ರೈಲಿನಲ್ಲಿ ಒಂದು, ಅಂಬ್ಯುಲೆನ್ಸ್‌ನಲ್ಲಿ ಮತ್ತೊಂದು! ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ: ರೈಲ್ವೆ ಪೊಲೀಸರ ಸಮಯಪ್ರಜ್ಞೆಗೆ ನೆಟ್ಟಿಗರ ಸಲಾಂ! Twin Babies in Indian Railways

ರೈಲಿನಲ್ಲಿ ಒಂದು, ಅಂಬ್ಯುಲೆನ್ಸ್‌ನಲ್ಲಿ ಮತ್ತೊಂದು ಮಗುವಿಗೆ ಜನ್ಮ ನೀಡಿದ ಮಹಿಳೆ!
ರೈಲಿನಲ್ಲಿ ಒಂದು, ಅಂಬ್ಯುಲೆನ್ಸ್‌ನಲ್ಲಿ ಮತ್ತೊಂದು ಮಗುವಿಗೆ ಜನ್ಮ ನೀಡಿದ ಮಹಿಳೆ!
Published on

ಪ್ರಮುಖ ಮುಖ್ಯಾಂಶಗಳು

  • ರೈಲಿನಲ್ಲಿ ಒಂದು, ಅಂಬ್ಯುಲೆನ್ಸ್‌ನಲ್ಲಿ ಮತ್ತೊಂದು ಮಗುವಿಗೆ ಜನ್ಮ ನೀಡಿದ ಮಹಿಳೆ!
  • 15 ನಿಮಿಷ ರೈಲು ನಿಲ್ಲಿಸಿ ಹೆರಿಗೆ ಮಾಡಿಸಿದ ರೈಲ್ವೆ ಪೊಲೀಸರು
  • ರೈಲ್ವೆ ಪೊಲೀಸರ ಸಮಯಪ್ರಜ್ಞೆಗೆ ನೆಟ್ಟಿಗರ ಸಲಾಂ
ಓಡಿಶಾ: ರೂರ್ಕೆಲಾ-ಗುಣಪುರ್ ರಾಜ್ಯರಾಣಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ರೈಲಿನಲ್ಲಿ ಒಂದು ಮಗುವನ್ನು ಹಾಗೂ ಅಂಬ್ಯುಲೆನ್ಸ್​ನಲ್ಲಿ ಇನ್ನೊಂದು ಮಗುವಿಗೆ ಜನ್ಮ ನೀಡಿದ (Twin Babies in Indian Railways) ಘಟನೆ ಓಡಿಶಾದಲ್ಲಿ ವರದಿಯಾಗಿದೆ.
ಜನರಲ್​ ಭೋಗಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಬೆಳಿಗ್ಗೆ ಕಟಕ್​ ನಿಲ್ದಾಣಕ್ಕೆ ರೈಲು ತಲುಪಿದಾಗ ಹೆರಿಗೆ ನೋವು ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ರೈಲ್ವೆ ಪೊಲೀಸರೇ ಹೆರಿಗೆ ಮಾಡಿಸಿದ್ದು ಜನರ ಶ್ಲಾಘನೆಗೆ ಪಾತ್ರವಾಗಿದೆ.

ರೈಲಿನಲ್ಲಿ ಒಂದು; ಅಂಬ್ಯುಲೆನ್ಸ್​ನಲ್ಲಿ ಇನ್ನೊಂದು!

ಕಟಕ್​ ನಿಲ್ದಾಣಕ್ಕೆ ರೂರ್ಕೆಲಾ-ಗುಣಪುರ್ ರಾಜ್ಯರಾಣಿ ಎಕ್ಸ್‌ಪ್ರೆಸ್ ತಲುಪುತ್ತಿದ್ದರೆ ಮಹಿಳೆ ತೀವ್ರ ಹೆರಿಗೆ ನೋವಿನಿಂದ ಬಳಲಿದ್ದಾರೆ. ಕೂಡಲೇ ಭೋಗಿಗೆ ಪ್ರವೇಶಿಸಿದ ಮಹಿಳಾ ರೈಲ್ವೆ ಪೊಲೀಸರು, ಹಾಗೂ ವೈಧ್ಯಕೀಯ ಮಾಹಿತಿಯುಳ್ಳ ವ್ಯಕ್ತಿಯೊಬ್ಬರು ಮಹಿಳೆಗೆ ರೈಲಿನಲ್ಲಿಯೇ ಹೆರಿಗೆ ಮಾಡಿಸಿದ್ದಾರೆ.
ಹೆರಿಗೆ ಮಾಡಿಸುವ ಸಲುವಾಗಿ, ಭೋಗಿ ಸುತ್ತ ಬಟ್ಟೆ ಸುತ್ತಿ 15 ನಿಮಿಷಗಳ ಮಟ್ಟಿಗೆ ರೈಲನ್ನು ಕಟಕ್​ ನಿಲ್ದಾಣದಲ್ಲಿಯೇ ನಿಲ್ಲಿಸಲಾಗಿತ್ತು.
ಹೆರಿಗೆ ನಂತರ ತಾಯಿ ಮತ್ತು ಮಗುವನ್ನು ಅಂಬುಲೆನ್ಸ್​ ಮೂಲಕ ಹತ್ತಿರದ ಎಸ್​ಬಿಸಿ ಆಸ್ಪತ್ರೆಗೆ ರವಾನಿಸಲಾಗುತ್ತಿದ್ದ ಸಂದರ್ಭದಲ್ಲಿ ಮತ್ತೊಮ್ಮೆ ಹೆರಿಗೆ ನೋವು ಕಾಣಿಸಿದ್ದು, ಇನ್ನೊಂದು ಮಗುವಿಗೆ ಅಂಬ್ಯುಲೆನ್ಸ್​ನಲ್ಲಿ ಜನ್ಮ ನೀಡಿದ್ದಾಳೆ. ಈದೀಗ ದೊರೆತಿರುವ ಮಾಹಿತಿ ಪ್ರಕಾರ ಮಹಿಳೆ ಹಾಗೂ ಆಕೆಯ ಅವಳಿ ಮಕ್ಕಳು ಎಸ್​ಬಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಮೂವರು ಆರೋಗ್ಯವಾಗಿದ್ದಾರೆಂದು ತಿಳಿದು ಬಂದಿದೆ.

ರೈಲ್ವೆ ಪೊಲೀಸರಿಗೆ ಸಲಾಂ ಎಂದ ನೆಟ್ಟಿಗರು!

ಈ ಸುದ್ದಿ ಸೋಷಿಯಲ್​ ಮೀಡಿಯಾನಲ್ಲಿ ಹಬ್ಬುತ್ತಿದ್ದಂತೆ ರೈಲ್ವೆ ಪೊಲೀಸರ ಸಮಯಪ್ರಜ್ಞೆಗೆ ನೆಟ್ಟಿಗರಿಂದ ಅಪಾರ ಮೆಚ್ಚುಗೆ ಕೇಳಿಬರುತ್ತಿದೆ. ತುರ್ತು ಪರಿಸ್ಥಿತಿಯನ್ನು ಸರಿಯಾದ ಕ್ರಮದಲ್ಲಿ ಅನುಸರಿಸಿ, ತಾಯಿ ಮತ್ತು ಮಗುವಿನ ಜೀವ ಉಳಿಸಿದ ರೈಲ್ವೆ ಪೊಲೀಸರಿಗೆ ಸಲಾಂ ಎಂದು ಒಬ್ಬ ಬಳಕೆದಾರರು ಅಭಿನಂದನೆ ವ್ಯಕ್ತ ಪಡಿಸಿದ್ದಾರೆ.
ಆ ಮಕ್ಕಳು ತಾವು ಎಲ್ಲಿ ಹುಟ್ಟಿದೆವು ಎಂದು ತಾಯಿಯನ್ನು ಕೇಳಿದರೆ, ಆಕೆ ಒಬ್ಬ ರೈಲಿನಲ್ಲಿ, ಇನ್ನೊಬ್ಬ ಅಂಬ್ಯುಲೆನ್ಸ್​ನಲ್ಲಿ ಎಂದು ಹೇಳುತ್ತಾಳೆಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ಸವಾಲಿನ ಸನ್ನಿವೇಶವನ್ನು ಎದುರಿಸಿದ ರೈಲ್ವೆ ಪೊಲೀಸರು ನಿಜಕ್ಕೂ ಅಭಿನಂದನೆಗೆ ಅರ್ಹರಾಗಿದ್ದಾರೆಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net