ಮುಂದುವರೆದು ಮಾತನಾಡಿರುವ ಯಾದವ್, ಪಶ್ಚಿಮ ಬಂಗಾಳದಲ್ಲಿ ಜಾರಿಯಲ್ಲಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು ಕೇವಲ ಮತದಾರರ ಪಟ್ಟಿ ತಿದ್ದುವ ಕೆಲಸವಲ್ಲ, ಅದು ಮತದಾರರ ಹೆಸರನ್ನು ಡಿಲೀಟ್ ಮಾಡುವ ಸಂಚು ಎಂದಿದ್ದಾರೆ. ಅಲ್ಲದೆ, ಚುನಾವಣಾ ಆಯೋಗವು ತಟಸ್ಥವಾಗಿರಬೇಕಿತ್ತು. ಆದರೆ ಯುಪಿ, ಬಿಹಾರ ಮತ್ತು ಬಂಗಾಳದ ನಮ್ಮ ಅನುಭವದ ಪ್ರಕಾರ, ಬಿಜೆಪಿಯ ವಿರೋಧಿಗಳ ಮತಗಳನ್ನು ಕಡಿತಗೊಳಿಸಲು ಈ ಪ್ರಕ್ರಿಯೆಯನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.