ದೇಶದಲ್ಲಿರೋದು ಕೇವಲ ಇಬ್ಬರೇ ವ್ಯಾಪಾರಿಗಳು ಅದು ಪ್ರಧಾನಿ ಮೋದಿ, ಅಮಿತ್ ಶಾ; ಅವರಿಗೆ ನಷ್ಟವಾಗುವುದಾದ್ರೆ ಆಗಲಿ: ಸಂಜಯ್ ರಾವತ್ | Sanjay Raut

ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಇಂದು(ನ. 01) ನಡೆಯುತ್ತಿರುವ 'ಇಂಡಿಯಾ' ಒಕ್ಕೂಟದ ಬೃಹತ್ ರ‍್ಯಾಲಿಯಿಂದಾಗಿ ವ್ಯಾಪಾರ-ವಹಿವಾಟುಗಳಿಗೆ ಅಡ್ಡಿಯಾಗಬಹುದು ಎಂಬ ವ್ಯಾಪಾರಿಗಳ ಕಳವಳದ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ ನಾಯಕ ಸಂಜಯ್ ರಾವತ್, ಪ್ರಸ್ತುತ ದೇಶದಲ್ಲಿರೋದು ಕೇವಲ ಇಬ್ಬರೇ ವ್ಯಾಪಾರಿಗಳು. ಅದು ಪ್ರಧಾನಿ ಮೋದಿ, ಅಮಿತ್ ಶಾ. ಅವರಿಗೆ ನಷ್ಟವಾಗುವುದಾದ್ರೆ ಆಗಲಿ ಬಿಡಿ ಎಂದಿದ್ದಾರೆ.
ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್
ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್
Published on: 

ನವದೆಹಲಿ: ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಇಂದು(ನ. 01) ನಡೆಯುತ್ತಿರುವ 'ಇಂಡಿಯಾ' ಒಕ್ಕೂಟದ ಬೃಹತ್ ರ‍್ಯಾಲಿಯಿಂದಾಗಿ ವ್ಯಾಪಾರ-ವಹಿವಾಟುಗಳಿಗೆ ಅಡ್ಡಿಯಾಗಬಹುದು ಎಂಬ ವ್ಯಾಪಾರಿಗಳ ಕಳವಳದ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ ನಾಯಕ ಸಂಜಯ್ ರಾವತ್, ಪ್ರಸ್ತುತ ದೇಶದಲ್ಲಿರೋದು ಕೇವಲ ಇಬ್ಬರೇ ವ್ಯಾಪಾರಿಗಳು. ಅದು ಪ್ರಧಾನಿ ಮೋದಿ, ಅಮಿತ್ ಶಾ. ಅವರಿಗೆ ನಷ್ಟವಾಗುವುದಾದ್ರೆ ಆಗಲಿ ಬಿಡಿ ಎಂದಿದ್ದಾರೆ.

ದೆಹಲಿಯಲ್ಲಿ ಚಲೋ ದೆಹಲಿ’ ರ‍್ಯಾಲಿಗೂ ಮುನ್ನ ಸುದ್ದಿ ಸಂಸ್ಥೆ ಎಎನ್​ಐ ಜೊತೆ ಮಾತನಾಡಿರುವ ಅವರು, ಇಂದಿನ ವಿಪಕ್ಷಗಳ ಬೃಹತ್ ರ‍್ಯಾಲಿಗೆ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ಅವರನ್ನು ತಡೆಯಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ, ಆದರೆ ಜನರನ್ನು ತಡೆಯಲು ಎಷ್ಟು ಹೆಚ್ಚು ಪ್ರಯತ್ನಿಸುತ್ತಾರೋ, ಅಷ್ಟು ದೊಡ್ಡದಾಗಿ ಜನಸಂಖ್ಯೆ ಬರುತ್ತದೆ. ಇಲ್ಲಿಗೆ ತಲುಪಲು ಜನರು ಎಲ್ಲಾ ತಡೆಗೋಡೆಗಳನ್ನು ಮುರಿದು ಬರುತ್ತಾರೆ. ಅವರಿಗೆ ಆಡಳಿತ ಬದಲಾವಣೆ ಬೇಕಿದೆ. ಈ ಸರ್ಕಾರ ಬೇಡವಾಗಿದೆ ಎಂದು ಹೇಳಿದ್ದಾರೆ.

ರಾಮಲೀಲಾ ಮೈದಾನದಲ್ಲಿ ನಾವು ಪ್ರದರ್ಶಿಸಲಿರುವ ಶಕ್ತಿಯು ಕೇವಲ ಒಂದು ಪಕ್ಷದ್ದಲ್ಲ, ಅದು ಇಡೀ ರಾಷ್ಟ್ರದ ಶಕ್ತಿ. ಇದು ದೇಶದ ಶಕ್ತಿ. ಈ ದೇಶದ ಜನರು ಅಲ್ಲಿರುತ್ತಾರೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಕಣ್ಣಮುಂದೆಯೇ, ದೆಹಲಿಯಲ್ಲಿ ಇಂತಹ ರಾಷ್ಟ್ರಮಟ್ಟದ ಕಾರ್ಯಕ್ರಮಗಳು ಮುಂದೆಯೂ ನಡೆಯುತ್ತಲೇ ಇರುತ್ತವೆ ಎಂದು ತಿಳಿಸಿದ್ದಾರೆ.

Also Read
15 ದಿನಗಳಲ್ಲೇ ಪವಾಡ; ಕಾನ್‌ಸ್ಟೆಬಲ್ ಪರೀಕ್ಷೆಯಲ್ಲಿ ಫೇಲ್​; ವಿಎಒ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ : ಸಿಸಿಟಿವಿ ವೀಕ್ಷಿಸಿದ ಅಧಿಕಾರಿಗಳಿಗೆ ಶಾಕ್ | VAO Exam
ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್

ಮುಂದುವರೆದು, ಪ್ರತಿಭಟನಾ ರ‍್ಯಾಲಿಯಿಂದ ವ್ಯಾಪಾರಿಗಳಿಗೆ ಯಾವುದೇ ನೈಜ ಆತಂಕಗಳಿಲ್ಲ. ಈ ದೇಶದಲ್ಲಿರುವ ಏಕೈಕ ಇಬ್ಬರು 'ವ್ಯಾಪಾರಿಗಳು' ಎಂದರೆ ಮೋದಿ ಜೀ ಮತ್ತು ಶಾ ಜೀ. ಅವರಿಗೆ ಖಂಡಿತವಾಗಿಯೂ ನಷ್ಟವಾಗುತ್ತಿದೆ. ಇಂತಹ ಚಳುವಳಿಗಳಿಂದ ಅವರಿಗೆ ನಷ್ಟವಾಗುವುದಾದರೆ ಆಗಲಿ ಎಂದು ಕಿಡಿಕಾರಿದ್ದಾರೆ.

ಸಂವಿಧಾನಾತ್ಮಕ ಕಾವಲು ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನು ಬಿಟ್ಟುಕೊಟ್ಟಿವೆ ಎಂದಿರುವ ಅವರು, ಭಾರತೀಯ ಚುನಾವಣಾ ಆಯೋಗವು (ECI) ಆಡಳಿತಾರೂಢ ವ್ಯವಸ್ಥೆಯ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮತಗಳನ್ನು ತಿರುಚಿದಾಗ ಮತ್ತು ಸಂಸ್ಥೆಗಳು ಅದನ್ನು ನಿರ್ಲಕ್ಷಿಸಿದಾಗ, ದೇಶದ ಜನ ಬಹಿರಂಗವಾಗಿ ಹೊಣೆಗಾರಿಕೆ ಆಗ್ರಹಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಮತ್ತು ಆಯೋಗವು ಆಡಳಿತ ಪಕ್ಷದ ಕೈಗೊಂಬೆಯಾಗಿ ಕಾರ್ಯನಿರ್ವಹಿಸಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ (ಏಜೆನ್ಸೀಸ್).