ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ದಿವಂಗತ ರಾಣಿ ಎಲಿಜಬೆತ್ II ಅವರು ಎಥಿಯೋಪಿಯಾದ ರಾಯಭಾರಿಯಾದ ಫೆಸೆಹಾ ಶಾ ಅಬೆಬೆ ಮತ್ತು ಅವರ ಪತ್ನಿ ಹಿರೇತ್ ಮುಲುಗೆಟಾ ಅವರನ್ನು ಬರಮಾಡಿಕೊಳ್ಳುತ್ತಿದ್ದಾರೆ. ಈ ಫೋಟೋವನ್ನು 2019, ಅಕ್ಟೋಬರ್ 22ರಂದು ಲಂಡನ್‌ನ ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ತೆಗೆಯಲಾಗಿದೆ. ವಿಷಯ ಏನೆಂದರೆ, ರಾಣಿ ಎಲಿಜಬೆತ್ II ಧರಿಸಿರುವ ಉಡುಪಿನಲ್ಲಿ ಪ್ರಾಣಿಗಳ ಚಿತ್ರವಿದೆ. ಆ ಪ್ರಾಣಿಗಳು ಯಾವುವು ಎಂದು ನೀವು ಪತ್ತೆಹಚ್ಚಬೇಕು. ಆದರೆ, ಪತ್ತೆಹಚ್ಚುವುದು ಸುಲಭದ ಮಾತಲ್ಲ. ಏಕೆಂದರೆ, ಅಷ್ಟು ಸುಲಭವಾಗಿ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಹೀಗಾಗಿ ನೀವು ಕಣ್ಣಿಗೆ ಮಾತ್ರವಲ್ಲದೆ, ತಲೆಗೆ ಕೊಂಚ ಕೆಲಸ ಕೊಟ್ಟು ಸೂಕ್ಷ್ಮವಾಗಿ ಗಮನಿಸಿದರೆ ಯಾವ ಪ್ರಾಣಿಗಳು ಇವೆ ಎಂಬುದನ್ನು ಪತ್ತೆಹಚ್ಚಬಹುದು. ನಿಮಗೆ 10 ಸೆಕೆಂಡ್ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಪ್ರಾಣಿಗಳನ್ನು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರು.