ಪ್ರಮುಖ ಆರು ಸ್ತಂಭಗಳ ಆಧಾರದ ಮೇಲೆ ಆಪರೇಷನ್ ಸಿಂಧೂರವನ್ನು ನಮ್ಮ ಸೇನೆ ನಡೆಸಿತ್ತು. ನಿಯಂತ್ರಿತ ಯುದ್ಧ, ಉಗ್ರರ ಜಾಲದ ಮೇಲೆ ದಾಳಿ, ಕನಿಷ್ಠ ಹಾನಿಯೊಂದಿಗೆ ಗರಿಷ್ಠ ಪರಿಣಾಮ, ಸ್ವದೇಶಿ ಶಸ್ತಾಸ್ತ್ರಗಳ ಬಳಕೆ, ದೃಢವಾದ ರಾಜಕೀಯ ಇಚ್ಛಾಶಕ್ತಿ ಹಾಗೂ ಸಮಗ್ರ ರಾಜಕೀಯ ದೃಷ್ಠೀಕೋನವನ್ನು ಒಳಗೊಂಡಿದ್ದು, 88 ಗಂಟೆಗಳ ಕಾರ್ಯಾಚರಣೆಯು 100+ ಭಯೋತ್ಪಾದಕರನ್ನು ಹೊಸಕಿ ಹಾಕಿ, ಪಾಕ್ನ ವಾಯುಪಡೆಯ 20% ಸ್ವತ್ತುಗಳನ್ನು ನಾಶಮಾಡಿತ್ತು.