ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೊದಲ ವಾರ್ಷಿಕೋತ್ಸವ ಸಂದರ್ಭದಲ್ಲಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಪಹಲ್ಗಾಮ್‌ನಲ್ಲಿ ಅಮಾಯಕ ಭಾರತೀಯರ ಮೇಲೆ ದಾಳಿ ಮಾಡಲು ಧೈರ್ಯ ಮಾಡಿದವರಿಗೆ ಪಡೆಗಳು ಸೂಕ್ತ ಪ್ರತಿಕ್ರಿಯೆ ನೀಡಿವೆ. ಒಂದು ವರ್ಷದ ನಂತರವೂ, ಭಯೋತ್ಪಾದನೆಯನ್ನು ಸೋಲಿಸುವ ಮತ್ತು ಸಕ್ರಿಯ ವ್ಯವಸ್ಥೆಯನ್ನು ನಾಶಮಾಡುವ ದೃಢಸಂಕಲ್ಪದಲ್ಲಿ ಭಾರತ ಎಂದಿನಂತೆ ದೃಢವಾಗಿದೆ ಎಂದು ಹೇಳಿದ್ದಾರೆ.