"ನಾವು ಸಾಹಿಲ್‌ನನ್ನು ಬೆಳಗ್ಗೆಯೇ ವಿಚಾರಣೆಗೆ ಕರೆಸಿಕೊಂಡಿದ್ದೆವು. ಆತನಿಗೆ ಚೇತನ್ ಚೌಧರಿ ಮೊದಲೇ ಪರಿಚಯವಿದ್ದ ಕಾರಣ, ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಗಂಭೀರ ವಿಷಯಗಳನ್ನು ಆತನ ಸಮ್ಮುಖದಲ್ಲಿ ಕ್ರಾಸ್-ವೆರಿಫೈಮಾಡಿಕೊಳ್ಳಬೇಕಿತ್ತು. ಹೀಗಾಗಿ ಆತನನ್ನು ಸುಮಾರು 10 ಗಂಟೆಗಳ ಕಾಲ ಸತತವಾಗಿ ವಿಚಾರಣೆ ನಡೆಸಿ, ತಡರಾತ್ರಿ ಮನೆಗೆ ಹೋಗಲು ಅನುಮತಿ ನೀಡಲಾಯಿತು ಎಂದು ಲೋನಾವಾಲಾ ಗ್ರಾಮಾಂತರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು, (ಏಜೆನ್ಸೀಸ್).