4ನೇ ವಯಸ್ಸಿನಲ್ಲೇ ಕಮಲ್​ ಹಾಸನ್​ ದಾಖಲೆ ಉಡೀಸ್​! ನಟನೆ ಬಿಟ್ಟ ಬೇಬಿ ಶ್ಯಾಮಿಲಿ ಇಂದು ಏನ್​ ಮಾಡ್ತಿದ್ದಾರೆ ಗೊತ್ತಾ? Baby Shamili

ನಟ ಕಮಲ್​ ಹಾಸನ್​ ಮತ್ತು ಬೇಬಿ ಶ್ಯಾಮಿಲಿ ಖ್ಯಾತಿಯ ನಟಿ ಶ್ಯಾಮಿಲಿ
ನಟ ಕಮಲ್​ ಹಾಸನ್​ ಮತ್ತು ಬೇಬಿ ಶ್ಯಾಮಿಲಿ ಖ್ಯಾತಿಯ ನಟಿ ಶ್ಯಾಮಿಲಿ
Published on

ಪ್ರಮುಖ ಮುಖ್ಯಾಂಶಗಳು

  • ಬೇಬಿ ಶ್ಯಾಮಿಲಿ... ಈ ಹೆಸರು ಕನ್ನಡಿಗರಿಗೆ ಎಂದಿಗೂ ಚಿರಪರಿಚಿತ
  • 90ರ ದಶಕದಲ್ಲಿ ಬಾಲನಟಿಯಾಗಿ ಕನ್ನಡ ಸಿನಿರಸಿಕರ ಮನಗೆದ್ದ ಪೋರಿ
  • ಬಾಲನಟಿಯಾಗಿ ಸಿಕ್ಕಾಪಟ್ಟೆ ಯಶಸ್ಸು ಗಳಿಸಿದ್ದರ ಶ್ಯಾಮಿಲಿ
  • ಇಂದು ಚಿತ್ರರಂಗದಿಂದ ದೂರ ಉಳಿದಿರುವ ಶ್ಯಾಮಿಲಿ ಏನು ಮಾಡುತ್ತಿದ್ದಾರೆ ಗೊತ್ತಾ?
Baby Shamili : ಬೇಬಿ ಶ್ಯಾಮಿಲಿ... ಈ ಹೆಸರು ಕನ್ನಡಿಗರಿಗೆ ಎಂದಿಗೂ ಚಿರಪರಿಚಿತ. 90ರ ದಶಕದಲ್ಲಿ ಬಾಲನಟಿಯಾಗಿ ಅನೇಕ ಕನ್ನಡ ಸಿನಿಮಾಗಳಲ್ಲಿ ನಡಿಸುವ ಮೂಲಕ ಕನ್ನಡಿಗರ ಹೃದಯದಲ್ಲಿ ಎಂದೂ ಅಳಿಸಲಾಗದ ಗುರುತನ್ನು ಬೇಬಿ ಶ್ಯಾಮಿಲಿ ಮೂಡಿಸಿದ್ದಾರೆ. ಶ್ಯಾಮಿಲಿ ಅವರು ಬಾಲನಟಿಯಾಗಿ ಎಷ್ಟೊಂದು ಯಶಸ್ಸು ಪಡೆದಿದ್ದರು ಅಂದರೆ, ತಮ್ಮ 4ನೇ ವಯಸ್ಸಿನಲ್ಲೇ ಆದಾಯ ತೆರಿಗೆ ಪಾವತಿಸಿದ ಮೊದಲ ಬಾಲನಟಿ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. ಇದಿಷ್ಟೇ ಅಲ್ಲದೆ, ಸಕಲಕಲಾ ವಲ್ಲಭ ಕಮಲ್ ಹಾಸನ್​ ಅವರ ರಾಷ್ಟ್ರೀಯ ಪ್ರಶಸ್ತಿ ದಾಖಲೆಯನ್ನು ಮುರಿದಿದ್ದಾರೆ. ಬಾಲನಟಿಯಾಗಿ ಹೆಸರು ಮಾಡಿದ ಶ್ಯಾಮಿಲಿ, ಸಂಪೂರ್ಣ ನಟಿಯಾಗಿ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಹೀಗಾಗಿ, ಪ್ರಸ್ತುತ ಚಿತ್ರರಂಗದಿಂದ ದೂರ ಉಳಿದಿದ್ದಾರೆ.
ನಟ ಕಮಲ್ ಹಾಸನ್ ಅವರು ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಾಗ ಅವರಿಗೆ 6 ವರ್ಷ. ಆದರೆ, ಬೇಬಿ ಶ್ಯಾಮಿಲಿ ಅವರು ಈ ದಾಖಲೆಯನ್ನು ಮುರಿದಿದ್ದಾರೆ. ಅವರು ತಮ್ಮ 4ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು. ಚಿಕ್ಕ ವಯಸ್ಸಿನಲ್ಲಿ ಆದಾಯ ತೆರಿಗೆ ಪಾವತಿಸಿದ ಅತ್ಯಂತ ಕಿರಿಯ ನಟಿ ಎಂಬ ಹೆಗ್ಗಳಿಕೆಗೂ ಶ್ಯಾಮಿಲಿ ಪಾತ್ರರಾಗಿದ್ದಾರೆ.
1989 ರಲ್ಲಿ ಎಸ್.ಎ. ಚಂದ್ರಶೇಖರ್ ಅವರು ನಿರ್ದೇಶಿಸಿ, ವಿಜಯಕಾಂತ್ ನಟಿಸಿದ 'ರಾಜನದೈ' ಚಿತ್ರದ ಮೂಲಕ ಬಾಲನಟಿಯಾಗಿ ಪಾದಾರ್ಪಣೆ ಮಾಡಿದರು ಮತ್ತು ಅವರು ತಮ್ಮ ಮೊದಲ ಚಿತ್ರದಲ್ಲೇ ಜನರ ಹೃದಯದಲ್ಲಿ ಸ್ಥಾನ ಪಡೆದರು. ಈ ಚಿತ್ರದಲ್ಲಿ ನಟಿಸುವಾಗ, ಶ್ಯಾಮಿಲಿಗೆ ಕೇವಲ ಎರಡು ವರ್ಷ. ಹೇಳಿದ್ದನ್ನು ಕೇಳುವ ಗಿಣಿಯಂತೆ, ನಗುತ್ತಾ, ಅಳುತ್ತಾ, ಮಗುವಿನ ಭಾಷೆಯಲ್ಲಿ ಮಾತನಾಡುತ್ತಾ ಎಲ್ಲರನ್ನೂ ಬೆರಗುಗೊಳಿಸಿದರು.
ಈ ಸಿನಿಮಾ ನಂತರ, ಶ್ಯಾಮಿಲಿ ಅವರಿಗೆ ಸಿನಿಮಾ ಆಫರ್‌ಗಳು ಹರಿದು ಬರಲು ಶುರುವಾದವು. ತಮ್ಮ 3ನೇ ವಯಸ್ಸಿನಲ್ಲೇ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಲಾ ಎರಡು ಚಿತ್ರಗಳಲ್ಲಿ ಮತ್ತು ತಮಿಳು ಮತ್ತು ಮಲಯಾಳಂನಲ್ಲಿ ತಲಾ ಒಂದು ಚಿತ್ರದಲ್ಲಿ ನಟಿಸಿದರು. ಈ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆದವು. ತಮಿಳು ಚಿತ್ರ 'ಅಂಜಲಿ'ಯಲ್ಲಿನ ಅಭಿನಯಕ್ಕಾಗಿ ಶ್ಯಾಮಿಲಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಲಾಯಿತು. ಈ ಚಿತ್ರದ ನಂತರ, ಬೇಬಿ ಶ್ಯಾಮಿಲಿ ಸಿನಿಮಾ ಸೇರಿದಂತೆ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದರು.
ಸಾಲು ಸಾಲು ಸಿನಿಮಾಗಳಿಂದಾಗಿ ಶ್ಯಾಮಿಲಿ ಚಿಕ್ಕ ವಯಸ್ಸಿನಲ್ಲಿಯೇ ಆದಾಯ ತೆರಿಗೆ ಪಾವತಿಸುವ ಗೌರವವನ್ನೂ ಪಡೆದರು. ಅಂದಹಾಗೆ, ಶ್ಯಾಮಿಲಿ ಅವರು ನಟ ಅಜಿತ್ ಅವರ ಪತ್ನಿ ಮತ್ತು ನಟಿ ಶಾಲಿನಿ ಅವರ ಸಹೋದರಿ ಎಂಬುದು ಗಮನಾರ್ಹ. ತನ್ನ ಸಹೋದರಿ ಶಾಲಿನಿಯಂತೆಯೇ, ಶಾಮಿಲಿ ಕೂಡ ಬಾಲನಟಿಯಾಗಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಖ್ಯಾತಿಯನ್ನು ಗಳಿಸಿದರು.
ಬಾಲ್ಯದಲ್ಲಿ ಸುಮಾರು 45 ಚಿತ್ರಗಳಲ್ಲಿ ನಟಿಸಿದ ಶಾಮಿಲಿ, ಆ ನಂತರ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ವಿರಾಮ ತೆಗೆದುಕೊಂಡರು. ವಿಸುವಲ್​ ಕಮ್ಯೂನಿಕೇಷನ್​ನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ತಮ್ಮ ಅಧ್ಯಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಈಗ ಏನ್​ ಮಾಡ್ತಿದ್ದಾರೆ?

ತುಂಬಾ ವರ್ಷಗಳ ವಿರಾಮದ ಬಳಿಕ ಶ್ಯಾಮಿಲಿ ಅವರು 2009 ರಲ್ಲಿ ಸಿದ್ಧಾರ್ಥ್ ಜೊತೆ ತೆಲುಗು ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದರು. ನಂತರ, 2016ರಲ್ಲಿ ವೀರ ಶಿವಾಜಿ ಎಂಬ ತಮಿಳು ಚಿತ್ರ ಮತ್ತು ಮಲಯಾಳಂ ಚಿತ್ರದಲ್ಲಿ ನಟಿಸಿದರು. 2018ರಲ್ಲಿ ತೆಲುಗು ಚಿತ್ರ ಅಮ್ಮ ಮಕರಿಲ್ಲು ನಲ್ಲಿ ನಟಿಸಿದರು. ಆದರೆ, ಈ ಸಿನಿಮಾಗಳಿಂದ ಶ್ಯಾಮಿಲಿಗೆ ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ. ಅಮ್ಮ ಮಕರಿಲು ಶ್ಯಾಮಿಲಿ ಅವರ ಕೊನೆಯ ಚಿತ್ರವಾಯಿತು. ಇದಾದ ನಂತರ, ಶ್ಯಾಮಿಲಿ ಸುಮಾರು 9 ವರ್ಷಗಳ ಕಾಲ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. ನಟನೆಯಿಂದ ನಿವೃತ್ತಿ ಹೊಂದಿದ ಶ್ಯಾಮಿಲಿ ಇದೀಗ ಗ್ಲಾಸ್​ ಪೇಂಟರ್​ ಆಗಿದ್ದಾರೆ. ಇದಕ್ಕಾಗಿ ಫ್ಲಾರೆನ್ಸ್‌ನ ಅಕಾಡೆಮಿಯಾ ರಿಯಾಸಿಯಲ್ಲಿ ತರಬೇತಿ ಪಡೆದಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net