ಕೆಟ್ಟು ಹೋದ ಲಿಫ್ಟ್..ಕಾಲಿನ ಶಸ್ತ್ರ ಚಿಕಿತ್ಸೆಗೊಳಗಾದ ವೃದ್ಧನಿಗೆ ಮೆಟ್ಟಿಲೇ ಗತಿ; ಇದು ಆರ್ಥಿಕ ನಗರಿ ಮುಂಬೈ ಆಸ್ಪತ್ರೆ ದುಸ್ಥಿತಿ..Mumbai

ಒಂದೊಂದೆ ಮೆಟ್ಟಿಲು ಏರುತ್ತಿರುವ ವೃದ್ಧ
ಒಂದೊಂದೆ ಮೆಟ್ಟಿಲು ಏರುತ್ತಿರುವ ವೃದ್ಧ
Published on: 
  • ಮುಂಬೈನ ಕೆಇಎಂ ಆಸ್ಪತ್ರೆಯ ಲಿಫ್ಟ್ ಕೆಟ್ಟು ಹೋದ ಹಿನ್ನೆಲೆ ಭಾರಿ ಸಮಸ್ಯೆ

  • ಮೂಳೆ ಮುರಿತ, ಅಂಗವಿಕಲರಿಗೆ ಭಾರೀ ಸಮಸ್ಯೆ, ಎಚ್ಚೆತ್ತುಕೊಳ್ಳದ ಸಿಬ್ಬಂದಿ

  • 10 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ ಮುಂಬೈ ಪಾಲಿಕೆ

ಮುಂಬೈ: 78 ವರ್ಷದ ವೃದ್ಧನೊಬ್ಬನ ಕಾಲಿಗೆ ಶಸ್ತ್ರ ಚಿಕಿತ್ಸೆಯಾಗಿದೆ. ನಡೆಯಲಾಗದಷ್ಟೂ ನೋವು..ಲಿಫ್ಟ್​​​​ ಸೌಲಭ್ಯವಿಲ್ಲ. ಒಂದೊಂದೇ ಮೆಟ್ಟಿಲನ್ನು ಕೂತು ಹತ್ತುತ್ತಾ ಗಮ್ಯ ಸ್ಥಾನ ತಲುಪುತ್ತಿರುವ ವಿಡಿಯೋಗಳು ಎಕ್ಸ್​ನಲ್ಲಿ ವೈರಲ್ ಆಗಿದೆ. ರೋಗಿಗಳ ಆರೈಕೆಯಲ್ಲಿರುವ ಲೋಪ ದೋಷದ ಬಗ್ಗೆ ನೆಟ್ಟಿಗರು ಪ್ರಶ್ನಿಸಿದ್ದಾರೆ.

ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ (ಕೆಇಎಂ) ಆಸ್ಪತ್ರೆಯಲ್ಲಿ.. . ಸುಮಾರು ನಾಲ್ಕು ದಶಕಗಳಷ್ಟು ಹಳೆಯದಾದ ಲಿಫ್ಟ್..ಕೆಲ ತಿಂಗಳ ಹಿಂದೆ ಕೈ ಕೊಟ್ಟಿದ್ದ ಕಾರಣ ಪ್ಲ್ಯಾಸ್ಟರ್ ಹಾಕಿ ಬ್ಯಾಂಡೇಜ್ ಹಾಕಿಕೊಂಡಿದ್ದ ವೃದ್ಧ..ಆಸ್ಪತ್ರೆಯ ಒಂದೊಂದೆ ಮೆಟ್ಟಿಲನ್ನು ಕಷ್ಟ ಪಟ್ಟು ಏರುತ್ತಿರುವುದು ವಿಡಿಯೋದಲ್ಲಿ ಇದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ನೆಟ್ಟಿಗರು ಇದರ ನಿರ್ವಹಣೆಯ ಹೊಣೆ ಹೊತ್ತಿರುವ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ, ಜನರ ತೆರಿಗೆ ಹಣ ಏನು ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ತನಿಖೆಗೆ ಆದೇಶ, ನೋಟಿಸ್ ಜಾರಿ

ಇಂಟರ್ನೆಟ್​ನಲ್ಲಿ ವೃದ್ಧನ ವಿಡಿಯೋಗಳು ವೈರಲ್​ ಆಗುತ್ತಲೇ ಎಚ್ಚೆತ್ತ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಆದೇಶಿಸಿದ್ದಾರೆ. 10 ದಿನಗಳಲ್ಲಿ ವರದಿ ನೀಡುವಂತೆ, ಆಸ್ಪತ್ರೆ ಘಟಕದ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗಿದೆ.

Also Read
ವಿದೇಶದಿಂದ ಬಂದವರೇ ಟಾರ್ಗೆಟ್! ಮುಂಬೈ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ನಡೆಯುತ್ತಿದ್ದ ವಂಚನೆ ಬಯಲು, ಮೂವರು ಅರೆಸ್ಟ್! Mumbai Crime
ಒಂದೊಂದೆ ಮೆಟ್ಟಿಲು ಏರುತ್ತಿರುವ ವೃದ್ಧ

ಕೆಲಸ ಮಾಡದ ಲಿಫ್ಟ್..ತನಿಖೆಗೂ ಮೀನಾಮೇಷ

ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ಪ್ರಕಾರ, ದಕ್ಷಿಣ ಮುಂಬೈನ ಪರೇಲ್‌ನಲ್ಲಿರುವ ಆಸ್ಪತ್ರೆಯ ಮೂಳೆ ಚಿಕಿತ್ಸಾ ಕೇಂದ್ರಕ್ಕೆ ತೆರಳಲು, ವೃದ್ಧ ಸಹದೇವ್ ಕದಮ್ ಎಂಬುವವರು ಕಷ್ಟ ಪಡುತ್ತಿರುವ ವಿಡಿಯೋ ಇದೆ. ಇದರಲ್ಲಿ ಸಹದೇವ್ ಕದಮ್, ತಿಳಿ ನೀಲಿ ಬಣ್ಣದ ಶರ್ಟ್, ಶಾರ್ಟ್ಸ್ ಮತ್ತು ಹೆಣೆದ ಟವೆಲ್​ ತಲೆಗೆ ತೊಟ್ಟ ಅವರು, ಬಲಗೈಯನ್ನು ಮೆಟ್ಟಿಲುಗಳ ಮೇಲೆ ಇಟ್ಟು, ಮತ್ತೊಂದು ಕೈ ಮರದ ದಿಂಬಿ ಮೇಲೆ ಇಟ್ಟು ಒಂದೊಂದೆ ಮೆಟ್ಟಿಲು ಇಳಿಯುತ್ತಿರುವುದು ವಿಡಿಯೋದಲ್ಲಿ ಇದೆ. ಹಲವರು ಅವರನ್ನು ದಾಟಿ ಮುಂದೆ ಹೋದರು ಸಹ ಯಾರೂ ಅವರಿಗಾಗಿ ಸಹಾಯ ಮಾಡದಿರುವುದು ವಿಡಿಯೋದಲ್ಲಿ ಇದೆ.

ವೃದ್ಧ ಅಷ್ಟೇ ಅಲ್ಲದೇ ವಿಕಲ ಚೇತನರು, ರೋಗಿಗಳು ಸೇರಿದಂತೆ ಹಲವರು ನಾಲ್ಕು ಮಹಡಿ ಹತ್ತಲಾಗದೆ ಕಷ್ಟ ಪಡುತ್ತಿರುವುದು ತಿಳಿದುಬಂದಿದೆ. ತನಿಖೆಗೆ ಮುಂಬೈ ಪಾಲಿಗೆ ಆದೇಶಿಸಿದ್ದು, ಮುಂದೇನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯ ಲಿಫ್ಟ್ ಕಳೆದ ಆಗಸ್ಟ್‌ನಿಂದ ಕೆಲಸ ಮಾಡದೆ ಇರುವುದು ಕಂಡು ಬಂದಿದೆ. ಫೆಬ್ರವರಿ 2023 ಇದರ ಬದಲಾವಣೆಗೆ ಆದೇಶವನ್ನು ನೀಡಲಾಯಿತು. ಆಸ್ಪತ್ರೆ ಅಧಿಕಾರಿಗಳು ವಿಳಂಬ ಹಾಗೂ ನಿರಾಸಕ್ತಿಯಿಂದಾಗಿ ಸದ್ಯ ರೋಗಿಗಳು ಸಮಸ್ಯೆಯನ್ನು ಎದಿರುಸುತ್ತಿದ್ದಾರೆ.

ನೆಟ್ಟಿಗರು ಏನಂದ್ರು?

ಬಡವರ ಬಂಧುವಂತಿದ್ದ ಕೆಇಎಂ ಆಸ್ಪತ್ರೆಯಲ್ಲಿ ಸದ್ಯ ಲಿಫ್ಟ್ ಕೆಲಸ ಮಾಡುತ್ತಿಲ್ಲ. ರೋಗಿಗಳು ಬಳಲುತ್ತಲೇ ಇದ್ದಾರೆ, ಆಸ್ಪತ್ರೆ ಆಡಳಿತ ನಿದ್ರಿಸುತ್ತಿದೆ ಎಂದು ಒಬ್ಬರು ಕಿಡಿಕಾರಿದ್ದಾರೆ. ಇನ್ನೂ ಕೆಲವರು ಇದು ಸ್ವೀಕಾರಾರ್ಹ ವಿಚಾರವಲ್ಲ. ಒಪಿಡಿ ಲಿಫ್ಟ್ ಒಂದು ಪ್ರಮುಖ ಸೌಲಭ್ಯ..ಈಗ ಇದು ಕೆಲಸ ಮಾಡದೆ ಇರುವುದು ದುರದೃಷ್ಟಕರ ಎಂದು ಕಿಡಿಕಾರಿದ್ದಾರೆ ,(ಏಜೆನ್ಸೀಸ್).