

ಪ್ರಮುಖ ಮುಖ್ಯಾಂಶಗಳು
ಹಾಗೆಯೇ, ಉಗ್ರರಿಗೆ ಆಶ್ರಯ ನೀಡಿದರೆ ಅದು ತನ್ನ ನೆರೆ ದೇಶಕ್ಕೆ ಮಾತ್ರವಲ್ಲ, ತನ್ನ ದೇಶಕ್ಕೂ ಆಪತ್ತನ್ನು ತರುತ್ತದೆ ಎಂದು ಪಾಕ್ ಸೇನೆ ಮನವರಿಕೆ ಮಾಡಿಕೊಳ್ಳಬೇಕೆಂದು ಭದ್ರತಾ ಸಲಹೆಗಾರರು ತಿಳಿಸಿದ್ದಾರೆ.
ನಮ್ಮ ಮೇಲೆ ಪಾಕಿಸ್ತಾನ ಪ್ರೇರಿತ ದಾಳಿ ನಡೆದಾಗ ನಾವು ಕೆಲ ದಿನ ಸುಮ್ಮನೇ ಇರುತ್ತೇವೆ, ಆದರೆ ತಾಳ್ಮೆ ಎನ್ನುವುದು ಭಾರತದ ಬಲಹೀನತೆಯಲ್ಲ, ಬದಲಾಗಿ ಅದೇ ನಮ್ಮ ಅತ್ಯುನ್ನತ ಶಕ್ತಿಯಾಗಿದೆ ಎಂದಿದ್ದಾರೆ.
ಗುಪ್ತಚರ ಮಾಹಿತಿಯ ಆಧಾರದ ಮೇಲೆ ಪಾಕ್ ಹಾಗೂ ಪಿಒಕೆಯಲ್ಲಿ ಗುರುತಿಸಲಾಗಿದ್ದ ಒಟ್ಟು ಒಂಬತ್ತು ಪ್ರಮುಖ ಉಗ್ರರ ಅಡಗುತಾಣಗಳನ್ನು ಈ ವಾಯುದಾಳಿಯ ಮೂಲಕ ಭಾರತೀಯ ಪಡೆಗಳು ಧೂಳಿಪಟಗೊಳಿಸಿದವು. ಗಡಿಯಾಚೆಗಿನ ಭಯೋತ್ಪಾದನೆಯನ್ನು ಮಟ್ಟಹಾಕುವಲ್ಲಿ ಹಾಗೂ ದೇಶದ ಭದ್ರತೆಯ ವಿಚಾರದಲ್ಲಿ ಭಾರತದ ದೃಢಸಂಕಲ್ಪವನ್ನು ಈ ಕಾರ್ಯಾಚರಣೆಯು ಜಗತ್ತಿಗೆ ಸಾರಿತು,
(ಏಜನ್ಸೀಸ್).