ನಿಮ್ಮ ಹೆಚ್ಚಿನ ಅನುಯಾಯಿಗಳು ಬಿಜೆಪಿ ಕಚೇರಿಗಳಿಗೆ ಭೇಟಿ ನೀಡಿದ್ದಾರೆ, ಆದರೆ ನಾನು ಆ ಪಕ್ಷದ ನಾಯಕರನ್ನು ಎಂದಿಗೂ ಭೇಟಿ ಮಾಡಿಲ್ಲ, ಸಂಪರ್ಕಿಸಿಲ್ಲ. ನನ್ನ ಶಕ್ತಿ ಇರುವುದು ಪಂಜಾಬ್ನ ಕಲ್ಯಾಣಕ್ಕಾಗಿ. ಪ್ರಾಮಾಣಿಕ, ಶ್ರಮಶೀಲ ಜನರನ್ನು ಗೌರವಿಸುವುದನ್ನು ರೂಡಿಸಿಕೊಳ್ಳುವ ಮೂಲಕ ರಾಜಕೀಯ ಅಳಿವಿನ ಅಪಾಯವನ್ನು ಎದುರಿಸಿ. ನಿಮ್ಮ ಪಕ್ಷವು ಅತ್ಯಂತ ಭ್ರಷ್ಟರನ್ನು ಗೌರವಿಸಿದಾಗ ಪ್ರಾಮಾಣಿಕತೆಯನ್ನು ಬೋಧಿಸುವುದರಲ್ಲಿ ಅರ್ಥವಿಲ್ಲ, ನಿಮಗೆ ಶುಭವಾಗಲಿ ಎಂದು ಬರೆದುಕೊಂಡಿದ್ದಾರೆ.