'ಕೊಲೆಯ ಸ್ಕೆಚ್ ಅವನದ್ದೇ' ಎಂದ ಸಿಯಾ, ಮಾಸ್ಟರ್ ಮೈಂಡ್ ಅವಳೇ' ಎಂದ ಪ್ರೇಮಿ; ಕಸ್ಟಡಿಯಲ್ಲಿ ಮುಂದುವರೆದ ಹೈಡ್ರಾಮಾ!..Ketan murder

Ketan Agarwal Pune murder
Ketan Agarwal Pune murder
Published on

ಪ್ರಮುಖ ಮುಖ್ಯಾಂಶಗಳು

  • ಕೇತನ್​ ಕೊಲೆ ಕೇಸ್​ಗೆ ಸಿಗುತ್ತಿದೆ ದಿನಕ್ಕೊಂದು ತಿರುವು
  • ಕೊಲೆಯ ಮಾಸ್ಟರ್​ ಮೈಂಡ್​ ಯಾರು ಎನ್ನುವ ಬಗ್ಗೆ ಆರೋಪ ಮತ್ತು ಪ್ರತ್ಯಾರೋಪ
  • ಕೇತನ್​ನನ್ನು ಕೊಲ್ಲುವ ಒಂದು ದಿನದ ಹಿಂದೆ ಕೆಫೆಯಲ್ಲಿ ಭೇಟಿಯಾಗಿದ್ದ ಆರೋಪಿಗಳು
ಪುಣೆ: ಕೇತನ್​ ಕೊಲೆ ಕೇಸ್ ಪ್ರಕರಣದಲ್ಲಿ, ಪೊಲೀಸ್​ ಕಸ್ಟಡಿಯಲ್ಲಿರುವ ಪ್ರಮುಖ ಆರೋಪಿ ಸಿಯಾ ಗೋಯೆಲ್​​ ಮತ್ತು  ಚೇತನ್​ ಚೌಧರಿ ವಿಚಾರಣೆಯಿಂದ ಸ್ಫೋಟಕ ಮಾಹಿತಿಗಳು ದಿನದಿಂದ ದಿನಕ್ಕೆ ಸಿಗುತ್ತಿದೆ. ಮದುವೆ ಇಷ್ಟವಿಲ್ಲ ಎಂದಿದ್ದರೂ, ರದ್ದುಪಡಿಸಲು ಕೇತನ್​ ಸಿದ್ಧವಿರಲಿಲ್ಲ ಎನ್ನುವುದು ಒಂದಾದರೆ, ಕೊಲೆ ಮಾಡಲು ಪ್ಲ್ಯಾನ್​ ಕೊಟ್ಟಿದ್ದು ಯಾರು ಎನ್ನುವ ವಿಚಾರಕ್ಕೆ ಇಬ್ಬರು  ಒಬ್ಬರ ಮೇಲೋಬ್ಬರು  ಆರೋಪ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. 

ಓಡಿ ಹೋಗುವ ಪ್ಲ್ಯಾನ್​ ಕೊಲೆಯಲ್ಲಿ ಅಂತ್ಯ

ಮೊದಲು ಓಡಿ ಹೋಗಿ ಮದುವೆ ಮಾಡಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಸಿಯಾಳ ಮನೆತನ ಹಾಗೂ ಶ್ರೀಮಂತಿಕೆ. ಪೋಷಕರ ಗೌರವ ಎಲ್ಲವನ್ನೂ ಪರಿಗಣಿಸಿ ಆ ಯೋಜನೆ ಕೈಬಿಡಲಾಗಿತ್ತು. ಪೋಷಕರ ಸಾಮಾಜಿಕ ಗೌರವಕ್ಕೆ ಧಕ್ಕೆ ಬರಬಹುದು ಎಂಬ ಕಾರಣಕ್ಕೆ ಓಡಿ ಹೋಗೋದು ಬೇಡ ಎಂದು ನಿರ್ಧರಿಸಿದ್ದಳು ಸಿಯಾ.  ಕೇತನ್ ಜೊತೆಗಿನ ಮದುವೆ ಮುರಿದುಕೊಳ್ಳಲು ಸಿಯಾ ಮತ್ತು ಚೇತನ್​ ನಾನಾ ದಾರಿಯನ್ನು ಹುಡುಕಿದರು. ಆದರೆ ಸಾಧ್ಯವಾಗದ ಕಾರಣ, ಅವನನ್ನು ಕೊಲ್ಲುವ ಬಗ್ಗೆ ನಿರ್ಧರಿಸದರು ಎನ್ನಲಾಗಿದೆ. 

ಅವಳೇ ಕೊಲ್ಲಲು ನಿರ್ಧರಿಸಿದ್ದು

ಕೇತನ್​ ಅಗರ್ವಾಲ್​ನನ್ನು ಕೊಲ್ಲೋಕೆ ನಿರ್ಧಾರ ಮಾಡಿದ್ದು ಆಕೆಯದ್ದೇ ಪ್ಲ್ಯಾನ್​ ನಂದಲ್ಲ. ನಾನು ಓಡಿ ಹೋಗಿ ಮದುಬೆ ಮಾಡಿಕೊಳ್ಳೋಣ ಎಂದಿದ್ದೆ. ಆದರೆ, ಮನೆಯ ಗೌರವಕ್ಕೆ ಧಕ್ಕೆ ಬರುತ್ತೆ ಎಂದು ಆಕೆ ಹಿಂದೇಟು ಹಾಕಿದಳು. ಕೊಲ್ಲಲು ಒತ್ತಾಯಿಸಿದಳು ಎಂದು ಸಿಯಾ ಗೋಯೆಲ್​ ವಿರುದ್ಧ ಚೇತನ್​ ಚೌಧರಿ ಆರೋಪಿಸಿದ್ದಾನೆ.

ಸಿಯಾ ಹೇಳಿದ್ದಿಷ್ಟು

ಕೇತನ್​​ನನ್ನು ಕೊಲ್ಲೋಕೆ ಪ್ಲ್ಯಾನ್​ ಕೊಟ್ಟಿದ್ದೇ ಚೇತನ್​ ಚೌಧರಿ. ಜೂನ್​14 ರಂದು ಲೋಹಘಡ್​ ಕೋಟೆಯಲ್ಲಿ ಆತನನ್ನು ಕೊಲ್ಲಲ್ಲು ಹಾಕಿದ್ದ ಪ್ಲ್ಯಾನ್​​ ಫ್ಲಾಪ್​ ಆಗಿತ್ತು. ಆದಿನ ನನ್ನ ಮುಂದೆ ಚೇತನ್​ ಕಣ್ಣೀರು ಹಾಕಿದ್ದ. ಹತಾಶೆ ವ್ಯಕ್ತಪಡಿಸಿದ್ದ, ಕೊಲೆಯ ಮಾಸ್ಟರ್​ಮೈಂಡ್​ ಅವನದ್ದು ನಂದಲ್ಲ ಎಂದು ಸಿಯಾ ಪೊಲೀಸರ ವಿಚಾರಣೆ ವೇಳೆ ಮಾಹಿತಿ ಬಿಚ್ಚಿಟ್ಟಿದ್ದಾಳೆ.
ಕೊಲೆ ಕೇಸ್​ನಿಂದ ಬಚಾವಾಗಲು  ಇಬ್ಬರು ಆರೋಪಿಗಳು ತದ್ವಿರುದ್ಧವಾಗಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಸಿಯಾ ಮತ್ತು ಚೇತನ್​ ಚೌಧರಿಯನ್ನು ಜೂನ್​.29ರವರೆಗೂ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದ ವಿಚಾರಣೆ  ಪ್ರಗತಿಯಲ್ಲಿದೆ. 

ಕೆಫೆಯಲ್ಲಿ ಮೀಟಿಂಗ್​​

 ಕೇತನ್​ನ ಕೊಲ್ಲುವ ಒಂದು ದಿನದ ಮೊದಲು ಚೇತನ್​ ಮತ್ತು ಸಿಯಾ ಗೋಯೆಲ್​ ಇಬ್ಬರು ಪುಣೆಯ ಕೆಫೆ ಒಂದರಲ್ಲಿ ಮೀಟ್​ ಮಾಡಿದ್ದಾರೆ. ಅಲ್ಲಿ ಇಬ್ಬರು ಸೇರಿ ಅಂತಿಮ ಯೋಜನೆಯನ್ನು ರೂಪಿಸಿದ್ದರು.  ಕೋಟೆಯ ಯಾವ ನಿರ್ದಿಷ್ಟ ಪ್ರದೇಶದಿಂದ ತಳ್ಳಬೇಕು ಎನ್ನುವ ಬಗ್ಗೆ  ಚರ್ಚಿಸಿದ್ದರು ಎನ್ನುವ  ಮಾಹಿತಿ ಸಿಸಿಟಿವಿ ಕ್ಯಾಮೆರಾದಿಂದ ಬೆಳಕಿಗೆ ಬಂದಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net