ಅಕ್ಟೋಬರ್ ೨೦೨೫ ರಲ್ಲಿ ಜಾರಿಗೆ ಬಂದ ನಾರ್ವೆ, ಐಸ್‌ಲ್ಯಾಂಡ್ ಸೇರಿದಂತೆ ಇಎಫ್‌ಟಿಎ ದೇಶಗಳೊಂದಿಗಿನ ವ್ಯಾಪಾರ ಒಪ್ಪಂದ ಹಾಗೂ ಇತ್ತೀಚೆಗೆ ಸಹಿ ಹಾಕಲಾದ ಭಾರತ-ಯುರೋಪಿಯನ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದಗಳು ಉಭಯ ದೇಶಗಳ ಬಾಂಧವ್ಯದಲ್ಲಿ ಹೊಸ ಸುವರ್ಣ ಯುಗವನ್ನು ಸೃಷ್ಟಿಸಲಿವೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ನಾರ್ವೆ ಪ್ರಧಾನಿ ಜೊನಾಸ್ ಗಹ್ರ್ ಸ್ಟೋರ್ ಕೂಡ ಮಾತನಾಡಿ, ಯುರೋಪ್ ಮತ್ತು ಮಧ್ಯಪ್ರಾಚ್ಯದಲ್ಲಿ ಯುದ್ಧಗಳು ನಡೆಯುತ್ತಿರುವ ಇಂದಿನ ಅನಿಶ್ಚಿತ ಜಗತ್ತಿನಲ್ಲಿ, ಪ್ರಜಾಪ್ರಭುತ್ವ ದೇಶಗಳ ನಡುವಿನ ಬಲವಾದ ಸಹಕಾರ ಅತಿ ದೊಡ್ಡ ಅಗತ್ಯತೆಯಾಗಿದೆ ಎಂದು ಭಾರತದ ನಿಲುವನ್ನು ಬೆಂಬಲಿಸಿದ್ದಾರೆ,(ಏಜೆನ್ಸೀಸ್).