ಪಂಜಾಬ್‌ನಲ್ಲಿ ಹಾಡು ಹಗಲೇ ಗುಂಡಿನ ಮೊರೆತ: ಆಪ್ ನಾಯಕ ಒಬೆರಾಯ್ ಹತ್ಯೆಗೈದು ಬೈಕ್‌ನಲ್ಲಿ ಪರಾರಿಯಾದ ಹಂತಕರು | Lucky Oberoi

Lucky Oberoi | ಆಮ್ ಆದ್ಮಿ ಪಕ್ಷದ ನಾಯಕ ಲಕ್ಕಿ ಒಬೆರಾಯ್
Lucky Oberoi | ಆಮ್ ಆದ್ಮಿ ಪಕ್ಷದ ನಾಯಕ ಲಕ್ಕಿ ಒಬೆರಾಯ್
Published on
ಚಂಡೀಗಢ: ಪಂಜಾಬ್‌ನ ಜಲಂಧರ್ ನಗರದ ಗುರುದ್ವಾರದ ಮುಂಭಾಗದಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಲಕ್ಕಿ ಒಬೆರಾಯ್ (Lucky Oberoi ) ಕೊನೆಯುಸಿರೆಳೆದಿದ್ದು, ಈ ಘಟನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ.
ಲಕ್ಕಿ ಇಂದು ಬೆಳಿಗ್ಗೆ 8:15 ಕ್ಕೆ ಗುರುದ್ವಾರಕ್ಕೆ ಹೋಗಿದ್ದು, ಈ ವೇಳೆ ದುಷ್ಕರ್ಮಿಯೊಬ್ಬ ಅವರ ಮೇಲೆ ಗುಂಡು ಹಾರಿಸಿದರು, ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಆಪ್​​ ನಾಯಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಲಕ್ಕಿ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು.
ಥಾರ್ ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಲಕ್ಕಿ ಮೇಲೆ 7 ರಿಂದ 8 ಗುಂಡು ಹಾರಿಸಿದ್ದು, ಕೆಲ ಗುಂಡುಗಳು ಆತನ ಎದೆ ಮತ್ತು ತಲೆಗೆ ಹೊಕ್ಕಿವೆ ಎನ್ನಲಾಗಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲಕ್ಕಿ ಒಬೆರಾಯ್ ಪತ್ನಿ ಈ ಹಿಂದೆ ಎಎಪಿ ಅಭ್ಯರ್ಥಿಯಾಗಿ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು.
ಹಗಲು ಹೊತ್ತಿನಲ್ಲೇ ನಡೆದ ಈ ಘಟನೆಯನ್ನು ಪಂಜಾಬ್ ವಿಧಾನಸಭೆಯ ವಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಜ್ವಾ ಖಂಡಿಸಿದ್ದು, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಭಗವಂತ್ ಮಾನ್ ಅಧಿಕಾರವಧಿಯಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದ ಅವರು, ಆಡಳಿತ ಪಕ್ಷದ ನಾಯಕರಿಗೆ ಸುರಕ್ಷಿತ ಇಲ್ಲದಿದ್ದಾಗ, ಸಾಮಾನ್ಯ ನಾಗರಿಕರ ಕಥೆ ಏನು ಎಂದು ಪ್ರಶ್ನಿಸಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net