ಹೊಸ ವರ್ಷದ ಪಾರ್ಟಿಯಲ್ಲಿ ಬಿರಿಯಾನಿ ಸೇವಿಸಿ ಒಬ್ಬ ಸಾವು, 15 ಮಂದಿ ಅಸ್ವಸ್ಥ! biryani

 biryani
biryani
Published on
ಹೈದರಾಬಾದ್: ( biryani) ಹೊಸ ವರ್ಷದ ಪಾರ್ಟಿಯಲ್ಲಿ ಬಿರಿಯಾನಿ ಸೇವಿಸಿದ ಪರಿಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 15 ಜನರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಬುಧವಾರ ರಾತ್ರಿ ಹೈದರಾಬಾದ್​​ನ ಜಗತ್ಗಿರಿಗುಟ್ಟದಲ್ಲಿ ಈ ಘಟನೆ ನಡೆದಿದೆ.
ಪಾಂಡು ಮೃತ ಯುವಕ. ಈತ ಜಗತ್ಗಿರಿಗುಟ್ಟದ ಭವಾನಿ ನಗರ ನಿವಾಸಿಯಾಗಿದ್ದಾನೆ. ಹೊಸ ವರ್ಷದ ಪಾರ್ಟಿ ಮಾಡಿ ಪ್ರಾಣ ಕಳೆದುಕೊಂಡಿದ್ದಾನೆ.

ನಡೆದಿದ್ದೇನು?:

ಸ್ಥಳೀಯವಾಗಿ ಏರ್ಪಡಿಸಿದ್ದ ಪಾರ್ಟಿಯಲ್ಲಿ ಪಾಂಡೂ ಕೂಡಾ ಭಾಗಿಯಾಗಿದ್ದಾನೆ. ಈ ಪಾರ್ಟಿಯಲ್ಲಿ ಬಿರಿಯಾನಿ ಜೊತೆಗೆ ಮದ್ಯದ ವ್ಯವಸ್ಥೆ ಕೂಡಾ ಇತ್ತು. ಮದ್ಯ ಸೇವಿಸಿ ಬಿರಿಯಾನಿ ತಿಂದ ಪಾಂಡು ವಾಂತಿ ಮಾಡಿಕೊಳ್ಳಲು ಪ್ರಾರಂಭಿಸಿ ಪ್ರಜ್ಞೆ ತಪ್ಪಿದನು. ಆತನ ಸ್ನೇಹಿತರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನೊಪ್ಪಿದ್ದಾನೆ. ಆಹಾರ ಸೇವಿಸಿದ ಇನ್ನೂ 15 ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಲ್ಲಾರೆಡ್ಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆ. ಅಡುಗೆ ಮಾಡುವಾಗ ಬಳಸಿದ ಮಸಾಲೆಗಳು ಮತ್ತು ಮೆಣಸಿನಕಾಯಿಗಳು ಅವಧಿ ಮೀರಿದ ಪ್ಯಾಕೆಟ್‌ಗಳಿಂದ ಹೀಗೆ ಆಗಿರಬಹುದು ಎಂದು ವೈದ್ಯರು ಹೇಳುತ್ತಾರೆ.
ಅವರೆಲ್ಲರೂ ಸ್ವತಃ ಬಿರಿಯಾನಿ ಬೇಯಿಸಿ ತಿಂದಿದ್ದಾರೆ. ಜೊತೆ ಮದ್ಯ ಸೇವನೆ ಮಾಡಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ. ಈ ಕುರಿತಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ನಡೆಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net