'ಮದುವೆಯಾಗೋಕೆ ಇಷ್ಟವಿಲ್ಲ ಎಂದರೂ ರದ್ದು ಪಡಿಸೋಕೆ ಕೇತನ್ ಸಿದ್ಧನಿರಲಿಲ್ಲ; ಆರೋಪಿ ಸಿಯಾ ಶಾಕಿಂಗ್ ಹೇಳಿಕೆ..Siya Goyal

Ketan Agarwal Pune murder
Ketan Agarwal Pune murder
Published on

ಪ್ರಮುಖ ಮುಖ್ಯಾಂಶಗಳು

  • ಮದುವೆ ಇಷ್ಟವಿಲ್ಲ ಎಂದು ಹೇಳಿದ್ದರೂ ಕೇತನ್ ಮದುವೆ ರದ್ದುಗೊಳಿಸಲು ಒಪ್ಪಿರಲಿಲ್ಲ
  • ಮದುವೆ ರದ್ದುಗೊಳಿಸೋಕೆ ಆಗೋದಿಲ್ಲ, ಎಲ್ಲಿ ತಪ್ಪಿಸಿಕೊಳ್ಳೋಕು ಆಗೋಲ್ಲ ಎಂದಿದ್ದ ಕೇತನ್​
  • ಪೊಲೀಸ್​ ವಿಚಾರಣೆ ವೇಳೆ ಶಾಕಿಂಗ್​ ಹೇಳಿಕೆ ಕೊಟ್ಟ ಪ್ರಮುಖ ಆರೋಪಿ ಸಿಯಾ ಗೋಯಲ್
  • ಜೂನ್ 18 ರಂದು ಕೊಲ್ಲುವ ಪ್ಲಾನ್ ಫೇಲ್ ಆದರೆ, ಪ್ಲಾನ್​ ಸಿ ಕೂಡ ಸಿದ್ದವಾಗಿಟ್ಟುಕೊಂಡಿದ್ದ ಆರೋಪಿಗಳು
ಪುಣೆ: 'ನನಗೆ ಮದುವೆಯಾಗಲು ಇಷ್ಟವಿಲ್ಲ ಎಂದು ನಾನು ಹೇಳಿದ್ದೆ. ಆಗ ಕೇತನ್​ ಹೇಳಿದ್ದು ಹೀಗೆ, ನಮ್ಮ ಕುಟುಂಬ ಅತ್ಯಂತ ಶ್ರೀಮಂತ ಹಾಗೂ ಪ್ರಭಾವಶಾಲಿಯಾಗಿದೆ. ನೀನು ಎಲ್ಲೇ ಓಡಿಹೋಗಲು ಪ್ರಯತ್ನಿಸಿದರೂ ಈ ಮದುವೆಯಿಂದ ನಿನಗೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದ ಎಂದು  ಸಿಯಾ ಗೋಯೆಲ್​​ ಪೊಲೀಸರ ಮುಂದೆ (Ketan Agarwal Pune murder)ವಿರುದ್ಧ ಶಾಕಿಂಗ್​ ಹೇಳಿಕೆ ಕೊಟ್ಟಿದ್ದಾರೆ. 
ಲೋಹಗಢ್ ಕೋಟೆಯಲ್ಲಿ ತನ್ನ ಪ್ರೇಮಿ ಚೇತನ್ ಚೌಧರಿ ಜೊತೆ ಸೇರಿ ನಿಶ್ಚಿತಾರ್ಥವಾಗಿದ್ದ ಉದ್ಯಮಿ ಕೇತನ್ ಅಗರ್ವಾಲ್‌ನನ್ನು ಕೊಲೆ ಮಾಡಿದ ಆರೋಪಿ ಸಿಯಾ ಗೋಯಲ್ ವಿಚಾರಣೆ ವೇಳೆ ಪೊಲೀಸರ ಮುಂದೆ ಮಾಹಿತಿಯನ್ನು ಬಿಚ್ಚಿಟ್ಟಿದ್ದಾಳೆ. ನನಗೆ ಮದುವೆ ಬೇಡ. ಇಷ್ಟವಿಲ್ಲ ಎಂದು ಕೇತನ್‌ಗೆ ತಿಳಿಸಿದ್ದರೂ, ಆತ ಮದುವೆ ರದ್ದುಗೊಳಿಸಲು ಸಿದ್ಧನಿರಲಿಲ್ಲ ಎಂದು ಪ್ರಕರಣ ಪ್ರಮುಖ ಆರೋಪಿ ತಿಳಿಸಿದ್ದಾಳೆ. 

ಸಿಯಾ ಹೇಳಿದ್ದೇನು?

ನಾನು ಚೇತನ್​ನ ಪ್ರೀತಿ ಮಾಡ್ತಿದ್ದೆ. ಹೀಗಾಗಿ ಕೇತನ್​ನ ಮದುವೆ ಮಾಡಿಕೊಳ್ಳಲು ಇಷ್ಟವಿರಲಿಲ್ಲ. ಈ ವಿಚಾರವನ್ನು ನಾನು ಹೇಳಿದ್ದೆ. ಆದರೆ ಆತ ನಮ್ಮದು ಶ್ರೀಮಂತ ಕುಟುಂಬ. ನಾವು ಪ್ರಭಾವಶಾಲಿಗಳು. ನೀನು ಎಲ್ಲೇ ಓಡಿಹೋಗಲು ಪ್ರಯತ್ನಿಸಿದರೂ ಈ ಮದುವೆಯಿಂದ ನಿನಗೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದ ಎಂದು ಸಿಯಾ ಹೇಳಿಕೊಂಡಿದ್ದಾಳೆ. ಸದ್ಯ ಸಿಯಾ ಹೇಳಿಕೆಗಳು ಸದ್ಯಕ್ಕೆ ಕಾನೂನಾತ್ಮಕ ಪರಿಶೀಲನೆ ಹಾಗೂ ನ್ಯಾಯಾಲಯದ ತನಿಖೆಗೆ ಒಳಪಟ್ಟಿವೆ.

ಮದುವೆಗಾಗಿ ಕೋಟಿ ಕೋಟಿ ಖರ್ಚು

ಕೇತನ್ ಮತ್ತು ಸಿಯಾ ಅವರ ನಿಶ್ಚಿತಾರ್ಥವು ಫೆಬ್ರವರಿಯಲ್ಲಿ ನಡೆದಿತ್ತು. ನವೆಂಬರ್‌ನಲ್ಲಿ ಇವರ ಭವ್ಯ ವಿವಾಹಕ್ಕೆ ಸಿದ್ಧತೆ ನಡೆದಿತ್ತು. ಮದುವೆಗಾಗಿ ಜೈಪುರದಲ್ಲಿ ಬರೋಬ್ಬರಿ 17 ಕೋಟಿ ರೂಪಾಯಿ ವೆಚ್ಚದಲ್ಲಿ ಅರಮನೆಯೊಂದನ್ನು ಬುಕ್ ಮಾಡಲಾಗಿತ್ತು. ಅತಿಥಿಗಳನ್ನು ಕರೆತರಲು ಎರಡು ಪ್ರೈವೇಟ್ ಜೆಟ್‌ ವ್ಯವಸ್ಥೆಯನ್ನೂ ಮಾಡಲಾಗಿತ್ತು. 

ಪ್ಲಾನ್​ ಸಿ ಕೂಡ ಇತ್ತು

 ಜೂನ್ 14 ರಂದು ಸಿಯಾ ಕೇತನ್‌ನನ್ನು ಕೋಟೆಗೆ ಕರೆದೊಯ್ದು ತಳ್ಳಿದ್ದಳು. ಆದರೆ ಕೇತನ್ ಕಣಿವೆಯ ಅಂಚಿನಲ್ಲಿದ್ದ ಪೊದೆಯನ್ನು ಹಿಡಿದು ಬದುಕುಳಿದಿದ್ದನು. ಜೂನ್ 18 ರಂದು ಮತ್ತೊಮ್ಮೆ ಆತನನ್ನು ನಂಬಿಸಿ ಕೋಟೆಗೆ ಕರೆತಂದ ಸಿಯಾ, ಈ ಬಾರಿ ತನ್ನ ಪ್ರೇಮಿ ಚೇತನ್‌ನನ್ನೂ ಕರೆಯಿಸಿಕೊಂಡಿದ್ದಳು. ಇಬ್ಬರೂ ಸೇರಿ ಕೇತನ್‌ನನ್ನು ಹಿಂದಿನಿಂದ ಕಣಿವೆಗೆ ತಳ್ಳಿ ಕೊಂದಿದ್ದಾರೆ.ಒಂದು ವೇಳೆ ಜೂನ್ 18 ರ ಪ್ಲಾನ್ ಕೂಡ ಫೇಲ್ ಆಗಿದ್ದರೆ, ಕೇತನ್‌ನನ್ನು ಕೊಲ್ಲಲು ಇವರಿಬ್ಬರು 'ಪ್ಲಾನ್ C' ಅನ್ನು ಕೂಡ ಸಿದ್ಧವಾಗಿಟ್ಟುಕೊಂಡಿದ್ದರು ಎನ್ನಲಾಗಿದೆ.

2,004 ಕಾಲ್‌ಗಳು, 238 ಗಂಟೆಗಳ ಮಾತುಕತೆ!

ಪೊಲೀಸರು ಸಿಯಾ ಮತ್ತು ಚೇತನ್‌ನ ಕಾಲ್ ರೆಕಾರ್ಡ್‌ಗಳನ್ನು ಪರಿಶೀಲಿಸಿದಾಗ ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಕಳೆದ ಏಳು ತಿಂಗಳಲ್ಲಿ ಇವರಿಬ್ಬರು ಬರೋಬ್ಬರಿ 2,004 ಬಾರಿ ಫೋನ್‌ನಲ್ಲಿ ಮಾತನಾಡಿದ್ದು, ಒಟ್ಟು 238 ಗಂಟೆಗಳ ಕಾಲ ಸಂಪರ್ಕದಲ್ಲಿದ್ದರು. 

ಇಬ್ಬರ ಮೇಲೆ ಆರೋಪ ಪ್ರತ್ಯಾರೋಪ

ಸದ್ಯ ಕಸ್ಟಡಿಯಲ್ಲಿರುವ ಇಬ್ಬರು ಆರೋಪಿಗಳು ಒಬ್ಬರ ಮೇಲೆ ಒಬ್ಬರು ಆರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ. ನಾನು ಸಿಯಾಳನ್ನು ಮದುವೆಯಾಗಲು ಬಯಸಿದ್ದೆ ಅಷ್ಟೆ ಕೊಲೆ ಪ್ಲ್ಯಾನ್ ನಂದಲ್ಲ ಎಂದು ಚೇತನ್ ಹೇಳಿದರೆ, ಇನ್ನು ಸಿಯಾ ಚೇತನ್‌ನೇ ಈ ಕೊಲೆಯ ಮಾಸ್ಟರ್‌ಮೈಂಡ್ ಎಂದು ಪೊಲೀಸರ ಮುಂದೆ ಆರೋಪ ಮಾಡಿದ್ದಾಳೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net