೆ ಪ್ಯಾರಾಗ್ಲೈಡಿಂಗ್ ಹಾರಾಟ ಆರಂಭವಾಗಿತ್ತಾದರೂ, ಮಧ್ಯದಲ್ಲಿ ಹವಾಮಾನ ದಿಢೀರನೆ ಹದಗೆಟ್ಟಿದೆ. ಜೋರಾಗಿ ಬೀಸಲಾರಂಭಿಸಿದ ಗಾಳಿಯ ದಿಕ್ಕು ಹಠಾತ್ ಬದಲಾಗಿದ್ದರಿಂದ, ಪ್ಯಾರಾಗ್ಲೈಡರ್‌ಗೆ ತಾನು ತಲುಪಬೇಕಿದ್ದ ನಿಗದಿತ ಲ್ಯಾಂಡಿಂಗ್ ಸ್ಥಳಕ್ಕೆ ಹೋಗಲು ಸಾಧ್ಯವಾಗಲಿಲ್ಲ.
ಮತ್ತೊಂದು ಕಡೆ ಗ್ಲೈಡರ್ ನಿಯಂತ್ರಣ ತಪ್ಪಿ ಬೀಳುವ ಅಪಾಯವಿತ್ತು. ಇಂತಹ ಉದ್ವಿಗ್ನ ಕ್ಷಣದಲ್ಲಿ ಪೈಲಟ್ ಧೈರ್ಯ ಗೆಡದೆ, ಕೆಳಗಿದ್ದ ಹೆದ್ದಾರಿಯನ್ನೇ ಲ್ಯಾಂಡಿಂಗ್ ಸ್ಥಳವಾಗಿ ಆರಿಸಿಕೊಂಡಿದ್ದಾನೆ. ರಸ್ತೆಯಲ್ಲಿ ಕಾರು, ಬೈಕುಗಳು ಚಲಿಸುತ್ತಿದ್ದರೂ, ಅವುಗಳ ಮಧ್ಯದಲ್ಲೇ ಅತ್ಯಂತ ಎಚ್ಚರಿಕೆಯಿಂದ ಗ್ಲೈಡರ್ ಅನ್ನು ಕೆಳಕ್ಕೆ ಇಳಿಸಿದ್ದಾರೆ.
ರಸ್ತೆಯಲ್ಲಿದ್ದ ವಾಹನ ಸವಾರರು ಸಹ ಪ್ಯಾರಾಗ್ಲೈಡರ್ ಬರುವುದನ್ನು ನೋಡಿ ತಕ್ಷಣ ವಾಹನಗಳನ್ನು ನಿಲ್ಲಿಸಿದ್ದರಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಇಡೀ ರೋಮಾಂಚನಕಾರಿ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಸಾಹಸ ಕ್ರೀಡೆಗಳ ಸುರಕ್ಷತೆ ಬಗ್ಗೆ ಮತ್ತೆ ಶುರುವಾಯ್ತು ಚರ್ಚೆ!

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಂಟರ್ನೆಟ್‌ನಲ್ಲಿ ಸಾಹಸ ಕ್ರೀಡೆಗಳ ಸುರಕ್ಷತೆಯ ಬಗ್ಗೆ ಪರ-ವಿರೋಧದ ದೊಡ್ಡ ಚರ್ಚೆ ಆರಂಭವಾಗಿದೆ. ನೆಟ್ಟಿಗರಲ್ಲಿ ಕೆಲವರು ಪೈಲಟ್‌ನ ಧೈರ್ಯ ಮತ್ತು ಜಾಣ್ಮೆಯನ್ನು ಮನಸಾರೆ ಹೊಗಳುತ್ತಿದ್ದಾರೆ.
ಇನ್ನೂ ಕೆಲವರು ಪ್ರವಾಸಿಗರ ಪ್ರಾಣದ ಜೊತೆ ಆಟವಾಡುವ ಇಂತಹ ರೈಡ್‌ಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಕಠಿಣ ಹವಾಮಾನ ತಪಾಸಣೆ ಮತ್ತು ಸುರಕ್ಷತಾ ನಿಯಮಗಳಿಲ್ಲದೆ ಇಂತಹ ಸಾಹಸ ಕ್ರೀಡೆಗಳಿಗೆ ಯಾಕೆ ಅನುಮತಿ ನೀಡಬೇಕು ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net