ಸಂವಿಧಾನದ ವಿಧಿ 94(ಸಿ) ಅಡಿಯಲ್ಲಿ ನೋಟಿಸ್ ನೀಡುವ ಮೂಲಕ ವಿರೋಧ ಪಕ್ಷಗಳು ತಮ್ಮ ಹಕ್ಕನ್ನು ಚಲಾಯಿಸಿವೆ. ಆದರೆ, ಆಡಳಿತ ಪಕ್ಷವು ಭಾರಿ ಬಹುಮತ ಹೊಂದಿರುವುದರಿಂದ ಈ ನಿರ್ಣಯವು ಸೋಲುವ ಸಾಧ್ಯತೆಯೇ ಹೆಚ್ಚು. ಕೇಂದ್ರ ಸಚಿವ ಕಿರಣ್ ರಿಜಿಜು ಘೋಷಿಸಿದಂತೆ, ಮಾರ್ಚ್ 9 ರಂದು ಈ ಕುರಿತ ಚರ್ಚೆ ಮತ್ತು ಮತದಾನ ನಡೆಯಲಿದೆ. ಇದು ಓಂ ಬಿರ್ಲಾ ಸ್ಥಾನವನ್ನು ನಿರ್ಧರಿಸುವುದಲ್ಲದೆ, ಮುಂಬರುವ ದಿನಗಳಲ್ಲಿ ಸಂಸತ್ತಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಸಂಬಂಧದ ದಿಕ್ಕನ್ನು ನಿರ್ಧರಿಸಲಿದೆ(ಏಜೆನ್ಸೀಸ್).