ಮುಂದುವರೆದು, ಈ ಉದ್ಯಮ ಕನ್ನಡಿಯಿದ್ದಂತೆ, ನೀವು ಏನನ್ನು ನೀಡುತ್ತಿರೋ ಅದೇ ನಿಮಗೆ ಮರಳಿ ಸಿಗುತ್ತದೆ. ಆದ್ದರಿಂದ ಯಾರಾದ್ರೂ ಈ ಸಿನಿಮಾ ರಂಗ ಪ್ರವೇಶಿಸಲು ಬಯಸುತ್ತಿರೋ ದೃಢ ನಿಶ್ಚಯ, ಸಂಕಲ್ಪ ಹಾಗೂ ಕಠಿಣ ಪರಿಶ್ರಮದೊಂದಿಗೆ ಬನ್ನಿ. ಇಲ್ಲಿ ಹುಡುಗಿಯರು, ಹುಡುಗರು ಎಲ್ಲರೂ ಅಭಿವೃದ್ಧಿ ಹೊಂದುತ್ತಾರೆ. ಇದೊಂದು ಉತ್ತಮವಾದ ರಂಗ. ಯಾರಾದರೂ ಸಕ್ಸಸ್ ಆಗದಿದ್ದರೆ, ಅವರಿಗೆ ಕಹಿ ಅನುಭವ ಆಗಿದ್ದರೆ, ಅದು ನಿಮ್ಮದೇ ತಪ್ಪು ಎಂದು ನಾನು ಬಲವಾಗಿ ನಂಬುತ್ತೇನೆ. ನೀವು ಕಟ್ಟು ನಿಟ್ಟಾಗಿ, ಗಂಭೀರವಾಗಿದ್ದರೆ, ಯಾರೂ ನಿಮ್ಮನ್ನು ಬಳಸಿಕೊಳ್ಳಲು ಆಗಲ್ಲ ಎಂದಿದ್ದಾರೆ.